ಕಲಬುರಗಿ: ಅಯೋಧ್ಯೆಯ ರಾಮಮಂದಿರ ಕುರಿತು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತಿಸುವುದಾಗಿ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ತಿಳಿಸಿದ್ದಾರೆ.
ದೇಶದ ಇತಿಹಾಸದಲ್ಲಿ ಸುದೀರ್ಘ ವಿಚಾರಣೆ ಕಂಡ ಪ್ರಕರಣ ಇದಾಗಿದ್ದು ಇದು ಕೇವಲ ಧಾರ್ಮಿಕ ವಿಷಯವಾಗಿರದೇ ಈ ದೇಶದ ಬಹುಸಂಖ್ಯಾತ ಜನರ ಭಾವನಾತ್ಮಕ ವಿಚಾರವು ಆಗಿತ್ತು. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿರುವುದರಿಂದ ಸಂತೋಷವಾಗುತ್ತಿದೆ. ಜನರು ಕೂಡಾ ಶಾಂತಿ, ಸೌಹಾರ್ದತೆಯಿಂದ ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೋಟ್ಯಾಂತರ ಜನರ ಭಾವನೆಗಳಿಗೆ ಈ ತೀರ್ಪು ಮನ್ನಣೆ ಕೊಟ್ಟಂತಾಗಿದೆ ಹೀಗಾಗಿ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ ನಿರ್ಮಾಣವಾಗುವುದರಿಂದ ರಾಮಾಯಣ ಕಾಲದ ಗತವೈಭವ ಮತ್ತೆ ಮರುಕಳಿಸಲಿದೆ ಎಂದು ಶಾಸಕ ಸುಭಾಷ್ ಆರ್ ಗುತ್ತೇದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.