ಫೋಟೋಗ್ರಾಫರ್ ಸಂಘಟನೆ ಬಲಿಷ್ಠವಾದರೆ ಮಾತ್ರ ಸರಕಾರದ ಸೌಲಭ್ಯ ಪಡೆಯಲು ಸಾಧ್ಯ

0
45

ಕಲಬುರಗಿ: ರಾಜ್ಯದಲ್ಲಿ ಫೋಟೋಗ್ರಾಫರ್ ಸಂಘಟನೆ ಬಲಿಷ್ಠವಾದರೆ ಮಾತ್ರ ಸರಕಾರದ ಪ್ರತಿಯೊಂದು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಫೋಟೋಗ್ರಾಫರ್ ಅಸೋಶಿಯಷನ್ ನ ರಾಜ್ಯಾಧ್ಯಕ್ಷ ಪಿ.ಪರಮೇಶ ಹೇಳಿದರು.

ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಫೋಟೋಗ್ರಾಫರ್ ಅಸೋಶಿಯಷನ್ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಛಾಯಾಗ್ರಹಕರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಫೋಟೋಗ್ರಾಫ್‌ರಗಳು ಸಂಘಟನಾತ್ಮಕವಾಗಿ ಒಂದುಗೂಡಿ ಕೆಲಸ ಮಾಡಿದರೆ ಮಾತ್ರ ಜಿಲ್ಲಾ ಮಟ್ಟದಲ್ಲಿ ಸಂಘಟನೆ ಬಲಿಷ್ಠವಾಗೊಳ್ಳುತ್ತದೆ. ಜಿಲ್ಲಾ ಮಟ್ಟದ ಶಕ್ತಿ ರಾಜ್ಯ ಮಟ್ಟದಲ್ಲಿ ಬಲಿಷ್ಠಗೊಳ್ಳುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರು ಕೈಜೋಡಿಸಿದರೆ ಮಾತ್ರ ಸರಕಾರದಿಂದ ನಮಗೆ ಸಿಗಬೇಕಾದ ಪ್ರತಿಯೊಂದು ಸೌಲಭ್ಯಗಳನ್ನು ನಾವು ಪಡೆಯಲು ಅನುಕೂಲವಾಗುತ್ತದೆ ಎಂದರು. ಜಿಲ್ಲಾ ಫೋಟೋಗ್ರಾಫರ್ ಅಸೋಶಿಯಷನ್ ಪ್ರಧಾನ ಕಾರ್ಯದರ್ಶಿ ಬಸವರಾಜ.ಸಿ ತೋಟದ್ ಮಾತನಾಡಿ, ನಾವು ತೆಗೆದ ಒಂದು ಚಿತ್ರ ಸಾವಿರ ಪದಗಳ ಅರ್ಥ ಕೊಡುತ್ತದೆ. ಒಂದೊಂದು ಚಿತ್ರದಲ್ಲಿಯೂ ಅಷ್ಟೊಂದು ಅರ್ಥಪೂರ್ಣವಾಗಿರುತ್ತವೆ. ಇಂತಹ ಶ್ರೇಷ್ಠವಾದ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವುಗಳು ಬಹಳ ಸುದೈವಿಗಳಾಗಿದ್ದೇವೆ. ಈ ನೆಲೆದ ಇತಿಹಾಸ ಹೊಂದಿರುವ ಭಾವಚಿತ್ರಗಳನ್ನು ನಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರೆ ಅದು ಶಾಶ್ವತವಾಗಿ ಉಳಿಯುತ್ತದೆ. ಅಂತಹ ಬಹು ಎತ್ತರದ ಸ್ಥಾನದಲ್ಲಿ ಫೋಟೋಗ್ರಾಫಿ ಇದ್ದು ಆ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವುಗಳೆಲ್ಲರೂ ಇಂದು ಸಂಘಟಿತರಾಗುವುದು ತುಂಬಾ ಅವಶ್ಯಕತೆಯಿದೆ ಎಂದರು.

ಸರಕಾರದಿಂದ ಹತ್ತು ಹಲವು ಯೋಜನೆಗಳು ಇದ್ದರೂ ಇನ್ನೂಕೂಡ ನಮಗೆ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ಆ ನಿಟ್ಟಿನಲ್ಲಿ ನಾವು ನೀವೆಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತುವ ಕಾರ್ಯ ಮಾಡೋಣ ಎಂದ ಅವರು ಸ್ಟುಡಿಯೋಗಳು ನಡೆಸುವ ಪ್ರತಿಯೊಬ್ಬರು ಲೈಸೆನ್ಸ್ ಮತ್ತು ಸ್ಟುಡಿಯೋದ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯರಿ ಎಂದು ಕರೆ ನೀಡಿದ ತೋಟದ, ಕಲ್ಯಾಣ ಕರ್ನಾಟಕ್ಕೆ ೩೭೧(ಜೆ) ವಿಧಿ ಜಾರಿಯಾಗಿದ್ದು ಅದರಡಿಯಲ್ಲಿ ಸಾಕಷ್ಟು ಅನುದಾನ ಈ ಭಾಗಕ್ಕೆ ಹರಿದು ಬರುತ್ತಿದೆ. ಅದನ್ನು ಪಡೆಯಲು ಪ್ರತಿಯೊಬ್ಬರು ಪ್ರಯತ್ನ ಮಾಡೋಣ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣಬಸಪ್ಪ ಭೂಸನೂರ ಮಾತನಾಡಿ, ಫೋಟೋಗ್ರಾಫಿಯಲ್ಲಿಗ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರೂ ಸಂಘಟನೆ ಇಲ್ಲ ಎನ್ನುವ ನೋವಿದೆ. ನೀವೆಲ್ಲರೂ ಕೂಡಿ ಸಂಘಟನೆ ಬಲಿಷ್ಟಗೊಳಿಸಿದರೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.  ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಬಸವರಾಜ .ಎನ್ ಪಾಟೀಲ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ತೋಟದ್ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಹುಸ್ಮಾನ ಗನಿ, ಸಹ ಕಾರ್ಯದರ್ಶಿಯಾಗಿ ಶರಣು ಕಣ್ಣಿ, ಖಜಾಂಚಿಯಾಗಿ ನಂದಕುಮಾರ ಮತ್ತು ಗುಂಡೇರಾವ್ ಭೂಸನೂರ, ರಾಜಶೇಖರ ಸ್ವಾಮಿ, ಕೃಷ್ಣ ಮಳ್ಳಿ, ರಾಜಶೇಖರ ಹತ್ತೂರೆ, ರಮೇಶ ಗೌಳಿ, ವೆಂಕಟೇಶ ಪುಕಾಳೆ, ಸಂಜಯ ಕೆ ಚವ್ಹಾಣ, ಮಹೇಶ ಮೇಲಕೇರಿ, ಶೇಖ ನಿಯಾಜುದ್ದೀನ್, ಎಂ. ಡಿ ಖಾಜಾಪಟೇಲ್, ಬಸವರಾಜ ಬಿರಾದಾರ, ಮಂಜುನಾಥ ಅವರು ಸದಸ್ಯರಾಗಿ ಅಧಿಕಾರಿ ಸ್ವೀಕರಿಸಿದರು.

ವೇದಿಕೆ ಮೇಲೆ ಫೋಟೋಗ್ರಾಫರ್ ಅಸೋಶಿಯಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ. ಮುರುಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here