ಜಾನಪದ ಸಾಹಿತ್ಯದಲ್ಲಿ ಮಾನವಿಯ ಮೌಲ್ಯವಿದೆ: ಬಿ.ಎನ್.ಪಾಟೀಲ್

0
43

ಸುರಪುರ: ಜಾನಪದ ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಜಾನಪದ ವಿದ್ವಾಂಸರಾದ ಬಿ.ಎನ್ ಪಾಟೀಲ್ ಸಿಂಧಗಿ ಹೇಳಿದರು.

ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಇಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಯಾದಗಿರಿ, ಜಾನಪದ ಕಲಾಲೋಕ ರಂಗಂಪೇಟ ಹಾಗೂ ಬಸವಪ್ರಭು ಜಾನಪದ ಮಹಾವಿದ್ಯಾಲಯ ರಂಗಂಪೇಟ ಸಹಯೋಗದೊಂದಿಗೆ ಆಯೋಜಿಸಿದ್ದ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ವಿದ್ಯಾರ್ಥಿ ಸಮುದಾಯ ಹಾಗೂ ಯುವ ಪೀಳಿಗೆ ಜಾನಪದ ಕಲೆ, ಪರಂಪರೆ ಬಗ್ಗೆ ಹೆಚ್ಚು ಆಳವಾಗಿ ಅಧ್ಯಾಯನ ಮಾಡಬೇಕು ಜೋತೆಗೆ ಜಾನಪದ ಸಾಹಿತ್ಯ ಅಧ್ಯಾಯನದಲ್ಲಿ ಹೆಚ್ಚು-ಹೆಚ್ಚು ತೊಡಗಿಸಿಕೊಂಡಾಗ ನಮ್ಮ ನೇಲ ಮೂಲ ಸಂಸ್ಕೃತಿಯಾದ ಜಾನಪದಪದವನ್ನು ಉಳಿಸಿ ಬೇಳೆಸುವುದರ ಜೋತೆಗೆ ಮುಂದಿನ ಪೀಳಿಗೆಗು ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಇತ್ತಿಚಿಗೆ ರಾಮನಗರದ ಜಾನಪದ ಲೋಕದಲ್ಲಿ ಲೋಕಸಿರಿ ತಿಂಗಳ ಅತಿಥಿಯಾಗಿ ಭಾಗವಹಿಸಿದ್ದ ಕಲಾವಿಧ ಲಕ್ಷ್ಮಣ ಗುತ್ತೆದಾರ ಅವರನ್ನು ಹಾಗೂ ಹಿರಿಯ ಭಜನಾ ಪದಕಾರ ಚಂದಪ್ಪ ಶರಣರು ಕನ್ನೆಳ್ಳಿ ಇವರುಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು, ಕೆಂಭಾವಿ ಹಿರೇಮಠದ ಪೂಜ್ಯ ಚೆನ್ನಬಸವ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿಧ ಶಿವಪ್ಪ ಹೆಬ್ಬಾಳ ಹಾಗೂ ಸುದೀಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಾಯಬಣ್ಣ ಪುರ್ಲೆ ವೇದಿಕೆಮೇಲಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ವಹಿಸಿದ್ದರು. ಈ ಸಂದರ್ಭದಲ್ಲಿ ಜಾನಪದ ಕಲಾವಿದರುಗಳಾದ ಶಿವಪ್ಪ ಹೆಬ್ಬಾಳ ಕೋಡೆಕಲ್, ನಿಂಗಣ್ಣ ತಡಿಬಿಡಿ, ಮಹಾದೇವಪ್ಪ ವಜ್ಜಲ್, ವಿರಸಂಗಮ್ಮ ಅಪ್ಪಗೋಳ್ ಇವರು ಜಾನಪದ ಗಾಯನವನ್ನು ಹಾಗೂ ಬಸವರಾಜ ಮಾರನಾಳ ಸಂಗಡಿಗರು ಹಾಗೂ ನೀಲಮ್ಮ ಬಾಚಿಮಟ್ಟಿ ಸಂಗಡಿಗರಿಂದ ಭಜನಾ ಪದಗಳ ಗಾಯನ ಕಾರ್ಯಕ್ರಮ ನಡೆಯಿತು. ಶ್ರೀಕಾಂತ ರತ್ತಾಳ ಪ್ರಾರ್ಥಿಸಿದರು, ಕಾರ್ಯಕ್ರಮವನ್ನು ಬಿರೇಶ ಕುಮಾರ ದೇವತ್ಕಲ್ ನಿರೂಪಿಸಿದರು, ಬಲಭೀಮ ಪಾಟೀಲ್ ಸ್ವಾಗತಿಸಿದರು, ಲಂಕೇಶ ದೇವತ್ಕಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here