ರಾಯಚೂರು: ಇಂದು ನಗರದಲ್ಲಿ ವಿದ್ಯಾರ್ಥಿ ಫೆಡರೇಷನ್ (SFI), ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (DYFI) ಹಾಗೂ ಕರ್ನಾಟಕ ರಾಜ್ಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿದರರ ಸಂಘ(KSLISGA) ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ಮಾಡಿದರು.
ಇತ್ತೀಚಿಗಿನ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಗ್ರಂಥಾಲಯ, ಗ್ರಂಥಪಾಲಕರ ಕೋರ್ಸ್ ಮತ್ತು ಗ್ರಂಥಪಾಲಕರ ಮಹತ್ವದ ಪಾಲು ಗಣನೀಯವಾಗಿದೆ. ಹೀಗಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ (MLISc) Master in library and information science ವಿಷಯದಲ್ಲಿ ಪದವಿಯನ್ನು ಪಡೆದ ಸಾವಿರಾರು ವಿಧ್ಯಾರ್ಥಿಗಳು ನಿರುದ್ಯೋಗಿಗಳಾಗಿ ಅಲೆದಾಡುತ್ತಿರುವುದು, ಗ್ರಂಥಾಲಯಗಳು ಸಮಸ್ಯೆಗಳ ತವರೂರಾಗಿ ಪರಿಣಮಿಸಿರುವುದು ಹಾಗೂ ಗ್ರಂಥಪಾಲಕರ ಕೋರ್ಸ್ ಮುಚ್ಚುತ್ತಿರುವುದು ತುಂಬಾ ಬೇಸರದ ಸಂಗತಿ ಎಂದು ಆರೋಪಿಸಿದರು.
ರಾಜ್ಯದ ಎಲ್ಲಾ ಶೈಕ್ಷಣಿಕ ಗ್ರಂಥಾಲಯಗಳಲ್ಲಿ ( ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜುಗಳು ಮತ್ತು ವಿವಿಗಳು ಹಾಗೂ ಸಂಶೋಧನ ಸಂಸ್ಥೆಗಳು) ಅಷ್ಟೇ ಅಲ್ಲದೇ ಕರ್ನಾಟಕದ ಎಲ್ಲಾ ಸಾರ್ವಜನಿಕ ಗ್ರಂಥಾಲಯಗಳು ಕಳೆದ 30 ವರ್ಷಗಳಿಂದ ಖಾಲಿ ಇರುವ ಸಾವಿರಾರು ಗ್ರಂಥ ಪಾಲಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗದಿರುವುದರ ಪರಿಣಾಮ ರಾಜ್ಯದಲ್ಲಿ MLISc ಸೇರಿದಂತೆ, ಇತರೆ ಗ್ರಂಥಪಾಲಕರ ಕೋರ್ಸಗೆ ಬೇಡಿಕೆ ಕಡಿಮೆಯಾಗಿ ಗ್ರಂಥಪಾಲಕರ ಕೋರ್ಸ್ ಮುಚ್ಚುವ ಹಂತಕ್ಕೆ ತಲುಪಿದೆ. ಜೊತೆಗೆ ಗ್ರಂಥಪಾಲಕರ ಕೋರ್ಸ್ ಅಭ್ಯಾಸ ಮಾಡಿದ ಸಾವಿರಾರು ವಿದ್ಯಾವಂತ ನಿರುದ್ಯೋಗಿಗಳು ರಾಜ್ಯದಲ್ಲಿ ಇದ್ದಾರೆ. ಪರಿಣಾಮವಾಗಿ ರಾಜ್ಯದಲ್ಲಿ ವಿದ್ಯಾವಂತ ನಿರುದ್ಯೋಗದ ಪ್ರಮಾಣ ಹೆಚ್ಚಳವಾಗಿದೆ ಇದಕ್ಕೆಲ್ಲಾ ಆಳುವ ಸರ್ಕಾರಗಳೇ ನೇರವಾಗಿ ಹೊಣೆಯಾಗಿರುತ್ತವೆ. ಮತ್ತೊಂದು ಕಡೆ ಹೀಗಿರುವ ಸರ್ಕಾರಿ ಗ್ರಂಥಾಲಯಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲವಾಗಿವೆ. ಸರ್ಕಾರದ ಸರಾಸರಿ ಅಂಕಿ ಅಂಶಗಳ ಪ್ರಕಾರ ಆರು ಸಾವಿರಕ್ಕೂ ಅಧಿಕ ಗ್ರಂಥಪಾಲಕರ ಸರ್ಕಾರಿ ಹುದ್ದೆಗಳು ರಾಜ್ಯದಲ್ಲಿ ಖಾಲಿ ಇರುತ್ತವೆ.
ಹಾಗಾಗಿ ರಾಜ್ಯದಲ್ಲಿ ಎಲ್ಲಾ ಇಲಾಖೆಗಳ ಅಡಿಯಲ್ಲಿ ಸ್ಥಾಪಿಸಲ್ಟಟ್ಟಿರುವ ಗ್ರಂಥಾಲಯಗಳಿಗೆ ಶೀಘ್ರವೇ ಗ್ರಂಥಪಾಲಕರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಲು ಜೊತೆಗೆ ಗ್ರಂಥಾಲಯಗಳ ಸುಧಾರಣೆಗೆ ಮುಂದಾಗಬೇಕು ಹಾಗೂ ಜಿಲ್ಲೆಗೊಂದು ಡಿಪ್ಲೊಮಾ ಕೋರ್ಸ್ ಆರಂಭೀಸಬೇಕು, ಗುತ್ತಿಗೆ ಆಧಾರಿತ ನೇಮಕಾತಿ ಕೈ ಬೀಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI), ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (DYFI) ಹಾಗೂ ಕರ್ನಾಟಕ ರಾಜ್ಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿದರರ ಸಂಘ(KSLISGA) ಈ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಮಾಡಿ ಹೋರಾಟದ ಮನವಿಯನ್ನು ಜಿಲ್ಲಾಧಿಕಾರಿ ಗಳ ಮೂಲಕ ಮುಖ್ಯಮಂತ್ರಿ ಯವರಿಗೆ ಕಳುಹಿಸಿ ಕೊಟ್ಟರು.
ಈ ಸಂಧರ್ಭದಲ್ಲಿ SFI ಸಂಘಟನೆಯ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, KSLISGA ಸಂಘಟನೆಯ ರಾಜ್ಯಧ್ಯಕ್ಷರಾದ ಪ್ರೇಮ್ ಕುಮಾರ್, DYFIನ ರಾಜ್ಯ ಸಮಿತಿ ಸದಸ್ಯರಾದ ಶಿವಪ್ಪ ಬ್ಯಾಗವಾಟ್, K.E ಕುಮಾರ್, ಖಂಡರಾದ ರಮೇಶ ವೀರಾಪುರ, ಶಶಿ ಕೆ, ಭೀಮನಗೌಡ ಸುಂಕೇಶ್ಚರಾಳ, ಲಿಂಗರಾಜ ಕಂದಗಲ್, ಬಸವರಾಜ ದೀನಸಮುದ್ರ, ಚಿದಾನಂದ, ಸುರೇಶ ರಾಠೋಡ್, ಧ್ವನಿತ್, ಸ್ವಪ್ನ, ಯಮನೂರಪ್ಪ, ರಮೇಶ ಸೇರಿದಂತೆ ಅನೇಕರಿದ್ದರು.