ವಾಡಿ ವಾರ್ಡ್‌ಗಳ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧ

0
60

ವಾಡಿ: ಪಟ್ಟಣದ ಪುರಸಭೆ ಆಡಳಿತದ ವ್ಯಾಪ್ತಿಗೆ ಬರುವ ಪ್ರತಿಯೊಂದು ವಾರ್ಡ್ ಅಭಿವೃದ್ಧಿಗೆ ಕಾಂಗ್ರೆಸ್ ಆಡಳಿತ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ. ಪ್ರತಿಯೊಂದು ಬಡಾವಣೆಯಲ್ಲೂ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಭರದಿಂದ ಸಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ ಹೇಳಿದರು.

ಪಟ್ಟಣದ ವಾರ್ಡ್ ೧೨ರ ಕ್ಯಾಥೋಲಿಕ್ ಚರ್ಚ್ ಬಡಾವಣೆಗೆ ಮಂಜೂರಾದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ. ಶಾಸಕ ಪ್ರಿಯಾಂಕ್ ಖರ್ಗೆ ಅವರು ವಾಡಿ ನಗರದ ಪ್ರಗತಿಗಾಗಿ ಪ್ರಗತಿ ಕಾಲೋನಿ ಎಂಬ ಹೊಸ ಬಡಾವಣೆಯ ಯೋಜನೆಗೆ ಈಗಾಗಲೇ ಚಾಲನೆ ನೀಡಿದ್ದಾರೆ. ನೂರಾರು ಎಕರೆ ಭೂಮಿ ಖರೀದಿಸಿ ಬಡವರಿಗಾಗಿ ಮನೆಗಳನ್ನು ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಪಟ್ಟಣದ ಚಾಮನೂರ ಮಾರ್ಗದಲ್ಲಿ ಶಿಕ್ಷಣ ವಲಯ ಸ್ಥಾಪನೆಯಾಗುವ ಮೂಲಕ ವಸತಿ ಸಹಿತ ಶಾಲಾ ಕಾಲೇಜುಗಳು ಸ್ಥಾಪನೆಯಾಗಲಿವೆ ಎಂದು ಹೇಳಿದರು.

Contact Your\'s Advertisement; 9902492681

ಸಂತ ಅನ್ನಾಸ್ ಕ್ಯಾಥೊಲಿಕ್ ಚರ್ಚ್‌ನ ಫಾದರ್ ವಿಲ್ಬರ್ಟ್ ಮಾತನಾಡಿ, ಊರಿನಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ವೈಜ್ಞಾನಿಕವಾಗಿಲ್ಲ. ಇದರಿಂದ ಚರಂಡಿಯ ನೀರು ಮುಂದೆ ಹರಿದು ಹೋಗದೆ ವರ್ಷಾನುಗಟ್ಟಲೇ ಒಂದೆಡೆ ಸಂಗ್ರಹವಾಗುತ್ತಿವೆ. ಇದರಿಂದ ಬಡಾವಣೆಯಲ್ಲಿ ದುರ್ವಾಸನೆ ಜತೆಗೆ ಸೊಳ್ಳೆ ಕಾಟ ಹೆಚ್ಚಾಗುತ್ತಿದೆ. ಬಡಾವಣೆಯ ನಿವಾಸಿಗಳು ಮಲೇರಿಯಾ, ಟೈಫಾಯಿಡ್, ಡೆಂಘೀ ರೋಗಕ್ಕೆ ತುತ್ತಾಗುತ್ತಿದ್ದಾರೆ. ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮಕೈಗೊಂಡರೆ ಜನರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸದಸ್ಯರಾದ ದೇವಿಂದ್ರ ಕರದಳ್ಳಿ, ಮಹ್ಮದ್ ಗೌಸ್, ಕಾಂಗ್ರೆಸ್ ಮುಖಂಡರಾದ ಮಹ್ಮದ್ ಅಶ್ರಫ್, ವಿಜಯಕುಮಾರ ಸಿಂಗೆ, ನಾಗೇಂದ್ರ ಜೈಗಂಗಾ, ಮನೀಶ್ ವಾಲಿಯಾ, ಸಾಯಬಣ್ಣ ಲಾಡ್ಲಾಪುರ ಈ ಸಂದರ್ಭದಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here