ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಅನುರಣಿಸಿದ ಮಕ್ಕಳ ಕಲರವ

0
161

ಕಲಬುರಗಿ: ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನವು ನಗರದ ಪರುಷ ಮಠದ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಬುಧವಾರ ಮಕ್ಕಳ ವಿಕಾಸ ವೈಭವ-೨೦೧೯ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ ಸೀತನೂರ ಮಾತನಾಡಿ, ಮಕ್ಕಳ ವಿವೇಕಕ್ಕೆ ಬೆಳಕು ನೀಡುವ, ಸೂಕ್ತ ಪ್ರತಿಭೆಗಳ ಅನಾವರಣಗೊಳಿಸುವ ಇಂತಹ ಕಾರ್ಯಕ್ರಮಗಳು ಉತ್ತಮ‌ ಮಕ್ಕಳ ವೇದಿಕೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಮನ ರಂಜಿಸಿದ ಮಕ್ಕಳು: ಮಕ್ಕಳ ವಿಕಾಸ ವೈಭವ ನಿಮಿತ್ತ ಶಾಲೆಯ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನ ರಂಜಿಸುವಲ್ಲಿ ಯಶಸ್ವಿ ಕಂಡಿತು.

ಮುಖ್ಯ ಅತಿಥಿಗಳಾಗಿದ್ದ ಮಹಿಳಾ ಸಂಘಟಕಿ ಭುವನೇಶ್ವರಿ ಹಳ್ಳಿಖೇಡ, ಹಿರಿಯ ಮುಖಂಡ ಕಲ್ಯಾಣರಾವ ಪಾಟೀಲ ಮಳಖೇಡ, ಮಕ್ಕಳ ವಿಕಾಸ ವೈಭವ ಕಾರ್ಯಾಧ್ಯಕ್ಷ ಶರಣರಾಜ ಛಪ್ಪರಬಂದಿ, ಹಿರಿಯಜೀವಿ ಶಕುಂತಲಾ ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗೆ ಸಾಣೆ ಹಿಡಿದು ಅವರ ಪ್ರೋತ್ಸಾಹ ಮಾಡುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಅದ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ಸಿದ್ರಾಮಪ್ಪ ಉಕಲಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷರಲ್ಲಿದ್ದು, ನೀತಿ ಇಲ್ಲದ ಶಿಕ್ಷಣ ದೇವರಿಲ್ಲದ ಗುಡಿಯಿದ್ದಂತೆ. ನೈತಿಕತೆಯ ಕೊರತೆಯಿಂದಾಗಿ ದೇಶದಲ್ಲಿ ಅರಾಜಕತೆ, ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ ಹೆಚ್ವಾಗುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಕ್ಕಳಲ್ಲಿ ಪ್ರತಿಭೆಯ ಸಾಗರ ಅಡಗಿರುತ್ತದೆ. ಮಕ್ಕಳ ಕನಸಿನ ಲೋಕವನ್ನು ಅನಾವರಣಗೊಳಿಸುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಂತರ ನಡೆದ ಗೋಷ್ಠಿ-೧ರಲ್ಲಿ ಕಥೆ-ನೈತಿಕತೆ ವಿಷಯ ಕುರಿತು ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಪ್ರಸ್ತುತ ಮಕ್ಕಳ ಸಾಹಿತ್ಯದ ಆಮ್ಲಜನಕದ ಸಿಲಿಂಡರ್ ಶಿಕ್ಷಕರ ಕೈಯಲ್ಲಿದ್ದು, ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ನೈತಿಕತೆ ಸಾರುವ ಕಥೆಗಳನ್ನು ಸಾದರಪಡಿಸಬೇಕು ಎಂದು ತಿಳಿಸಿದರು.

ಆರೋಗ್ಯಕ್ಕೆ ಆಪ್ತ ಸಲಹೆ ವಿಷಯ ಕುರಿತು ವೈದ್ಯ ಸಾಹಿತಿ ಡಾ. ಎಸ್.ಎಸ್. ಪಾಟೀಲ ಮಾತನಾಡಿ, ವಿಜ್ಞಾನ ಬೆಳೆದಂತೆ ಔಷಧಿ ಬಳಕೆ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಬದಲಾದ ಜೀವನ ಶೈಲಿಯೇ ಕಾರಣವಾಗಿದೆ. ಅನ್ನ, ಆಹಾರ, ನಿದ್ದೆ ಪ್ರಮಾಣ ಸರಿಯಾದ ಕ್ರಮದಲ್ಲಿ ಇರಬೇಕು ಎಂದು ವಿವರಿಸಿದರು.
ವಿಶೇಷ ಆಹ್ವಾನಿತ ರಾಗಿದ್ದ ಪತ್ರಕರ್ತ ಸಂಗಮನಾಥ ರೇವತಗಾಂವ ಆಶು ಕವಿತೆ ಓದಿ ಮಕ್ಕಳನ್ನು ರಂಜಿಸಿದರು.
ಪ್ರಸಿದ್ಧ ಪ್ರಕಾಶಕ ಬಸವರಾಜ ಕೋನೆಕ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಹ ಕಾರ್ಯದರ್ಶಿ ಶ್ರೀಶೈಲ ಹೊದಲೂರ ವೇದಿಕೆಯಲ್ಲಿದ್ದರು.

ಸಮಾರೋಪ ಭಾಷಣ ಮಾಡಿದ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಹಾಸ್ಯದಲ್ಲಿಯೂ ಅರ್ಥ ಉಂಟು. ಸಮರಸವೇ ಜೀವನ, ವಿರಸವೇ ಮರಣ. ನವರಸಗಳಲ್ಲಿ ಹಾಸ್ಯ ರಸವೂ ಒಂದಾಗಿದ್ದು, ಮಕ್ಕಳು ಹಾಸ್ಯ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಾಧ್ಯಾಪಕ ಡಾ. ವಿಜಯಕುಮಾರ ಪರೂತೆ ಮುಖ್ಯ ಅತಿಥಿಯಾಗಿದ್ದರು. ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಧೂಳಪ್ಪ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು.
ಪರಮೇಶ್ವರ ಶೆಟಕಾರ, ರವೀಂದ್ರ ಭಂಟನಳ್ಳಿ, ಪ್ರಭುಲಿಂಗ ಮೂಲಗೆ, ಪ್ರಭು ಹಾದಿಮನಿ, ಶ್ರೀಕಾಂತಗೌಡ ಪಾಟೀಲ ತಿಳಗೂಳ, ಯೋಗೇಶ ಹಿರೇಮಠ, ಶಿವಾನಂಸ ಮಠಪತಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here