ಯಾದಗಿರಿ: ಶ್ರೀ ಬಸವೇಶ್ವರ ಗಂಜ್ ಹತ್ತಿರ ಇರುವ ಐತಿಹಾಸಿಕ ಸುಪ್ರಸಿದ್ಧ ಮಹತ್ವ ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವ ಡಿಸೆಂಬರ್ ೧೦ ರಿಂದ 12ವರೆಗೆ ಮೂರು ದಿನಗಳ ಕಾಲ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳೊಂದಿಗೆ ನೆರವೇರಲಿದ್ದು ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರ ಸಮೂಹ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸ್ವಚ್ಛತೆ ನೀರು ವಿದ್ಯುತ್ ಮಹಿಳೆಯರಿಗೆ ವಿಶೇಷ ವ್ಯವಸ್ಥೆ ರಸ್ತೆ ಹಾಗೂ ದೇವಸ್ಥಾನಕ್ಕೆ ಬಣ್ಣ ಬಣ್ಣಗಳಿಂದ ಅಲಂಕೃತ ಗೊಳಿಸುವ ಭರದಿಂದ ಸಾಗಿದ್ದು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ದೇವಸ್ಥಾನ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಅಭಿಮಾನಿಗಳ ಬಳಗದ ಪೂರ್ವಭಾವಿ ಸಭೆಯನ್ನು ಕರೆಯಲಾಗುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರಾದ ರಾಜು ಹೆಂದೆ ತಿಳಿಸಿದ್ದಾರೆ.
ಸಮಿತಿಯ ಸದಸ್ಯರುಗಳಾದ ಅಯ್ಯಣ್ಣ ಹುಂಡೇಕಾರ್, ಗಂಗಣ್ಣ ಸಜ್ಜನ್, ನಾಗೇಂದ್ರ ಜಾಜಿ, ಸುಭಾಸ್ ಆಯಾರಕರ್, ಭೀಮಣ್ಣ ಗೌಡ ಕಂಚಲಕಾಯಿ, ಡಾ.ಮಲ್ಲೇಶಪ್ಪ ಅರಿಕೇರಿ, ಶರಣು ಪಸ್ಪೂಲ್, ಶಿವರಾಜ ಅಂಗಡಿ.ಬಂಗಾರೆಪ್ಪ ಅವರು ಕಾರ್ಯಗಳನ್ನು ಪರಿಶೀಲಿಸಿ ಇನ್ನೂ ಹೆಚ್ಚಿನ ವ್ಯವಸ್ಥೆ ಬಗ್ಗೆ ಕಾರ್ಯೋನ್ಮುಖರಾಗಿದ್ದಾರೆ.