ವಿಶ್ವಪರಂಪರೆ ಸಪ್ತಾಹ ಅಂಗವಾಗಿ ಸ್ಮಾರಕಗಳ ದರ್ಶನ

0
34

ಕಲಬುರಗಿ: ವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆ ಕಲಬುರಗಿ ಹಾಗೂ ಕಲಬುರಗಿ ಇನ್‌ಟ್ಯಾಕ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ಮಾರಕ ದರ್ಶನ ಕಾರ್ಯಕ್ರಮದಲ್ಲಿ ಇತಿಹಾಸ ಪ್ರಾಧ್ಯಾಪಕ ಹಾಗೂ ಸಂಶೋಧಕರಾದ ಡಾ.ಎಸ್.ಎಸ್.ವಾಣಿಯವರು ಸ್ಮಾರಕಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿವೆ.

ನಗರದ ಕೈಲಾಸ ನಗರ ಹಾಗೂ ಜಿ.ಆರ್.ಕಾಲೋನಿ ಆಳಂದ ರಸ್ತೆಯಲ್ಲಿರುವ ಬಹಮನಿ ಪ್ರಾರಂಭಿಕ ಸುಲ್ತಾನಗರ ಸಮಾಧಿಗಳಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಹೇಳಿದರು. ಬಹಮನಿ ರಾಜ್ಯದ ಸ್ಥಾಪನೆಗೆ ಕಾರಣಿಭೂತನಾದ ಇಸ್ಮಾಯಿಲ್ ಖಾನ್ (ಮಖ್) ತನಗೆ ಗಂಡು ಮಕ್ಕಳಿಲ್ಲದ ಕಾರಣ ತನ್ನ ನಿಷ್ಠಾವಂತ ಸೇನಾ ನಾಯಕನಾದ ಜಾಫರಖಾನ (ಹಸನ ಖಾನ) ನನ್ನು ಆಯ್ಕೆ ಮಾಡಿ, ಅವನನ್ನೇ ಸುಲ್ತಾನನೆಂದು ಅಧಿಕಾರಕ್ಕೆ ತಂದನು. ಅಲ್ಲಾವುದ್ದೀನ್ ಹಸನ್ ಬಹಮನ್ ಶಹಾ ಎಂಬ ಬಿರುದು ಪಡೆದ ಇತನು ಸುಮಾರು ಹನ್ನೊಂದು ವರ್ಷಗಳ ಕಾಲ (೧೩೪೭-೧೩೫೮) ಅಧಿಕಾರ ಮಾಡಿ ನಿಧನ ಹೊಂದಿದಾಗ ಅವನನ್ನು ಇಲ್ಲೆ ಸಮಾಧಿ ಮಾಡಲಾಯಿತು. ಈ ಸಮಾಧಿ ಹೊರಭಾಗದಿಂದ ಸರಳವಾಗಿದ್ದು, ಅದರ ಒಳಭಾಗದಲ್ಲಿ ಅಲಂಕಾರಕವಾದ ವಿವಿಧ ಬಣ್ಣಗಳ ವರ್ಣಶಿಲೆಗಳನ್ನು ಬಳಸಲಾಗಿತ್ತು, ಇದು ಆ ಸುಲ್ತಾನನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Contact Your\'s Advertisement; 9902492681

ಅದೇ ರೀತಿ ಈ ಪ್ರದೇಶದಲ್ಲಿರುವ ಎರಡನೇಯ ಮಹಮ್ಮದ್ ಶಾಹ ಒಂದನೆ ಮಹಮ್ಮದ ಶಹಾನ ಸಮಾದಿ, ಇದಗಾ ಹಾಗೂ ಇತರ ಸ್ಮಾರಗಳಿಗೆ ವಿದ್ಯಾರ್ಥಿಗಳೊಂದಿಗೆ ಬೇಟಿ ನೀಡಿ ಅವುಗಳ ರಚನೆ ಹಾಗೂ ಸುಲ್ತಾನಗರ ಜೀವನ ಮತ್ತು ಸಾಧನೆಗಳನ್ನು ಮಕ್ಕಳಿಗೆ ಮನ ಮುಟ್ಟುವಂತೆ ಡಾ.ವಾಣಿಯವರು ವಿವರಿಸಿದರು. ಕಾರ್ಯಕ್ರಮದಲ್ಲಿ ವಸ್ತು ಸಂಗ್ರಹಾಲಯ ಇಲಾಖೆಯ ಸಹಾಯಕ ನಿರ್ದೇಶಕ ಶಿವಪ್ರಕಾಶ ಇವರು ಮಾತನಾಡುತ್ತಾ ವಿಶ್ವಪರಂಪರೆಯ ಸಪ್ತಾಹದ ಅಂಗವಾಗಿ ನಮ್ಮ ಇಲಾಖೆಯು ವಿಶೇಷ ಉಪನ್ಯಾಸ, ಸ್ಮಾರಕ ದರ್ಶನ, ಸ್ಮಾರಕಗಳ ಜಾಗ್ರತಿ ಅಭಿಯಾನ, ಫಿರೋಜಾಬಾದ ದರ್ಶನ, ಚಿತ್ರಕಲಾ ಸ್ಪರ್ಧೆಗಳನ್ನು ನಗರದ ವಿವಿಧ ಶಾಲೆ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಲಾಭ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಶಬ್ಬೀರ ಅಹ್ಮದ ಅನ್ವೇಷಕರು, ಪ್ರೊ. ಶರಣಪ್ಪ ಗುಂಡಗುರ್ತಿ, ಶ್ರೀ ನಾರಾಯಣ ಜೋಷಿ, ಪ್ರೊ. ರವಿಕುಮಾರ ಬಿಳವಾರ ಹಾಗೂ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಸನ್‌ರೈಸ್ ಶಾಲೆ ಉಷಾದೇವಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ಆಯ್.ಎಸ್.ಭಜಂತ್ರಿ, ಶಂಕರ ಡೋಣಿ, ಅಶ್ವಿನಿ ಹಾಗೂ ವಸ್ತು ಸಂಗ್ರಹಾಲಯ ಸಿಬ್ಬಂದಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here