ಬಂಡಾಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರ ಆರೋಗ್ಯ ಸ್ಥಿರ:  ಗಣ್ಯರು, ಸಾಹಿತಿಗಳು ಆಸ್ಪತ್ರೆಗೆ ದೌಡು

0
200

ಕಲಬುರಗಿ: ಹಿರಿಯ ಬಂಡಾಯ ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ ಅವರು ಕಳೆದ ಗುರುವಾರ ರಾತ್ರಿಯಿಂದ ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ನಗರದ ಸತ್ಯ ಯುರೋ ಕೇರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

76 ವರ್ಷ ವಯಸ್ಸಿನ ಅವರು ಕಳೆದ 9 ತಿಂಗಳಿಂದ ಕಾಮಾಲೆ ಮತ್ತು ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Contact Your\'s Advertisement; 9902492681

ನಾಡಿನ ಹಿರಿಯ ಸಾಹಿತಿ ಡಾ. ವಾಲೀಕಾರ ಅವರ ಚೇತರಿಕೆ ಯಾಗಲಿ. ಅವರ ಸಾಹಿತ್ಯ ಸೇವೆಯನ್ನು ಯಾರೂ ಮರೆಯಲಾಗದು ಎಂದು ಬಣ್ಣಸಿ, ಆಸ್ಪತ್ರೆಯ ವೈದ್ಯಾಧಿಕಾರಿ ಜೊತೆ ಮಾತನಾಡಿ ಅವರಿಗೆ ಸರಿಯಾದ ಟ್ರೀಟ್ಮೆಂಟ್ ಕೊಡಿ, ಅಗತ್ಯವೆನಿಸಿದರೆ  ಹೈದ್ರಾಬಾದ್, ಬೆಂಗಳೂರು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಇ-ಮೀಡಿಯಾ ಲೈನ್ ಗೆ ತಿಳಿಸಿದರು.

ಅವರ ಶಾಸಕರು, ಶಿಷ್ಯರು, ಸಾಹಿತ್ಯಾಭಿಮಾನಿಗಳು, ಗೆಳೆಯರು ನಿನ್ನೆಯಿಂದ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

ಇಂದು ಬೆಳಗ್ಗೆ ಸಾಹಿತಿ ನಾಡೋಜ ಡಾ. ಗೀತಾ ನಾಗಭೂಷಣ, ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಇತರರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here