ಸಂವಿಧಾನದ ಮೂಲ ಆಶಯಗಳು ಪ್ರತಿಯೊಬ್ಬರಿಗೆ ತಲುಪಬೇಕು: ಡಿ.ಸಿ ಶರತ್ ಬಿ

0
88

ಕಲಬುರಗಿ: ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶದ ಸರ್ವಾಂಗಿಣ ಅಭಿವೃದ್ಧಿಗೆ ಸಂವಿಧಾನದ ಕೊಡುಗೆ ಅಪಾರ. ಸಂವಿಧಾನದ ಮೂಲ ಆಶಯ ಮತ್ತು ಧ್ಯೇಯ ಜನರಿಗೆ ತಲುಪುಬೇಕು. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ಹೇಳಿದರು.

ಸಂವಿಧಾದ ದಿನಾಚರಣೆ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸೋಮವಾರ ನಗರದ ಜಗತ್ ಸರ್ಕಲ್ ವೃತ್ತದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದವರಿಗೆ ಹಮ್ಮಿಕೊಂಡಿದ್ದ ’ಒಂದು ದೇಶ-ಒಂದು ಸಂವಿಧಾನ’ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ಭಾರತ ಒಂದು ಅಖಂಡ ದೇಶವಾಗಿದ್ದು, ದೇಶದ ಸಂವಿಧಾನವೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಪ್ರತಿಯೊಬ್ಬ ಪ್ರಜೆಯೂ ದೇಶದ ಸಂವಿಧಾನದ ಮಹತ್ವ ಅರಿಯಬೇಕು. ಅಲ್ಲದೇ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ಮೂಲ ಉದ್ಧೇಶಗಳು, ಪ್ರತಿ ನಾಗರಿಕನಿಗೆ ನೀಡಲಾದ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಯಬೇಕು ಎಂದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ. ಪರಿಮಳ ಅಂಬೇಕರ್ ಅವರು ಮಾತನಾಡಿ, ಸಂವಿಧಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಹೆಚ್ಚಿನ ರೀತಿಯಲ್ಲಿ ಆಗಬೇಕಿದೆ. ಜಿಲ್ಲಾಡಳಿತದ ನೆರವಿನಿಂದ ಈ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದೆ. ನವೆಂವರ್ ೨೬ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಂವಿಧಾನದ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂವಿಧಾನದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವವುದಲ್ಲದೇ ಹಕ್ಕು, ಕರ್ತವ್ಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಜಾಥಾದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸಿ. ಸೋಮಶೇಖರ್, ಶಿಷ್ಠಾಚಾರ ತಹಶೀಲ್ದಾರ್ ಪ್ರಕಾಶ್ ಚಿಂಚೋಳಿಕರ್ ಸೇರಿದಂತೆ ಗುಲಬರ್ಗಾ ವಿಶ್ವವಿದ್ಯಾಲಯದ ಸಿಬ್ಬಂದಿಗಳು, ನಗರದ ಪಿ.ಯ.ಸಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here