ಬೆಳಗಾವಿ: ವಾಲೀಕಾರ ನೆನೆದು ಕಣ್ಣೀರಿಟ್ಟ ಬರಗೂರ

0
108

ಬೆಳಗಾವಿ: ಸೋಮವಾರ ಬೆಳಗಾವಿಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಿಂದ ಅಗಲಿದ ಹಿರಿಯ ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಎಲ್ಲ ಸರ್ವಾಧಿಕಾರಿಗಳಿಗಿಂತ ದೊಡ್ಡ ಸರ್ವಾಧಿಕಾರಿ ಸಾವು. ಬೇರೆ ಸರ್ವಾಧಿಕಾರಿಗಳನ್ನು ಸೋಲಿಸ್ತೀವಿ ಆದರೆ ಸಾವನ್ನು ಸೋಲಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಸಾಯಿಸುವಂತ ಸಾವಿಗೆ ಸಾವಿಲ್ಲ ಹೀಗಾಗಿ ಚೆನ್ನಣ್ಣ ವಾಲೀಕಾರರಿಗೆ ಸಾವಿದೆ ಚೆನ್ನಣ್ಣನ ಸಾಹಿತ್ಯಕ್ಕೆ ಸಾವಿಲ್ಲ ಎಂದು ಮಾತನಾಡುತ್ತಲೇ ಚೆನ್ನಣ್ಣನ್ನು ನೆನೆದು ನಾಡೋಜ ಬರಗೂರು ರಾಮಚಂದ್ರಪ್ಪ ಕಣ್ಣೀರಿಟ್ಟರು.  ಸೋಮವಾರ ಮಧ್ಯಾಹ್ನ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಏರ್ಪಡಿಸಿದ್ದ “ಚೆನ್ನಣ್ಣ ವಾಲೀಕಾರ್ ಅವರ ಶೃದ್ಧಾಂಜಲಿ ಸಭೆ”ಯಲ್ಲಿ  ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಚೆನ್ನಣ್ಣ ವಾಲೀಕಾರ್ ಅವರು ಸಾಹಿತ್ಯ ರಚನೆಯಲ್ಲಿ ಅನೇಕ ಹೊಸಬಗೆಯ ಪ್ರಯೋಗಗಳನ್ನು ಮಾಡಿದರೂ ಮನುಷ್ಯ ಸಂಬಂಧವನ್ನೇ ಪ್ರತಿಪಾದಿಸುತಿದ್ದರು.

Contact Your\'s Advertisement; 9902492681

ಸಾಹಿತ್ಯ ಮತ್ತು ಸಮಾಜದಲ್ಲಿ ಮನುಷ್ಯ ಸಂಬಂಧದ ಸಂವೇದನೆ ಬಹಳ ಮುಖ್ಯ. ಬಹಳಷ್ಟು ಲೇಖಕರು ಸಿದ್ದಾಂತವನ್ನು ಸೆರೆಮನೆ ಮಾಡಿಕೊಂಡಿದ್ದರೂ ಅವರು ತಾವು ನಂಬಿದ ಸಿದ್ದಾಂತದ ಸೆರೆಮನೆಯಲ್ಲಿರಲ್ಲ, ಸಿದ್ದಾಂತದ ವಿಷಯದಲ್ಲಿ ಮೀರುವಿಕೆಯಿತ್ತು, ಜಡವಾಗದ ಸಂವೇದನೆಯಿತ್ತು. ಟೀಕೆಗಳನ್ನು ಸ್ವಾಗತಿಸಿ ಆನಂದಿಸುತ್ತಿದ್ದ ಚೆನ್ನಣ್ಣ ಬರವಣಿಗೆಯನ್ನು ತಪಸ್ಸಿನಂತೆ ಮಾಡುತ್ತಿದ್ದರು. ಅವರು ಚಳುವಳಿ ಮತ್ತು ಮನುಷ್ಯ ಸಂಬಂಧಕ್ಕಿರಬೇಕಾದ ಸಂಬಂಧವನ್ನು ತೋರಿಸಿಕೊಟ್ಟಂತ ರೂಪಕವಾಗಿದ್ದರು ಎಂದು ಅವರ ವ್ಯಕ್ತಿತ್ವವದ ಹಲವು ನಿದರ್ಶನಗಳನ್ನು ವಿವರಿಸಿದರು.

ಬಂಡಾಯ ಸಾಹಿತಿಗಳಾದ ಸರಜೂ ಕಾಟ್ಕರ್, ಸತೀಶ್ ಕುಲಕರ್ಣಿ, ಟಿ. ಆರ್. ಚಂದ್ರಶೇಖರ್ ಅಗಲಿದ  ವಾಲೀಕಾರ್ ಅವರ ಸಾಹಿತ್ಯ ಮತ್ತು ಮಾನವೀಯ ಅಂತಃಕರಣದ ಕುರಿತು ಮಾತನಾಡಿದರು. ಹಿರಿಯ ಸಾಹಿತಿಗಳಾದ ರಾಘವೇಂದ್ರ ಪಾಟೀಲ, ಡಿ. ಎಸ್. ಚೌಗಲೆ, ರಾಮಕೃಷ್ಣ ಮರಾಠೆ, ಸಿ. ಕೆ  ನಾವಲಗಿ, ಎಸ್. ಎಸ್. ಅಂಗಡಿ, ಎ. ಎ. ಸನದಿ, ಸಿದ್ದಗಂಗಮ್ಮಾ, ಆಶಾ ಕಡಪಟ್ಟಿ, ನದೀಮ್ ಸನದಿ ಕಾರ್ಮಿಕ ಚಳುವಳಿಯ ಮುಖಂಡರಾದ ಜಿ. ವಿ. ಕುಲಕರ್ಣಿ, ಎಲ್. ಎಸ್. ನಾಯಕ್ ಅಧ್ಯಾಪಕರುಗಳಾದ ಪಿ. ನಾಗರಾಜ್, ಶೋಭಾ ನಾಯಕ, ಶಂಕರ್  ಬಾಗೇವಾಡಿ,ಅಡಿವೆಪ್ಪ ಇಟಗಿ, ಮಲ್ಲಿಕಾರ್ಜುನ ಲೋಕಳೆ, ಮಹೇಶ್ ಢಾಲೆ, ಬಿ. ಎನ್ ಕಸಾಳೆ, ಅತೀಶ್ ಢಾಲೆ, ಸಂತೋಷ್ ನಾಯಕ  ವಿದ್ಯಾರ್ಥಿ ಮುಖಂಡರಾದ ಬಾಲಕೃಷ್ಣ ನಾಯಕ, ಮಂಜುನಾಥ ಪಾಟೀಲ, ಅನೀಲ್ ನಡೂವಿನಕೇರಿ, ಸೈದಪ್ಪ ಹಿರೇಮನಿ, ಹನುಮಂತ ಯರಗಟ್ಟಿ, ಸುನೀಲ್ ನಾಟೀಕಾರ್, ಸಚಿನ್ ಮಾಳಗೆ, ಧರ್ಮಣ್ಣ ಮಾದರ, ನಿಂಗಪ್ಪ ಮಸ್ತಿ, ಶಿವರಾಜ್ ಗಸ್ತಿ, ಸಾಗರ್ ನಾಯಕ, ನಕುಶಾ, ನಿಖಿತಾ ಭೈರಣ್ಣವರ, ಗೋಪಿಕಾ ಹೇರಗೆ, ಬೇಬಿ ಕುತಿಜಾ, ಬಾಳವ್ವ ಶಿವನಾಯಕರ, ಭೀಮಾರತಿ ಕುಂದರಗಿ ಮುಂತಾದವರು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಚೆನ್ನಣ್ಣ ವಾಲೀಕಾರ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮೌನ ಆಚರಿಸಲಾಯಿತು. ಹೋರಾಟದ ಹಾಡುಗಾರ್ತಿ ಕಾವೇರಿ ಬುಕ್ಯಾಳಕರ ಅವರು ಚೆನ್ನಣ್ಣ ವಾಲೀಕಾರ್ ಅವರು ಬರೆದ ‘ ನೀ ಹೋದ ಮರುದಿನ’ ಹಾಡು ಹಾಡಿ ಚಾಲನೆ ನೀಡಿದರು. ಸಂಘಟಕ, ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here