ಸಂವಿಧಾನದ ಉಳಿವಿಗಾಗಿ ಸಂಘಟಿತರಾಗಲು ಶಿವಸುಂದರ ಸಲಹೆ

0
131

ಕಲಬುರಗಿ: ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಾವೆಲ್ಲರೂ ಹೋರಾಡುವ ಸ್ಥಿತಿ ಬಂದೊದಗಿದೆ. ಹಣಕ್ಕಾಗಿ ನಮ್ಮತನವನ್ನೇ ಮಾರಿಕೊಳ್ಳುತ್ತಿದ್ದೇವೆ. ಸಂವಿಧಾನದ ಆಶಯಗಳನ್ನು ಇಂದಿನ ಯುವ ಜನತೆಗೆ ತಿಳಿಸುವ ಅವಶ್ಯಕವಿದೆ ಎಂದು ಖ್ಯಾತ ವಿಚಾರವಾದಿ ಶಿವಸುಂದರ ವಿಶೇಷ ಉಪನ್ಯಾಸ ನೀಡಿ ಹೇಳಿದರು.

ಅವರು, ನಗರದ ಕನ್ನಡ ಭವನದಲ್ಲಿ ರಿಪಬ್ಲಿಕ್ ಯುಥ್ ಫೆಡರೇಷನ್ ವತಿಯಿಂದ ಸಂವಿಧಾನ ಸಮರ್ಪಣೆ ದಿನದಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಪ್ರಸ್ತುತ ಸಾಮಾಜಿಕ ಸನ್ನಿವೇಶವನ್ನೇ ಪ್ರೇಕ್ಷಕರ ಕಣ್ಣೆದುರೇ ತಂದು ನಿಲ್ಲಿಸಿದರು.

Contact Your\'s Advertisement; 9902492681

ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಅವರು, ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾನತೆಯ ಸಂಕೇತವಾದ ಭಾರತದ ಸಂವಿಧಾನ ವಿಶ್ವದಲ್ಲೇ ಅತೀ ದೊಡ್ಡದಾದ ಸಂವಿಧಾನವಾಗಿದೆ. ಅಂಥ ಸಂವಿಧಾನದ ರಕ್ಷಣೆಗಾಗಿ ಇಂದು ನಾವೆಲ್ಲರೂ ಕಂಕಣಬದ್ಧರಾಗಬೇಕಿದೆ. ಇಂದು ನಾವು ಶಿಕ್ಷಣ ಪಡೆದುಕೊಂಡು, ಅಸಮಾನತೆಯ ವಿರುದ್ಧ ಹೋರಾಡುವ ಮೂಲಕ ಸಂಘಟಿತರಾಗಬೇಕಿದೆ. ಇದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವೂ ಅದೇ ಆಗಿತ್ತು.  ಅಂಥ ಮಹಾತ್ಮರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಪೂಜ್ಯ ಸಂಘಾನಂದ ಬಂತೇಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಸಂಘಟಕ ಹಣಮಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಧುರೀಣ ವಿಠ್ಠಲ ದೊಡ್ಮನಿ, ವೈಚಾರಿಕ ಚಿಂತಕ ವಿಜಯಕುಮಾರ ತೇಗಲತಿಪ್ಪಿ, ಪಾಲಿಕೆ ಮಾಜಿ ಸದಸ್ಯ ರಾಜಕುಮಾರ ಕಪನೂರ, ನ್ಯಾಯವಾದಿಗಳಾದ ಸಂಗರಾಜ ವಾಲೀಕರ, ನಾಗೇಂದ್ರ ಜವಳಿ, ಹೋರಾಟಗಾರ ದಿನೇಶ ದೊಡ್ಡಮನಿ, ಸಂತೋಷ ಮೇಲಿನಮನಿ, ಟ್ರಾಫಿಕ್ ಸಿಪಿಐ ರಮೇಶ ಕಾಂಬಳೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳು, ಚಿಂತಕರು, ಯುವ ಸಮೂಹ ಉಪಸ್ಥಿತರಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಡಿ.ಬಡಿಗೇರ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here