ಪ್ರಜೆಗಳು ಹಕ್ಕುಗಳ ಜೊತೆಗೆ ಕರ್ತವ್ಶಗಳನ್ನು ಪಾಲಿಸಬೇಕು: ಡಾ.ಜಿ. ರಾಮರೆಡ್ಡಿ

0
164

ಕಲಬುರಗಿ: ಸಂವಿಧಾನ ನೀಡಿರುವ ಹಕ್ಕುಗಳನ್ನು ತೆಗೆದುಕೊಂಡರೆ ಸಾಲದುˌ ಪ್ರಜೆಗಳು ತಮ್ಮ ಜವಾಬ್ದಾರಿಗಳನ್ನು ಸಹ ಪಾಲಿಸಬೇಕು ಎಂದು ಹೈದ್ರಾಬಾದ ಉಸ್ಮಾನಿಯ ವಿಶ್ವವಿದ್ಶಾಲಯದ ರಾಜ್ಶಶಾಸ್ರ್ತ ವಿಭಾಗದ ಹಿರಿಯ ಪ್ರಾಧ್ಶಾಪಕ ಡಾ.ಜಿ.ರಾಮರೆಡ್ಡಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಶಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಒಂದು ದೇಶ ಒಂದು ಸಂವಿಧಾನ’ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಶ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ ಎಲ್ಲ ಹಕ್ಕುಗಳು ಕಸಿದುಕೊಳ್ಳಲಾಗಿತ್ತು. ಈಗ ನಮ್ಮ ಮನಸ್ಸನ್ನು ಬೇರೆ ಕಡೆ ಒಯ್ಯುವ ಶಕ್ತಿಗಳು ಹುಟ್ಟಿಕೊಂಡಿವೆ ಎಂದರು. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮಾನವೀಯ ಮೌಲ್ಶಗಳು ಅಳವಡಿಸಿ ವಿಶ್ವದ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ ಎಂದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಶರತ್ ಬಿˌ ಸಂವಿಧಾನ ಜೀವನದ ಕ್ರಮವಾಗಿದೆ. ದೇಶದ ಆರ್ಥಿಕˌ ಸಾಮಾಜಿಕˌ ರಾಜಕೀಯ ಅಧಿಕಾರಗಳನ್ನು ನೀಡಿದ ಸಂವಿಧಾನ ಸರ್ವರಿಗೂ ಸಮಬಾಳು ನೀಡಿದೆ ಎಂದರು.

Contact Your\'s Advertisement; 9902492681

ಒಂದು ದೇಶ ಒಂದು ಸಂವಿಧಾನದ ಸಂಚಾಲಕ ಹಾಗೂ ಕೇಂದ್ರಿಯ ವಿಶ್ವವಿದ್ಶಾಲಯದ ನಿಕಟಪೂರ್ವ ಕುಲಸಚಿವ ಪ್ರೊ.ಚಂದ್ರಕಾಂತ ಎಂ ಯಾತನೂರ ಮಾತನಾಡಿˌ ಸಂವಿಧಾನದ ಮೂಲ ತತ್ವಗಳು ಮತ್ತು ಆಶಯಗಳನ್ನು ಯಾರಿಂದಲೂ ಬದಲಾಯಿಸಲು ಸಾಧ್ಶವಿಲ್ಲ. ಸಂವಿಧಾನ ಬದಲಾವಣೆಯ ಹೇಳಿಕೆಗಳು ಅಪ್ರಸ್ತುತ. ಜಗತ್ತಿನ ಎಲ್ಲ ಸಂವಿಧಾನಗಳ ಆಯುಷ್ಶ 8ರಿಂದ 32 ವರ್ಷಗಳಿಗೆ ಮುಗಿದು ಹೋಗಿದೆ. ಆದರೆ ಭಾರತ ಸಂವಿಧಾನ ಮಾತ್ರ 70 ವರ್ಷಗಳಾದರೂ ಉಳಿದಿದ್ದರೆ ಅದರ ಗಟ್ಟಿತನ ಮತ್ತು ಬಾಬಾ ಸಾಹೇಬರ ಮುಂದಾಲೋಚನೆಯೇ ಕಾರಣ. ಕೇಂದ್ರ ಸರಕಾರ 370ನೇ ಕಲಂ ರದ್ದು ಮಾಡಿ ಜಮ್ಮುಕಾಶ್ಮೀರದ ಪ್ರತ್ಶೇಕ ಸಂವಿಧಾನ ತೆಗೆದು ಹಾಕಿದ್ದು ಒಳ್ಳೆಯ ಬೆಳವಣಿಗೆ. ದೇಶಕ್ಕೆ ಒಂದೇ ಸಂವಿಧಾನ ಇದು ಯಾರಿಂದಲೂ ಬದಲಿಸಲು ಸಾಧ್ಶವಿಲ್ಲ ಎಂದರು.

ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಕೂಡ ಅದನ್ನು ಜಾರಿ ಮಾಡುವ ಜಾಗದಲ್ಲಿ ಒಳ್ಳೆಯ ಜನಪ್ರತಿನಿಧಿಗಳು ಇಲ್ಲದಿದ್ದರೆ ಸಂವಿಧಾನ ವಿಫಲವಾಗುತ್ತದೆ ಎಂದು ಹೇಳಿದ ಮಾಜಿ ರಾಷ್ರ್ಟಪತಿ ಆರ್.ವೆಂಕಟರಮಣ ಅವರ ಮಾತನ್ನು ಇದೇ ಸಂದರ್ಭದಲ್ಲಿ ಯಾತನೂರ ಉಲ್ಲೇಖಿಸಿದರು. ಮತ್ತು ಪ್ರೊ.ಪರಿಮಳಾ ಅಂಬೇಕರ್ ಅಧ್ಶಕ್ಷತೆ ವಹಿಸಿದ್ದರು. ಪ್ರೊ.ಜಿ. ಶ್ರೀರಾಮಲು ಮುಖ್ಶಅತಿಥಿಗಳನ್ನು ಪರಿಚಯಿಸಿದರು. ಕುಲಸಚಿವ ಪ್ರೊ.ಸಿ.ಸೋಮಶೇಖರˌ ಮೌಲ್ಶಮಾಪನ ಕುಲಸಚಿವ ಪ್ರೊ.ಸಂಜೀವಕುಮಾರ ಕೆ.ಎಂˌ ಪತ್ರಿಕೊದ್ಶಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿ ಪ್ರೊ.ಡಿ.ಬಿ.ಪಾಟೀಲˌ ವಿತ್ತಾಧಿಕಾರಿ ಪ್ರೊ.ವಿಜಯˌ ಜಿ.ಪಂ ಮುಖ್ಶ ಕಾರ್ಯನಿರ್ವಾಹಕ ಅಧಿಕಾರಿ ಪಿ.ರಾಜಾˌ ಕಾಲೇಜು ಶಿಕ್ಷಣ ಇಲಾಖೆಯ ಡಾ.ಶ್ರೀಶಕುಮಾರˌ ಕೆಪಿಇ ಸಂಸ್ಥೆಯ ಕಾರ್ಯದರ್ಶಿ ಮಾರುತಿರಾವ ಡಿ ಮಾಲೆ ಭಾಗವಹಿಸಿದ್ದರು. ಸ್ವಾತಂತ್ರ ಹೋರಾಟಗಾರರಾದ ಶಿವಲಿಂಗಪ್ಪ ಪಾಟೀಲˌ ಬಾಬುರಾವ ದೇಶಮಾನೆ ಅವರನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here