ಊಟದಲ್ಲಿ ಪಿನ್ ನುಂಗಿದ ಮಗು ಸಾವು

0
90

ಕಲಬುರಗಿ: ಇಲ್ಲಿನ ಸೇಡಂ ತಾಲೂನಿನ ಹಯ್ಯಾಳ್ ಗ್ರಾಮದಲ್ಲಿ ಮಗು ಒಂದು ಊಟ ಮಾಡುವಾಗ ಪಿನ್ ನುಂಗಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಸ್ವಪ್ನಾ(8) ಮೃತ ಬಾಲಕಿ. 22 ರಂದು ಘಟನೆ ಸಂಭವಿಸಿದ್ದು, ಮನೆಯಲ್ಲಿ ಊಟ ಮಾಡುವಾಗ ಊಟದಲ್ಲಿ ಪಿನ್ ಬಂದಿದ್ದು ಹಂಗೆ ನುಂಗಿದ್ದಳು ಎಂದು ತಿಳಿದುಬಂದಿದ್ದು, ಬಾಲಕಿ ಕೂಡಲೇ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಸ್ಥಳಿಯ ವೈದ್ಯರ  ಆದೇಶದ ಮೇರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Contact Your\'s Advertisement; 9902492681

ವೈದ್ಯರು ಆಪರೇಷನ್ ಮಾಡಿ ಪಿನ್ ತೆಗೆದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬಾಲಕಿ ಮೃತಪಟ್ಟಿದ್ದಾಳೆ. ಈ ಕುರಿತು ಕುರಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here