ಬಯಲು ಗ್ರಂಥಾಲಯ 19ನೇ ವಾರ್ಷಿಕೋತ್ಸವ

0
136

ಕಲಬುರಗಿ: ಓದುವ ಹವ್ಯಾಸ ಹೆಚ್ಚಿಸುವ ಹಿನ್ನಲೆಯಲ್ಲಿ ನಗರದ ಸಾರ್ವಜನಿಕ ಉದ್ಯಾನವದಲ್ಲಿ ಆರಂಭಿಸಲಾಗಿರುವ ಬಯಲು ಗ್ರಂಥಾಲಯದ ೧೯ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಇಂದು ಮಂಗಳವಾರ ಸರಳವಾಗಿ ನೆರವೇರಿಸಲಾಯಿತು.

ನಗರದ ಪತ್ರಕರ್ತರು, ಸಾರ್ವಜನಿಕರ ಸಹಕಾರದೊಂದಿಗೆ ಹಿರಿಯ ಪತ್ರಕರ್ತ ಸುಭಾಷ್ ಬಣಗಾರ್ ಅವರು ೨೦೦೦, ನವೆಂಬರ್ ೨೬ರಂದು ಈ ಬಯಲು ಗ್ರಂಥಾಲಯವನ್ನು ಆರಂಭಿಸಿದ್ದರು. ಇದು ಭಾರತದ ಮೊದಲ ಬಯಲು ಗ್ರಂಥಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಇದೇ ಮಾದರಿಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನ ಜೆಪಿ ಪಾರ್ಕ್, ಕೇಂದ್ರ ಸ್ಥಾನದಲ್ಲಿರುವ ಜಿಲ್ಲೆ ದಾವಣಗೆರೆಯ ಜಯದೇವ ಉದ್ಯಾನವನದಲ್ಲಿ, ರಾಯಚೂರು, ಯಾದಗಿರಿ ಸೇರಿದಂತೆ ವಿವಿಧೆಡೆ ಹಲವಾರು ಕಡೆ ಬಯಲು ಗ್ರಂಥಾಲಯ ಪ್ರಾರಂಭಿಸಲಾಗಿದೆ. ಕಲಬುರಗಿಯ ತಿಲಕನಗರ ಉದ್ಯಾನವನದಲ್ಲೂ ಕಳೆದ ೧೦ ವರ್ಷಗಳಿಂದ ಬಯಲು ಗ್ರಂಥಾಲಯ ನಡೆದುಕೊಂಡು ಬರುತ್ತಿದೆ.

Contact Your\'s Advertisement; 9902492681

ಇತ್ತಿಚಿನ ಟಿವಿ. ಮೊಬೈಲ್, ವಾಟ್ಸ್‌ಪ್, ಫೇಸ್‌ಬುಕ್, ಟಿಕ್‌ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿರುವ ಮನರಂಜನಾತ್ಮಕ, ವಿಡಂಬನಾತ್ಮಕ ವಿಷಯ, ಚಿತ್ರಗಳಿಂದಾಗಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಯುವಕರು ಸೇರಿದಂತ ಎಲ್ಲಾ ವಯೋಮಾನದವರಲ್ಲೂ ಓದುವ ಹವ್ಯಾಸ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇವುಗಳ ಬಳಕೆಯಿಂದ ನಮಗೆ ತಾತ್ಕಾಲಿಕ ಮನರಂಜನೆ ಸಿಗುತ್ತದೆ ವಿನಃ ಏನೂ ಲಾಭ ಇಲ್ಲ. ಇದರಿಂದ ನಷ್ಟವೇ ಹೆಚ್ಚು. ಇದರಿಂದ ಹೊರಬರಬೇಕು. ಓದು ಒಕ್ಕಾಲು ಬುದ್ದಿ ಮುಕ್ಕಾಲು ಎಂಬಂತೆ ನಮ್ಮ ಬುದ್ದಿ ಅಂದರೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಓದುವುದು ಅವಶ್ಯವಾಗಿದೆ. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಬಯಲು ಗ್ರಂಥಾಲಯ ಆರಂಭಿಸಲಾಗಿದೆ.

ಬಯಲು ಗ್ರಂಥಾಲಯದಲ್ಲಿ ದಿನ ಪತ್ರಿಕೆಗಳ ಜೊತೆಗೆ ಸಾಮಾನ್ಯ ಜ್ಞಾನ ಬೆಳೆಸುವ ವಾರಪತ್ರಿಕೆ, ಮಾಸಿಕ ಪತ್ರಿಕಗಳು ಬೆಳಗಿನ ಜಾವ ಓದಲು ಲಭ್ಯ ಇರುತ್ತವೆ. ಸಾರ್ವಜನಿಕರು ಬೆಳಗಿನ ಜಾವ ವಾಯುವಿಹಾರದ ನಂತರ ಇಲ್ಲಿಗೆ ಬಂದು, ಇವುಗಳನ್ನು ಓದುವ ಮೂಲಕ ಓದುವ ಹವ್ಯಾಸ, ನಿಮ್ಮ ಸಾಮಾನ್ಯ ಜ್ಞಾನವನ್ನು ಬೆಳಸಿಕೊಳ್ಳಬೇಕೆಂದು ಮನವಿ ಮಾಡಿದರು.

ಬಯಲು ಗ್ರಂಥಾಲಯ ೨೦ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನಲೆಯಲ್ಲಿ, ಓದುವ ಹವ್ಯಾಸ ಹೆಚ್ಚಿಸುವ ಹಿನ್ನಲೆಯಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಬಣಗಾರ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಾಗಪ್ಪ ರೋಣದ, ಬಸವರಾಜ್ ಪಾರಾ, ರವಿಕುಮಾರ್ ಬಣಗಾರ್, ಮಲ್ಲಿಕಾರ್ಜುನ ಜಿವಣಗಿ, ರಾಹುಲ್, ಶಂಕರ್ ಬೊಮ್ಮನಹಳ್ಳಿ, ರಾಕೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here