ಬಬಲಾದ ಶ್ರೀಮಠದಲ್ಲಿ ಶಿವಾನುಭವಗೋಷ್ಠಿಯ

0
46

ಕಲಬುರಗಿ: ದೌರ್ಬಲ್ಯಕ್ಕೆ ಪರಿಹಾರ ಅದರ ಕುರಿತು ಆಲೋಚಿಸುವುದಲ್ಲಾ ಆದರೆ ಶಕ್ತಿಯನ್ನು ಕುರಿತು ವಿಚಾರ ಮಾಡುವುದು ಜನರಿಗೆ ಅವರಲ್ಲಿರುವ ಶಕ್ತಿಯ ವಿಚಾರವಾಗಿ ಜಾಗೃತ ಮಾಡುತ್ತಿರುವ ಶ್ರೀಮಠದ ಕಾರ್ಯ ಶ್ಲಾಘನೀಯ ಎಂದು ಕಣ್ಣೂರ ಸರಕಾರಿ ಶಾಲೆಯ ಶಿಕ್ಷಕರಾದ ಸಂಗಮೇಶ ಕೊಪ್ಪರದ ಹೇಳಿದರು.

ಸೋಮವಾರ ನಗರದ ಭವಾನಿನಗರದಲ್ಲಿರುವ ಬಬಲಾದ ಶ್ರೀಮಠದಲ್ಲಿ ನಡೆದ ಶಿವಾನುಭವಗೋಷ್ಠಿಯ ೭೭ನೇ ಮಾಲಿಕೆಯಲ್ಲಿ ಉಪನ್ಯಾಸ ನೀಡುತ್ತಾ ಇಂದಿನ ದಿನಮಾನಗಳಲ್ಲಿ ಮನುಷ್ಯ ಹಣ ಗಳಿಸುವದರೊಂದಿಗೆ ಶ್ರೀಮಂತನಾಗುತ್ತಿದ್ದಾನೆ ಆದರೆ ಸಂಸ್ಕಾರ, ಶಾಂತಿ, ಸಮಾಧಾನ ಕಳೆದುಕೊಂಡು ಅತೃಪ್ತಿಯ ಬದುಕು ಸಾಗಿಸುತ್ತಿದ್ದಾನೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ವಿಶೇಷ ಪ್ರವಚನ ನೀಡಿದ ಈ ಭಾಗದ ಪ್ರವಚನ ಪಟುಗಳಾದ ಸಂಗಮೇಶ ಶಾಸ್ತ್ರೀ ಮಾಶಾಳ ಮಾತನಾಡುತ್ತಾ ಶರಣರು ನಡೆ-ನುಡಿ ಒಂದಾಗಿಸಿಕೊಂಡು ಜೀವನ ನಡೆಸಿ ಅಮರರಾಗಿದ್ದಾರೆ ಆದರೆ ನಾವು ನಡೆ-ನುಡಿ ಒಂದಾಗಿಸಿ ಜೀವನ ನಡೆಸದೆ ಸಮಾಜ ಅಧೋಗತಿಗೆ ಸಾಗುತ್ತಿದೆ. ಶಾಂತಿ, ಸಮೃದ್ಧಿ, ಜೀವನಕ್ಕೆ ಶರಣ ಸಂತರ ವಿಚಾರಗಳು ಉತ್ತಮ ಜೀವನಕ್ಕೆ ದಾರಿದೀಪವಾಗುತ್ತವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ನೇಮಕಾತಿಗೊಂಡ ಬಸವರಾಜ ಜೋಗೂರ ಅವರನ್ನು ಗೌರವಿಸಲಾಯಿತು. ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ನಿರೂಸಿದರು, ಸಂಚಾಲಕರಾದ ಸಂಗಮೇಶ ಹೂಗಾರ ಸ್ವಾಗತಿಸಿದರು, ಧನರಾಜ ಸಣಮನಿ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದಶಿ ಸಂಗಮೇಶ ಹೂಗಾರ, ಅಣ್ಣಪ್ಪ ಅಪಚಂದ, ಶಿವಕುಮಾರ ಗಣಜಲಖೇಡ, ಜಗನ್ನಾಥ ಸಜ್ಜನ ಸೇರಿದಂತೆ ಶ್ರೀ ಮಠದ ಅನೇಕ ಭಕ್ತರೂ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here