ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆಯ ಹೈದ್ರಾಬಾದ ಕರ್ನಾಟಕ ಕ್ಷೇತ್ರದ ವ್ಯಾಪಾರಿ ಘಟಕದ ಅಧ್ಯಕ್ಷರನ್ನಾಗಿ ವಿಜಯ ರೆಡ್ಡಿ ಅವರನ್ನು ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಶಿವರಾಮೇಗೌಡರ ಅವರು ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ತಮ್ಮ ವ್ಯಾಪ್ತಿಯಲ್ಲಿ ಸಂಘಟನೆಯನ್ನು ಕ್ರೀಯಾಶೀಲರಾಗಿ ಮುನ್ನಡೆಸಿಕೊಂಡು ಹಾಗೂ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದೇ ತಮ್ಮ ಜವಾಬ್ದಾರಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಮುಂದುವರೆಯಬೇಕೆಂದು ಆದೇಶ ಪತ್ರದಲ್ಲಿ ರಾಜ್ಯಾಧ್ಯಕ್ಷ ಹೆಚ್.ಶಿವರಾಮೇಗೌಡ ಅವರು ಆದೇಶಿಸಿದ್ದಾರೆ.