ಕಲಬುರಗಿ: ನಗರದ ಎಚ್.ಸಿ.ಜಿ.ಕ್ಯಾನ್ಸರ್ ಆಸ್ಪತ್ರೆ ಕಲಬುರಗಿ ಹಾಗೂ ಜಿ ನಗರ ಸಂಚಾರಿ ಪೊಲೀಸ ಸಂಯೋಗದೊಂದಗೆಇಂದುಆಸ್ಪತ್ರೆಯಲ್ಲಿ ಶ್ವಾಸಕೋಶಕ್ಯಾನ್ಸರ್‌ಜಾಗೃತಿಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಡಾ. ಶಾಂತಲಿಂಗ ನಿಗ್ಗುಡಗಿ ಮಾತನಾಡಿ ವ್ಯಕ್ತಿಒಂದು ಸಿಗರೇಟ ಸೇದಿದರೆಆತನಆಯಸ್ಸು ೧೧ ನಿಮಿಷ ಕಡಿಮೆಯಾಗುತ್ತಿದೆ, ಧೂಮಪಾನ ಮಾಡುವುದರಿಂದ ಪ್ರತಿ ಹತ್ತುಜನರಲ್ಲಿಆರು ಮಂದಿಗೆ ಶ್ವಾಸಕೋಶಕ್ಯಾನ್ಸರ್ ಬರುತ್ತಿದೆ. ಕ್ಯಾನ್ಸರ್‌ಆರಂಭಿಕ ಮಟ್ಟದಲ್ಲಿದರೆ ಪೂರ್ಣವಾಗಿಗುಣಪಡಿಸಲು ಸಾದ್ಯವಿದೆ. ಜನರಿಗೆಕ್ಯಾನ್ಸರ್‌ಗಿಂತಅದರ ಬಗ್ಗೆ ಇರುವ ಭಯವೆದೊಡ್ಡಅಪಯಾಕಾರಿಎಂದು ತಿಳಿಸಿದರು.
ಡಾ. ನಂದಿಶಕುಮಾರಜೀವಣಗಿಅವರು ಮಾತನಾಡಿ ಕಳೆದ ಕೆಲವು ವರ್ಷಗಳಿಂದ ಧೂಮಪಾನಗಳಲ್ಲದವರಲ್ಲಿ ಕೂಡ ಶ್ವಾಸಕೋಶದಕ್ಯಾನ್ಸರ್ ಹೆಚ್ಚುತ್ತಿರುವ ಪ್ರಕರಣಗಳು ಕಂಡಿದೆ. ಹೆಚ್ಚುತ್ತಿರುವ ವಾಯುಮಾಲಿನ್ಯವುಒಂದುಕಾರಣವೆಂದು ಸೂಚಿಸುತ್ತಿದೆ. ವಾಹನ ಹೋರಸೋಸುವಿಕೆಯರೂಪದಲ್ಲಿ ನಿರಂತರವಾಗಿ ಹಾನಿಕಾರಕ ವಾಗಿದೆ. ಎಂದು ತಿಳಿಸಿದರು.
ನಗರದಕಠಿಣ ಪರಿಶ್ರಮದ ಸಂಚಾರಿ ಪೊಲೀಸ ಸಿಬ್ಬಂದಿಯವರಿಗೆ ಶ್ವಾಸಕೋಶದಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಹೆಚ್.ಸಿ.ಜಿ. ಘಟಕ ಪೊಲೀಸ ಸಿಬ್ಬಂದಿಗಳಿಗೆ ಮಾಲಿನ್ಯವಿರೋಧಿ ಮಾಸ್ಕ ವಿತರಿಸುವುದರಜೊತೆಗೆ ನಮ್ಮ ವೈದ್ಯರೊಂದಿಗೆ ಶ್ವಾಸಕೋಶಕ್ಯಾನ್ಸರ್ ಬಗ್ಗೆ ಸಮಾಲೋಚನೆ ಮಾಡಿಅರಿವು ಮೂಡಿಸಲಾಯಿತು. ಹೆಚ್.ಸಿ.ಜಿ.ಆಸ್ಪತ್ರೆಯ ವತಿಯಿಂದ ಬರುವದಿನಗಳಲ್ಲಿ ಜಿಯಎ ಬಸ ನಿಲ್ದಾಣಗಳಲ್ಲಿ ಶ್ವಾಸಕೋಶಕ್ಯಾನ್ಸರ್ ಬಗ್ಗೆ ಧ್ವನಿವರ್ಧಕ ಪ್ರಕಟಣೆ ಮೂಲಕ ಇದರ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಹೆಚ್.ಸಿ.ಜಿ.ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಡಾ. ಶರಣ ಹತ್ತಿಆಸ್ಪತ್ರೆಯ ಸಿ.ಓ.ಓ., ಡಾ. ಶಶಿಧರ ಮೂಲಿಮನಿ, ಶ್ರೀ ವೀರೇಶ, ಸಹಾಯಕ ಪೊಲೀಸ ಆಯುಕ್ತರು, ಕಲಬುರಗಿ ಹಾಗೂ ಶ್ರೀ ರಮೇಶ ಕಾಂಬಳೆ, ಪೋಲಿಸ ಇನ್ಸಪೇಕ್ಟರ್ ಸಂಚಾರಿ, ಕಲಬುರಗಿ, ಹಾಗೂ ಮಾರ್ಕೇಟಿಂಗ್ ವಿಭಾಗದ ಸಿಬ್ಬಂದಿಗಳಾದ ಮಹೇಶ ಮಳಖೇಡ, ವೀರೇಶಕಿರಣಗಿ, ಮಹ್ಮದ ಸೈಯದ್‌ಅಲಿ, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಂಚಾರಿ ಪೊಲೀಸ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದರು.