ಕಲಬುರಗಿ: ಎಚ್‌ಕೆಆರ್‌ಡಿಬಿ ಮ್ಯಾಕ್ರೊ ಯೋಜನೆ ಅಡಿ ನಗರದ ವಾರ್ಡ್ ನಂ.೩೦ ರ ಜಯನಗರದಲ್ಲಿ ರೂ.75 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಭಾನುವಾರ ಚಾಲನೆ ನೀಡಿದರು.
ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಸಿಸಿ ರಸ್ತೆಗೆ ಚಾಲನೆ ನೀಡಿ ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ವಾಹನ ಸವಾರರಿಗೂ ಅನುಕೂಲವಾಗಲಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಪ್ರತಿಪಕ್ಷದ ಮಾಜಿ ನಾಯಕ ಆರ್.ಎಸ್.ಪಾಟೀಲ್, ಬಡಾವಣೆಯ ಮುಖಂಡರಾದ ಡಾ.ಕೆ.ಎಸ್.ವಾಲಿ, ಹಣಮಂತರಾವ ಪಾಟೀಲ್, ಉದಯಕುಮಾರ ರೆಷ್ಮಿ, ಅಮಿತ ಚುಡಗುಪ್ಪಿ, ಶಿವಾನಂದ ಮಹಾಜನ್, ಬೋಗಶೇಟ್ಟಿ ಮಾಸ್ಟರ್, ಚಂದ್ರಶೇಖರ ತಳ್ಳಳ್ಳಿ, ಪಿಡಬ್ಲ್ಯೂಡಿಎಇಇ ಮಲ್ಲಿಕಾರ್ಜುನ ಮುದ್ದಾ, ಎಇ ಕಾಳಪ್ಪ, ನಾರಾಯಣರಾವ, ಮುಖಂಡರಾದ ಮಹಾದೇವ ಬೇಳಮಗಿ, ಶಾಂತು ದುಧನಿ, ಶ್ರೀನಿವಾಸ ದೇಸಾಯಿ, ವೀರಭದ್ರಪ್ಪ ಇದ್ದರು.