ಕಲಬುರಗಿ: ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸೇರಿದಂತೆ ಅನೇಕ ಸಮಸ್ಯೆಗಳ ಬಗೆಹರಿಸಲು ಸರಕಾರಗಳ ಹಾಗೂ ಕನ್ನಡ ವಿರೋಧಿಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಸಂಘೆನಗೆ ಯುವ ಹೋರಾಟಗಾರರು ಕರವೇಯಲ್ಲಿ ಸೇವೆ ಮಾಡುತ್ತಿರುವ ಜಿಲ್ಲಾ ಅಧ್ಯಕ್ಷರಾದ ಗೋಪಾಲ್ ನಾಟೀಕಾರ ಅವರನ್ನು ಕಲ್ಯಾಣ ಕರ್ನಾಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಹಾಗೂ ನಗರ ಅಧ್ಯಕ್ಷರಾಗಿದ್ದ ಮಾರುತಿ ಕಮ್ಮಾರ ಅವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಸರ್ವಾನು ಮತದಿಂದ ಆಯ್ಕೆ ಮಾಡಲಾಗಿದೆ ವೇದಿಕೆಯ ಅಧ್ಯಕ್ಷ ಡಾ. ಶರಣು ಬಿ. ಗದ್ದುಗೆ ಅವರು ಆದೇಶ ಹೊರಡಿಸಿದ್ದಾರೆ.
ಸಂಘಟನೆಯನ್ನು ಬಲಿಷ್ಠಗೊಳಿಸಲು ಪ್ರಾಮಾಣಿಕವಾಗಿ ನಾಡಸೇವೆ ಮಾಡಬೇಕೆಂದು ಈ ಮೂಲಕ ಆದೇಶ ಹೊರಡಿಸಲಾಗಿದೆ.