ಕಲಬುರಗಿ: ನಗರದ ಬಾಖರ್ ಫಂಕ್ಷನ್ ಹಾಲ್ ವೃತ್ತದ ಹತ್ತಿರ ಬೀದಿ ನಾಯಿ ಹಾವಳಿಗೆ 4 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ವೇಳೆ ಸಂಭವಿಸಿದೆ.
ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ತಾಹೇರ್ ಅಲಿ, ಸೇರಿದಂತ ಇನ್ನೂ ಮೂವರ ಮೇಲೆ ಹಲ್ಲೆ ನಡೆಸ ಘಾಯಾಗೊಳಿಸಿದೆ ಎಂದು ತಿಳಿದುಬಂದಿದೆ. ಇಂದು ಸಂಜೆ ಬಸವೇಶ್ವರ ಹಾಗೂ ಬಾಖರ್ ವೃತ್ತದಲ್ಲಿ ಶಾಲೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಮೇಲೆ ನಾಯಿ ಹಲ್ಲೆ ನಡೆಸುತ್ತಿದಗ ತಾಹೇರ್ ಅಲಿ ನಾಯಿಯನ್ನು ಹೊಡೆದು ಓಡಿಸುವ ಪ್ರಯತ್ನ ನಡೆಸಿದರು.
ಈ ಸಂದರ್ಭದಲ್ಲಿ ತಾಹೇರ್ ಅಲಿ ಕಾಲು ಜಾರಿ ಬಿದ್ದಿರುವಾಗಿ ನಾಯಿ ಅವರ ಕೈ ಬೆರಳಿಗೆ ಕಚ್ಚಿರುವುದರಿಂದ ಬೆರಳು ಕಟ್ಟಾಗಿದ್ದು ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡಯುತ್ತಿದ್ದು, ಇನ್ನೂ ಉಳಿದವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸುಮಾರು ನಾಲ್ಕು ಜನರ ಮೇಲೆ ಬೀದಿ ದಾಳಿ ಮಾಡಿದ್ದು, ಅದರಲ್ಲಿ ಒಬ್ಬರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮನೆಗೆ ತೆರಳುತ್ತಿಗ ಘಟನ ಸ್ಥಳದಲ್ಲಿ ಅವರ ಮೇಲೆ ಕೂಡ ನಾಯಿ ಅಟ್ಯಾಕ್ ಮಾಡಿದೆ ಇಂತಹ ಘಟನೆಗಳಿಗೆ ಕಲಬುರಗಿ ಮಹಾನಗರ ಪಾಲಿಕೆ ನಿರ್ಲ್ಯಕ್ಷವೆ ಇದಕ್ಕೆ ಕಾರಣ. – ಮೊಹ್ಮದ್ ತಾಹೇರ್ ಅಲಿ, ಕಾಂಗ್ರೆಸ್ ಮುಖಂಡ
ಇದ್ದಕ್ಕೂ ಮುನ್ನಾ ಬೆಳಿಗ್ಗೆ ನಗರದ ಖ್ವಾಜಾ ಬಂದಾ ನವಾಜ್ ದರ್ಗಾದ ವಾಚ್ ಮ್ಯಾನ ಅವರ ಮೇಲೇ ಕೂಡಾ ನಾಯಿ ಧಾಳಿ ಮಾಡಿದ್ದೆ ಎಂದು ತಳಿದಬಂದಿದ್ದು. ನಗರದಲ್ಲಿ ಇಂತ ಪ್ರಕರಣಗಳು ನಡೆಯುತ್ತಿರುವುದ್ದು ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮನೆಗೆ ಸುರಕ್ಷಿತವಾಗಿ ತಲುಪುವುದು ಕಷ್ಟವಾಗಿದೆ. ಅಲ್ಲೇ ಮನೆಯಿಂದ ಆಚೇ ಬರಲು ಭಯಾಪಡೆಯುವಂತಹ ವಾತವಾರಣ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಮಹಾನಗರ ಪಾಲಿಕೆ ಸಮರ್ಪಕವಾಗಿ ಕೆಲಸ ಮಾಡದಕಾರಣ ಜನರಿಗೆ ಈ ರೀತಿ ತೊಂದರೆಯಾಗುತ್ತಿದೆ ಎಂದು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ, ಜನರಿಗೆ ಪಾಲಿಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.