ಆಳಂದ: ೧೨ನೇ ಶತಮಾನದಲ್ಲಿ ಬಸವಣ್ಣನವರು ಕೈಗೊಂಡ ಸಾಮಾಜಿಕ ಸಮಗ್ರ ಕ್ರಾಂತಿಯ ನಂತರ ಮಹಾರಾಷ್ಟ್ರದ ಮೂಲಕ ಮಹಾತ್ಮಾ ಜ್ಯೋತಿಭಾ ಫುಲೆ ಅವರು ಅದನ್ನು ಮುಂದುವರೆಸುವ ಮೂಲಕ ಶೋಷಿತ ಸಮುದಾಯಕ್ಕೆ ಧ್ವನಿಯಾದವರು ಎಂದು ಜಗದ್ಗುರು ತೋಂಟದಾರ್ಯ ಅನುಭವ ಮಂಟಪ, ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಉಮರಗಾ ರಸ್ತೆಯ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ, ವಿದ್ಯಾಪೀಠದ ಆವರಣದಲ್ಲಿ ಬುದವಾರ ಹಮ್ಮಿಕೊಂಡ ಮಹಾತ್ಮಾ ಜ್ಯೋತಿಭಾ ಫುಲೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸತ್ಯ ಶೋಧಕ ಸಮಾಜವನ್ನು ಸ್ಥಾಪಿಸಿದ ಫುಲೆಯುವರು ಡಾ| ಅಂಬೇಡ್ಕರ್ ಅವರಿಗೆ ಶಕ್ತಿಯಾಗಿದ್ದವರು. ಗಡಿಭಾಗದಲ್ಲಿ ಮಹಾತ್ಮಾ ಜ್ಯೋತಿಭಾ ಫುಲೆ ಅವರ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿರುವುದು ಸ್ತುತಾರ್ಹವಾಗಿದೆ. ಈ ಮೂಲಕ ಜನಪರ ಕಾರ್ಯ ನಡೆದು ಸಂಸ್ಥೆಯ ಉತ್ತಮ ರೀತಿಯಿಂದ ಬೆಳೆದು ಒಳ್ಳೆಯ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಒಬಿಸಿ ಘಟಕದ ತಾಲೂಕು ಅಧ್ಯಕ್ಷ ಮಲ್ಲಿನಾಥ ಪರೇಣಿ, ಮುಖಂಡ ರಮೇಶ ಲೋಹಾರ, ಹಿರಿಯ ದಿಲೀಪ ಕುಲಕರ್ಣಿ, ಕರ್ನಾಟಕ ದಲಿತ ಸೇನೆ ರಾಜ್ಯ ಅಧ್ಯಕ್ಷ ಬಾಬುರಾವ್ ಅರುಣೋದಯ, ಮುಖಂಡ ದಯಾನಂದ ಶೇರಿಕಾರ, ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀಮಂತ ನಡಗೇರಿ, ಪತ್ರಕರ್ತ ಪ್ರಭಾಕರ ಸಲಗರೆ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಮ್ಮುಖ ವಹಿಸಿದ್ದ ಹರಿದ್ವಾರದ ಸುರಿಂದ್ರ ಬ್ರಹ್ಮಾಚಾರಿ ಆಶ್ರಮದ ಸುರಿಂದ್ರ ಮಹಾರಾಜ್, ನರಸಿಂಹ ಮಹಾರಾಜ್ ಉಪಸ್ಥಿತರಿದ್ದರು.
ಭೀಮಾಶಂಕರ ಮಾಡಿಯಾಳ, ಸುಭಾಷ ಪಾಟೀಲ, ನಿಜಲಿಂಗಪ್ಪ ಮೋಧೆ, ವಿವೇಕಾನಂದ ಹತ್ತಿ, ದತ್ತಾತ್ರೆಯ ಕಬಾಡೆ, ಷಣ್ಮೂಖಪ್ಪ ಹಡಪದ, ಸಂಸ್ಥೆಯ ಕಾರ್ಯದರ್ಶಿ ರುಕ್ಮೀಣಿ ಎಸ್. ನಡಗೇರಿ, ಶ್ರೀಗಂಗಾ ಡಿ. ಕಬಾಡೆ, ನಾಗೀಣಿ ನಡಗೇರಿ , ಸುವರ್ಣಾ ಮಾಡಿಯಾಳಕರ್, ಬಾಳು ಆರ್. ಪೋತೆ ನಾಗೇಶ ಪಿ. ಹಿಪ್ಪರಗಿ ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ರಾಹುಲ್ ಎಸ್ ನಡಗೇರಿ ನಿರೂಪಿಸಿದರು. ವಿದ್ಯಾರ್ಥಿನಿ ರಾಜೇಶ್ರೀ ಎಸ್. ನಡಗೇರಿ ವಂದಿಸಿದರು.