ಸುರಪುರ: ಡಿಸೆಂಬರ್ ೯ರಂದು ಸೋಮವಾರ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶ್ರೀ ಕೃಷ್ಣಾ ಪಟ್ಟಣ ಸೌಹಾರ್ಧ ಪತ್ತಿನ ಸಹಕಾರಿ ನಿಯಮಿತ ಆರಂಭಗೊಳ್ಳಲಿದೆ ಎಂದು ಮುಖ್ಯ ಪ್ರವರ್ತಕ ರಾಜಾ ಮುಕುಂದ ನಾಯಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು,ಸುಕ್ಷೇತ್ರ ವೀರಘಟ್ಟದ ಶ್ರೀ ಅಡವಿಲಿಂಗ ಮಹಾರಾಜರು ಪತ್ತಿನ ಸಹಕಾರಿ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಪುರ ಅರ್ಬನ್ ಕ್ರೇಡಿಟ್ ಕೋ-ಆಪ್ ಸೊಸೈಟಿ ಅಧ್ಯಕ್ಷರಾದ ರಾಜಾ ಮುಕುಂದ ನಾಯಕ ವಹಿಸಲಿದ್ದಾರೆ,ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ,ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಸಿದ್ರಾಮರೆಡ್ಡಿ ವಿ.ಪಾಟೀಲ್, ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ಸಜ್ಜನ್,ವರ್ತಕರ ಸಂಘದ ಅಧ್ಯಕ್ಷ ಕಿಶೋರಚಂದ್ ಜೈನ್ ಹಾಗು ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ವಿ.ವಿ.ಗುಪ್ತಾ ಭಾಗವಹಿಸಲಿದ್ದಾರೆ.
ಜನತೆಗೆ ಕಡಿಮೆ ಬಡ್ಡಿ ದರದಲ್ಲಿ ವಾಹನಗಳ ಮೇಲೆ ಸಾಲ,ಆಭರಣಗಳ ಮೇಲೆ ಸಾಲ,ಸಣ್ಣ ಸಣ್ಣ ವ್ಯಾಪರಸ್ಥರಿಗೆ ಸಾಲ ನೀಡುವ ಮೂಲಕ ಜನತೆಯ ಬದುಕು ಸುಧಾರಣೆಯ ಗುರಿಯನ್ನಿಟ್ಟುಕೊಂಡು ಸಹಕಾರಿ ಸಂಸ್ಥೆ ಆರಂಭಿಸಲಾಗುತ್ತಿದ್ದು.ಒಂದು ಕೋಟಿ ರೂಪಾಯಿಗಳ ಆರಂಭಿಕ ವಹಿವಾಟಿನ ಗುರಿ ಹೊಂದಲಾಗಿದೆ.ಅಲ್ಲದೆ ಸುಮಾರು ನಾಲ್ಕು ನೂರಾ ಐವತ್ತು ಷೇರುಗಳ ಗುರಿ ಇದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಶಾಂತರಾಜ ಬಾರಿ,ವಿಜಯಕುಮಾರ ಚಿಟ್ಟಿ,ಮಂಜುನಾಥ ಗುಳಗಿ,ನೀಠಾಲಾಕ್ಷ ಪಂಚಾಂಗಮಠ,ಜಿವ್ಹೇಶ್ವರ ಠೊಣಪೆ ಇದ್ದರು.