ಕಲಬುರಗಿ: ಜಿಲ್ಲಾ ಅಂಗನವಾಡಿ ನೌಕರರ ಸಂಘದ ವತಿಯಿಂದ ಹಾಗೂ ವಿವಿಧ ಸಂಘಟನೆಯ ನೇತೃತ್ವದಲ್ಲಿ ಇಂದು ನಗರದಲ್ಲಿ ಜಾಥಾ ಕ್ಕೆ ಸ್ವಾಗತಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಹೋರಾಟ ನಡೆಸಲಾಯಿತು.
ನಗರದ ಗಂಜ ಲಾಹೋಟಿ ಕಲ್ಯಾಣ ಮಂಟಪ ದಿಂದ ಜಗತ್ ವೃತ್ತ ಜಿಲ್ಲಾ ಪಂಚಾಯತ ವೃತ್ತದವರೆಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಜಗತ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ರೈತ ಹಾಗೂ ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಮಾತನಾಡಿ 10-12-2019 ರಿಂದ ತುಮಕೂರಿನಿಂದ ಬೆಂಗಳೂರು ವರೆಗೆ ನಡೆಯುವ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅನಿರ್ಧಿಷ್ಟ ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಹೋರಾಟದಲ್ಲಿ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಕಾಮ್ರೆಡ ಶಾಂತಾ ಘಂಟೆ,ಗ್ರಾಮ ಪಂಚಾಯತ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಕಾಮ್ರೆಡ ಮಾರುತಿ ಮಾನಪಡೆ, ರಾಜ್ಯ ಸಹ ಕಾರ್ಯದರ್ಶಿ ಶಿವಾನಂದ ಕವಲಗಾ ಬಿ,ಅಂಗನವಾಡಿ ನೌ.ಸಂಘದ ಜಿಲ್ಲಾ ಅಧ್ಯಕ್ಷರಾದ ಕಾಮ್ರೆಡ ಗೌರಮ್ಮ ಪಾಟೀಲ, ಗಂಗಮ್ಮ ಬಿರಾದಾರ,ಜಾಥಾದಲ್ಲಿ ಬಂದಿರುವ ಸಂಗಾತಿಗಳು ಮತ್ತು ಜಿಲ್ಲೆಯ ಅಂಗನವಾಡಿ ನೌಕರರು, ಸಹಾಯಕಿಯರು,ರೈತ ಸಂಘದ ಮುಖಂಡರಾದ ಆಶೋಕ ಮ್ಯಾಗೇರಿ,ಅಕ್ಷರ ದಾಸೋಸ ಸಂಘದ ಮುಖಂಡರಾದ ವಿಜಯಲಕ್ಷ್ಮಿ, CITU ಜಿಲ್ಲಾ ಸಹ ಸಂಚಾಲಕ ಶಿವಾನಂದ ಕವಲಗಾ ಬಿ ರಾಜ್ಯ ಸಹ ಕಾರ್ಯದರ್ಶಿ ಗ್ರಾ.ಪಂ.ನೌ.ಸಂಘ CITU) ಭಾಗವಹಿಸಿದ್ದರು.