ಕಲಬುರಗಿ/ಚಿಂಚೋಳಿ: ಈ ದೇಶದ ಮನುವಾದಿಗಳು ಸಂವಿಧಾನ ವಿರುದ್ಧ ಇಲ್ಲಸಲ್ಲದ ಧ್ವಂದ ನೀತಿ ಹುಟ್ಟಿಸಿ ಸಂವಿಧಾನ ಬದಲಾವಣೆ ಸಂಚನು ಮಾಡುತ್ತಿದ್ದಾರೆ. ಸಂವಿಧಾನವೆ ಈ ದೇಶದ ಬಹುದೋಡ್ಡ ಗಂಥ್ರ. ಸಂವಿಧಾನ ವಿಷಯಕ್ಕೆ ಬಂದರೆ ಭಾರತೀಯ ಪ್ರಜೆಗಳಾದ ನಾವು ಯಾರು ಸುಮ್ಮನೆ ಇರುವುದಿಲ್ಲಾ. ಸಂವಿಧಾನ ಇಂದು ಅಪಾಯದಲ್ಲಿದೆ. ಆದರಿಂದ ನಾವು ಬೆಂಗಳೂರುನಿಂದ ನಡಿಗೆ,ಓಟ,ಸೈಕಲ್ ಜಾಥ ಮುಖಾಂತರ ಸಂವಿಧಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕವಿತಾ ರೆಡ್ಡಿ ಹೇಳಿದರು.
ಸಂವಿಧಾನಕ್ಕಾಗಿ 16 ದಿನಗಳ ರಾಜ್ಯದಲ್ಲಿ ಸಂವಿಧಾನ ಅರಿವು ಯಾತ್ರೆಯನ್ನು ಸೇಡಂ ನಗರದಲ್ಲಿಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಸಂವಿಧಾನ ವಿಶ್ವದ ಬಹು ದೋಡ್ಡ ಸಂವಿಧಾನವಾಗಿದೆ.
ಅಂಬೇಡ್ಕರ ರವರು ಈ ದೇಶದ ಸಂವಿಧಾನ ರಚಿಸುವ ಮೂಲಕ ಎಲ್ಲರೂ ಸೌಜನ್ಯದಿಂದ ಬದುಕುವ ಹಕ್ಕುಗಳನ್ನು ನಮಗೆ ಒದಗಿಸಿಕೊಟ್ಟಿದರೆ. ಸಂವಿಧಾನ ಎಲ್ಲ ಧರ್ಮ ಪರವಾಗಿದೆ ಎಲ್ಲಾ ಧರ್ಮಗಳನ್ನು ರಕ್ಷಿಸುವ ನಿಟ್ಟಿನಲ್ಲಿದೆ. ಎಲ್ಲಾರಗೂ ಸರಿ ಸಮನವಾದ ಹಕ್ಕುಗಳನ್ನು ನಮಗೆ ನೀಡಿದೆ. ಈಗ ಸಂವಿಧಾನ ಅಪಾಯದಲ್ಲಿ ಜಾತಿ ಧರ್ಮವನ್ನು ಬಿಟ್ಟು ಹೋರಾಡುವದು ಅವಶ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿನ್ನಾ, ವಿಲಾಸ ಗೌತಂ ನಿಡಗುಂದಾ,ಶಂಭುಲಿಂಗ ನಾಟೀಕರ, ಪ್ರಶಾಂತ ಸೇಡಮಕರ, ಬಸವರಾಜ ಕಾಳಗಿ,ಈರಪ್ಪ ಗುಂಡಗುರ್ತಿ ಅರುಣಕುಮಾರ ಮೂಡಬೂಳಕರ, ಮಹಾವೀರ ಅಳೋಳ್ಳಿಕರ್, ಶರಣು ಊಡಗಿ, ಸಾಗರ ಕಲಂಕಂಭ, ಶೇಖರ ನಾಟೀಕರ್,ಸಂಜುಕುಮಾರ ದುಗನ್, ಶ್ರೀಕಾಂತ ಜಾಪನೂರ, ಸಲಿಂ ಲಷ್ಕರಿ, ಬಸವರಾಜ ಕೋಳ್ಳಿ, ದಿಲಷಾದ, ಚಂದ್ರಕಾಂತ ಕಟ್ಟಿಮನಿ, ಮಾರುತಿ ಹುಳಗೋಳ, ಭಗವಾನ ಬೋಚಿನ, ರಾಜಶೇಖರ ಹಂಗನಳ್ಳಿಕರ್, ಗಣೇಶ ಲಕ್ಕಿ, ರಾಜು ಬಟೀಗೇರಾ, ಸುನೀಲ, ಪ್ರಶಾಂತ, ಶ್ರೀಕಾಂತ ಹೋಸಳ್ಳಿ, ಮರೇಪ್ಪ ಹೋಸಳ್ಳಿ. ಸುರೇಶ ಬೇಲ್ಲದ್, ಖದೀರ, ಬಸವರಾಜ ಕಟ್ಟಿಮನಿ ಇನ್ನೀತರರು ಇದ್ದರು