ಮಕ್ಕಳ ಕಲಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಮೇಳಗಳು ಸಹಕಾರಿ: ಶಿಕ್ಷಣಾಧಿಕಾರಿ ನಾಗರತ್ನಾ ಓಲೆಕಾರ್

0
107

ಸುರಪುರ: ಮಕ್ಕಳ ಕಲಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಶೈಕ್ಷಣಿಕ ಮೇಳಗಳು ಸಹಕಾರಿಯಾಗಿವೆ, ಮಕ್ಕಳು ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದಂತೆ ಅನೇಕ ಪರಿಕಲ್ಪನೆಗಳನ್ನು ಕುರಿತು ಉತ್ತಮವಾಗಿ ಅಭಿವ್ಯಕ್ತಿಸಿರುವುದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಓಲೆಕಾರ್ ಪ್ರಶಂಸೆ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ಅಜೀಂ ಪ್ರೇಮ್‌ಜೀ ಪೌಂಡೇಷನ್ ವತಿಯಿಂದ ನಗರದ ಖುರೇಶಿ ಮೊಹಲ್ಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಭಾಷಾ ಮತ್ತು ಗಣಿತ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಈ ರೀತಿಯಾದ ಶೈಕ್ಷಣಿಕ ಮೇಳಗಳನ್ನು ಇನ್ನುಳಿದ ಶಾಲೆಗಳಲ್ಲಿ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಉತ್ತಮವಾದ ಕಲಿಕೆಯನ್ನುಂಟುಮಾಡಲು ಸಾಧ್ಯವಾಗುತ್ತದೆ.ಇದೇ ರೀತಿ ಇತರೆ ಶಾಲೆಗಳಲ್ಲೂ ಮೇಳಗಳನ್ನು ಹಮ್ಮಿಕೊಳ್ಳಲು ಗಮನಹರಿಸೋಣ ಎಂದರು.

Contact Your\'s Advertisement; 9902492681

ಅಜೀಮ್ ಪ್ರೇಮಜೀ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಮಾತನಾಡಿ, ಕಳೆದ ಇಪ್ಪತ್ತು ದಿನಗಳಿಂದ ಶಿಕ್ಷಕರು ಮತ್ತು ಮಕ್ಕಳು ನಿರಂತರವಾಗಿ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಅನುಭವತ್ಮಾಕವಾಗಿ ಕಲಿತಿರುವುದಕ್ಕೆ ಈ ಮೇಳ ಸಾಕ್ಷಿಯಾಗಿದೆ. ಇಂತಹ ಶೈಕ್ಷಣಿಕ ಮೇಳಗಳಿಂದ ಮಕ್ಕಳಲ್ಲಿ ಯೋಚಿಸುವ, ಪ್ರಶ್ನಿಸುವ, ಹಾಗೂ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯಗಳ ಅಭಿವೃದ್ಧಿಯಾಗುವುದು ಎಂದು ಅಭಿಪ್ರಾಯಪಟ್ಟರು.

ಮೇಳದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಖುರೇಶಿ ಮೋಹಲ್ಲಾ,ಕುರಬರಗಲ್ಲಿ, ಪಾಳದಕೇರಿ ಹಾಗು ಸರಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಖುರೇಶಿ ಮೋಹಲ್ಲಾ ಶಾಲೆಯ ಮಕ್ಕಳು ಚಟುವಟಿಕೆಗಳಲ್ಲಿ ಭಾಗವಹಿಸಿದ್ದವು, ಬಿ.ಆರ್.ಪಿ ಖಾದರಪಟೇಲ್, ಸಿ.ಆರ್.ಪಿ ತಿಪ್ಪಣ್ಣ ಶಿನ್ನೂರ, ಯೂನುಸ ಕಮತಗಿ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮರಡ್ಡಿ ಮಂಗಿಹಾಳ, ಉರ್ದು ಶಾ.ಶಿ. ಅಧ್ಯಕ್ಷ ಜಾಕೀರ ಹುಸೇನ ಮುಖ್ಯ ಶಿಕ್ಷಕ ಸಾಮುವೆಲ್, ಶಿಕ್ಷಕರಾದ ಮಮತಾ, ರವಿಗಲಗಿನ, ರೇಣುಕಾ, ಬಸಯ್ಯ ಮಠಪತಿ, ಮುಲ್ಕಚಾಂದ, ಸುಜಾತ, ಅಮರಯ್ಯ ಚನ್ನಪ್ಪ ಕ್ಯಾದಗಿ, ಇಂದುಮತಿ ಅಬ್ದುಲ್ ರಹೀಮ್, ಸಭಿಯಾಬಾನು, ಶಕೀಲ್, ರಾಜಶೇಖರ ದೇಸಾಯಿ ಪ್ರಮುಖರಾದ ಮಹ್ಮದ ಶಕೀಲ್, ಹನೀಫ, ಎಸ್.ಡಿ.ಎಮ್.ಸಿ ಅಂಬಲಪ್ಪ, ನಾಗೇ,ಶ ಗೋಪಾಲ್, ಎಪಿಏಫನ ಪರಮಣ್ಣ ತೆಳಗೇರಿ, ಸುರಪುರ ಕ್ಲಸ್ಟರನ ವಿವಿಧ ಶಾಲೆಯ ಶಿಕ್ಷಕರು, ಮಕ್ಕಳು ಪಾಲಕ ಪೋಷಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here