ಕಲಬುರಗಿ: ಕೇರಳದ ತಿರುವನಂತಪುರದಲ್ಲಿರುವ
ಶ್ರೀ ಚಿತ್ರಾ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ
ಸಂಸದ ಡಾ.ಉಮೇಶ ಜಾಧವ್ ಹಾಗೂ ಸಂಸದ ಕಾಂಗ್ರೆಸ್ನ ಶಶಿ ತರೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಬ್ಬರು ಲೋಕಸಭಾ ಸದಸ್ಯರನ್ನು ಈ ಹುದ್ದೆಗೆ ಆಯ್ಕೆ ಮಾಡಬಡಬೇಕಾಗಿದ್ದು, ಈ ಹುದ್ದೆಗಳಿಗೆ ಲೋಕಸಭೆಯಿಂದ
ಚುನಾಯಿಸಲಾಗುತ್ತದೆ.
ಈ ಬಾರಿ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಇಂದು ಪ್ರಕಟಣೆಯಲ್ಲಿ ತಿಳಿಸಿದೆ.