ಕಲಬುರಗಿ: ಸಹೃದಯಿ ಸ್ನೇಹ ಬಳಗದ ವತಿಯಿಂದ ಡಿಸೆಂಬರ್ 29 ರಂದು ನಗರದ ಸಂಗಮೇಶ್ವರ ಮಹಿಳಾ ಮಂಡಳದ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲುದ್ದೇಶಿಸಲಾಗಿರುವ “ಹರಟೆ’ ಕಾರ್ಯಕ್ರಮ ಉದ್ಘಾಟಿಸಲು ಕಲಬುರಗಿ ಪೊಲೀಸ್ ಆಯುಕ್ತ ಐಪಿಎಸ್ ಅಧಿಕಾರಿ ಎಂ.ಎನ್.ನಾಗರಾಜ್ ಅವರನ್ನು ಹೂಗುಚ್ಚ ನೀಡಿ ಆಹ್ವಾನ ನೀಡಲಾಯಿತು.
ಬಳಗದ ಪ್ರಮುಖರಾದ ವಿಜಯಕುಮಾರ ತೇಗಲತಿಪ್ಪಿ, ರಾಜಕುಮಾರ ಉದನೂರ, ನಾಗಲಿಂಗಯ್ಯ ಮಠಪತಿ, ಅಣವೀರಯ್ಯಾ ಸ್ವಾಮಿ ಕೋಡ್ಲಿ, ಸಂಗಮೇಶ ಶಾಸ್ತ್ರಿ ಮಾಶಾಳ, ಶಂಕರ ಬಿರಾದಾರ ಸೇರಿ ಅನೇಕರು ಉಪಸ್ಥಿತರಿದ್ದರು.