ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಗ್ರಾಮದೇವತೆಯಾದ ಶ್ರೀದೇವಿ ಜಾತ್ರೆಯನ್ನು ಐದು ದಿನಗಳ ಕಾಲ ಅಧ್ಧೂರಿಯಾಗಿ ಆಚರಿಸಲಾಯಿತು.
ಸೋಮವಾರ ರಾತ್ರಿ ದೇವಿಯ ಗಂಗಾಸ್ನಾನ ಮಾಡಿಸಿಕೊಂಡು ನಂತರ ಗ್ರಾಮದಲ್ಲಿ ಮೆರವಣಿಗೆಯ ಮೂಲಕ ಸದರ ಕಟ್ಟೆಗೆ ತಂದು ದೇವಿಯನ್ನು ಪ್ರತಿಷ್ಠಾಪಿಸಲಾಯಿತು.ನಂತರ ಮಂಗಳವಾ ಬೆಳಗಿನ ಜಾವ ದೇವಿಗೆ ಪೂಜಾ ಕೈಂಕರ್ಯ ನಡೆಸಿ ನಂತರ ಗ್ರಾಮದ ಸುತ್ತಲು ಬಾನದ ಫಲಿ ಎಸೆಯುವ ಮೂಲಕ ಗ್ರಾಮಕ್ಕೆ ದೇವಿಯ ಶ್ರೀರಕ್ಷೆ ಇರಲೆಂದು ಭಕ್ತರು ನಮಿಸಿದರು.
ಮಂಗಳವಾರ ಇಡೀ ದಿನ ದೇವಿಗೆ ಗ್ರಾಮದ ಜನತೆ ದೀಡ ನಮಸ್ಕಾರ ಹಾಕುವ ಹಾಗು ದೇವಿಗೆ ಕುರಿಗಳ ನೀಡುವ ಹರಕೆ ಹೊತ್ತವರು ತಮ್ಮ ಹರಕೆ ಸಲ್ಲಿಸಿದರು ಮತ್ತು ರಾತ್ರಿ ಇಡೀ ಡೊಳ್ಳು ಮತ್ತು ಭಜನಾ ಮೇಳಗಳಿಂದ ಸಂಗೀತ ಕಾರ್ಯಕ್ರಮ ಜರುಗಿದವು.ನಂತರ ಬುಧವಾರ ಸಾಯಂಕಾಲ ರಥದಲ್ಲಿದ್ದ ಶ್ರೀದೇವಿಯ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಸಾವಿರಾರು ಜನ ಭಕ್ತರ ಮದ್ಯೆ ಎಳೆದಾಡಲಾಯಿತು.ಈ ಸಂದರ್ಭದಲ್ಲಿ ಭಾಗವಹಿಸಿದ್ದ ಜನತೆ ಕುಣಿದು ಕುಪ್ಪಳಿಸುತ್ತ ಸಂಭ್ರಮಿಸಿದರು.ನಂತರ ಅಂದು ರಾತ್ರಿ ದೇವಿಯನ್ನು ಗುಡಿಯ ಹತ್ತಿರ ತಂದು ನಂತರ ಗುರುವಾರ ಬೆಳಿಗ್ಗೆ ಮತ್ತೆ ಪೂಜೆ ಸಲ್ಲಿಸಿ ದೇವಿಯನ್ನು ಗರ್ಭ ಗುಡಿ ಪ್ರವೇಶ ಮಾಡಿಸುವ ಮೂಲಕ ಜಾತ್ರೆಗೆ ಮಂಗಲ ಹಾಡಲಾಯಿತು.
ಜಾತ್ರೋತ್ಸವದಲ್ಲಿ ಗ್ರಾಮದ ಪ್ರಮುಖರಾದ ವೇದಮೂರ್ತಿ ಶ್ರೀ ಅಮರಯ್ಯಸ್ವಾಮಿ,ರಾಜಾ ಕೃಷ್ಣಪ್ಪ ನಾಯಕ ಜಹಾಗೀರದಾರ,ಬಸನಗೌಡ ಪೊಲೀಸ್ ಪಾಟೀಲ,ಗಜದಂಡಯ್ಯಸ್ವಾಮಿ,ಅಮರಯ್ಯ ಸ್ವಾಮಿ,ಚಂದ್ರಶೇಖರ ಕುಂಬಾರ,ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ,ಅಯ್ಯಪ್ಪ ಹಡಪದ, ಬಸವರಾಜ ನಾಯ್ಕೋಡಿ,ಕಾಳಪ್ಪ ಕವಾತಿ,ಭಿಮಣ್ಣ ನಾಗನಟಿಗಿ,ನಾಗಪ್ಪ ಬಳಿಗಾರ,ಬಸವರಾಜ ಕುಂಬಾರ,ಅಶೋಕ ಕಾಮತ್,ಚಂದ್ರಶೇಖರ ಕಾಮತ್,ಮಲ್ಕಪ್ಪ ಕಟ್ಟಿಮನಿ,ದೇವಿಂದ್ರಪ್ಪ ಬಡಿಗೇರ,ಮೌನೇಶ ಬಡಿಗೇರ, ಅಂಬ್ರೇಶ ಮರಾಠ,ಶರಣಪ್ಪ ಕುಂಬಾರ,ಮಾಸುಮಸಾಬ ತಿಂಥಣಿ,ಅಬ್ಬಾಸಲಿ ಮುಜೇವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.