ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಕರೆ

0
100

ಅಫಜಲಪುರ: ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಅವರಳ್ಳಿ ಗ್ರಾಮದಲ್ಲಿ ಇಂದು ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಾಯಿಂದಿರು ಅಂಗನವಾಡಿ ಕೇಂದ್ರ ಒಂದಕ್ಕೆ ಕರೆತಂದು ಮಕ್ಕಳ ತೂಕ ಎತ್ತರ ಶುಚಿತ್ವ ಬೆಳವಣಿಗೆ ಮತ್ತು ಲಸಿಕೆ ಹಾಕಿಸಿಕೊಂಡ ಹಾಗೂ ಕುಟುಂಬ ಕಲ್ಯಾಣ ಯೋಜನೆಯನ್ನು ಅನುಸರಿಸಿದ ತಾಯಿ ಮಕ್ಕಳನ್ನು ಗುರುತಿಸಿ ಮಕ್ಕಳಿಗೆ ಪ್ರಥಮ ₹300ದ್ವಿತೀಯ ₹200 ತೃತೀಯ ನೂರು ರೂಪಾಯಿಗಳಂತೆ ಬಹುಮಾನವನ್ನು ವಿಜೇತ ಮಕ್ಕಳಿಗೆ ನೀಡಲಾಯಿತುತದನಂತರ ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು ಅದಕ್ಕಾಗಿ ಮಕ್ಕಳಿಗೆ ತಪ್ಪದೆ ಲಸಿಕೆಗಳನ್ನು ನೀಡಿ 9 ಮಾರಕ ರೋಗಗಳಿಂದ ತಪ್ಪಿಸಬೇಕು , ಗರ್ಭಿಣಿ ಎಂದು ತಿಳಿದ ಕೂಡಲೇ ತಾಯಿ ಕಾರ್ಡನ್ನು ತಪ್ಪದೇ ಮಾಡಿಸ ತಕ್ಕದ್ದು, ಅಲ್ಲದೆ ಪ್ರತಿ ತಿಂಗಳು 9ನೇ ತಾರೀಕು ಗರ್ಭಿಣಿ ತಪಾಸಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕನಿಷ್ಠ ನಾಲ್ಕು ಬಾರಿ ತಪಾಸಣೆ ಮಾಡತಕ್ಕದ್ದು ಅಲ್ಲದೆ ಪ್ರತಿಯೊಬ್ಬರೂ ಜೀರೋ ಅಕೌಂಟ್ ಮಾಡಿಸಲು ಈ ಸಂದರ್ಭದಲ್ಲಿ ತಿಳಿಸಲಾಯಿತು.

Contact Your\'s Advertisement; 9902492681

ಇದು ಅಲ್ಲದೆ ಇದರಿಂದ ತಾಯಿ ಮತ್ತು ಮಕ್ಕಳು ಸುರಕ್ಷಿತವಾಗಿದ್ದು ತಾಯಿ ಮತ್ತು ಶಿಶು ಮರಣವನ್ನು ಕಡಿಮೆಗೊಳಿಸಬಹುದು. ಅದಕ್ಕಾಗಿ ಎಲ್ಲರೂ ಸರಕಾರದ ಸೌಲಭ್ಯ ಪಡೆಯುವುದರೊಂದಿಗೆ ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಲು ಮಾಹಿತಿ ನೀಡಿದರು.

ತದನಂತರ ಅಲ್ಲಿನ ಕಿರಿಯ ಆರೋಗ್ಯ ಸಹಾಯಕಿ ಅವರು ಮಗುವಿನ ವಿಧಾನ ಕಾಂಗ್ರೋ ವಿಧಾನ, ಹಾಗೂ ನೂತನ ಗರ್ಭನಿರೋಧಕಗಳ ಬಗ್ಗೆ ತಾಯಂದಿರಿಗೆ ವಿವರಿಸಿದರು ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ, ಕಾರ್ಯಕರ್ತೆ ಜ್ಯೋತಿ ಆಗು, ಮಕ್ಕಳ ತಾಯಂದಿರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here