ಕಲಬುರಗಿ: ಪತ್ರಿಕೆಗಳಿಗೆ ಲೇಖನ ಆಗಲಿ ಓದುಗರ ಪತ್ರ ಆಗಲಿ ಬರೆಯುವಾಗ ಪದಗಳ ಮೇಲೆ ಹಿಡಿತವಿರಬೇಕು ಪದೇ ಪದೇ ಬಳಸಿರುವ ಪದವನ್ನು ಬಳಿಸದೇ ಸಾಮಾಜಿಕ ಕಳಕಳಿಂದ ಪತ್ರವನ್ನು ಬರಿಯಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಹಾಯಕ ಕಾರ್ಯನಿರ್ವಾಹಕ ಅಭಿಂಯತರ ವೆಂಕಟೇಶ ಮುದಗಲ್ ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸಂಶೋಧನಾ ಅಧ್ಯಯನ ವಿಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ “ಸಂಪಾದಕೀಯ ಮತ್ತು ಓದುಗರ ಪತ್ರ” ಕುರಿತು ವಿಷೇಶ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮೂಹ ಮಾಧ್ಯಮ ಸರಕಾರದ ನಾಲ್ಕನೇ ಅಂಗವಾಗಿದೆ. ಇದು ಅತ್ಯಂತ ಪ್ರಭಾವ ಮಾಧ್ಯಮವಾಗಿದೆ. ವಿದ್ಯಾರ್ಥಿಗಳು ಸ್ವಂತ ಪ್ರಯತ್ನದಿಂದ ಆಸಕ್ತಿ ತೋರಿಸಿ ಪತ್ರಿಕೆಗಳಿಗೆ ಲೇಖನ ಬರೆದರೆ ಆಗ ಮಾತ್ರ ಯಶಸ್ವಿಯಾಗಲು ಸಾದ್ಯವೆಂದು ವಿದ್ಯಾರ್ಥಿಗಳಿಗೆ ದೈರ್ಯ ತುಂಬಿ ಮಾತನಾಡಿದರು.
ಅತಿಥಿ ಉಪನ್ಯಾಸಕರಾದ ಡಾ. ರಾಜಕುಮಾರ ಎಂ ದಣ್ಣೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಭಾಗದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕೊಡಿಸುವದರಿಂದ ಭಾವಿ ಪತ್ರಕರ್ತ ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನುಕೂಲ ಆಗುತ್ತದೆ. ಪತ್ರಿಕೋದ್ಯಮ ಅನ್ನೋದು ಬರಿ ಪತ್ರಕರ್ತರು ಮಾತ್ರ ಬರೆಯೋದು ಅಲ್ಲ ಎಲ್ಲ ಕ್ಷೇತ್ರಗಳಲ್ಲಿ ಇರುವ ಪರಿಣಿತರಿಂದ ವಿಷಯ ಬರೆಸೋದರಿಂದ ದಿನ ಪತ್ರಿಕೆ ಆಗಿ ಸುದ್ದಿ ಪ್ರಕಟವಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿಗಳಾದ ಪ್ರೊ, ಡಿ.ಬಿ ಪಾಟೀಲರವರು ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಲಕ್ಷ್ಮಿ.ಬಿ ನಿರೂಪಿಸಿದರು ಅನ್ನಪೂರ್ಣ ಪ್ರಾರ್ಥಿಸಿದರು ಸೋಮೇಶ ಗೌಡ ಸ್ವಾಗತಿಸಿದರು