ಕಲ್ಶಾಣ ಕರ್ನಾಟಕ ಭಾಗದಲ್ಲಿಯೂ ಪ್ರತಿಭೆಗಳಿವೆ: ಪ್ರೋ.ಎಂ.ಎಸ್ ಜೋಗದ್

0
27

ಕಲಬುರಗಿ: ನಮ್ಮ ಭಾಗದ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲ. ಅವರನ್ನು ಗುರುತಿಸಿ ಮಾರ್ಗದರ್ಶನ ಮಾಡಿದರೆ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬಹುದು ಎಂದು ಶರಣಬಸವೇಶ್ವರ ವಿವಿಯ ವಿಜ್ಞಾನ ವಿಭಾಗದ ನಿವ್ರತ್ತ ಪ್ರಾಧ್ಶಾಪಕ ಪ್ರೊ.ಎಂ.ಎಸ್ ಜೋಗದ ಅಭಿಪ್ರಾಯಪಟ್ಟರು.

ನಗರದ ರೇಶ್ಮಿ ಶಿಕ್ಷಣ ಸಂಸ್ಥೆಯಲ್ಲಿ ಹಿಂದುಳಿದ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ 3 ದಿನಗಳ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ವಿದ್ಯಾರ್ಥಿಗಳು ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ನಿರಂತರ ಓದುವುದರಿಂದ ಮಾತ್ರ ಸಾಧಕರಾಗಬಹುದು. ವಿದ್ಶಾರ್ಥಿಗಳು ತಮ್ಮ ಸಮಯವನ್ನು ಪುಸ್ತಕದ ಜೊತೆಗೆ ಹೆಚ್ಚು ಕಳೆಯಬೇಕು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ ಜಿ. ಸಂಗಾ ಮಾತನಾಡುತ್ತಾ ತರಬೇತಿಯನ್ನು ಪಡೆಯುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆಯಲು ಅನುಕೂಲವಾಗುತ್ತದೆ. ಅದಲ್ಲದೇ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಹೆಚ್ಚಾಗುತ್ತದೆ ಎಂಬುವುದು ನನ್ನ ಬಲವಾದ ನಂಬಿಕೆ ಎಂದರು. ತರಬೇತಿ ಪಡೆದು ಎಲ್ಲರು ಪ್ರಮುಖ ಹುದ್ದೆಯನ್ನು ಪಡೆದುಕೊಂಡು ಉನ್ನತ ಹುದ್ದೆ ಪಡೆಯಲಿ ಎಂದು ಆಶಿಸಿದರು.

ತಾಲ್ಲೂಕು ವಿಸ್ತರಣಾ ಅಧಿಕಾರಿ ಕರಿಬಸಮ್ಮ ಮಾತನಾಡಿˌ ದಿನದ 24 ಗಂಟೆಗಳಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ನನ್ನನ್ನು ಕಂಡು ತಮ್ಮ ಸಮಸ್ಶೆ ಹೇಳಿಕೊಂಡರೆ ಸ್ಪಂದಿಸುತ್ತೇನೆ. ಓದುವ ಹವ್ಯಾಸ ನಿಮ್ಮಲ್ಲಿದ್ದರೆ ನಿಮ್ಮ ಸಹಾಯಕ್ಕೆ ನಾನು ಶತಸಿದ್ದ. ಅದಲ್ಲದೆ ಇದನೆಲ್ಲ ನನ್ನ ವಿದ್ಯಾರ್ಥಿಗಳು IAS KAS ಇನ್ನೂ ಹತ್ತು ಹಲವು ಸರಕಾರಿ ಹುದ್ದೆಗಳನ್ನು ಪಡೆಯಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶಿ ತರಬೇತಿ ಕೇಂದ್ರದ ಮನೊಹರ ಪಂಚಿˌ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಕುಂಬ್ಳೆ ಹಾಗೂ ಡಾಕಪ್ಪ ರಾಟೋಡ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ವಸತಿ ನಿಲಯಗಳ ನಿಲಯಪಾಲಕರುಗಳಾದ ಮಹಾದೇವಿˌ ಮಂದಾಕಿನಿˌ ಸಂಜಯಕುಮಾರˌ ಆನಂದˌ ಗುರುಲಿಂಗಮ್ಮˌ ಶಿವಶರಣಪ್ಪ ಹಾಗೂ ನೂರಾರು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here