ಹುಣಸಗಿ ಪೋಲಿಸ್ ಠಾಣೆಯ 6-7 ಕೊಲೆ ಪ್ರಕರಣಗಳು ಮುಚ್ಚಲಾಗುತ್ತಿದೆ ಮಾಜಿ ಶಾಸಕ ಆರೋಪ

0
364

ಸುರಪುರ: ಸುರಪುರ ಮತ್ತು ಹುಣಸಗಿ ತಾಲೂಕುಗಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ 6-7 ಕೊಲೆ ಘಟನೆಗಳು ಸಂಭವಿಸಿದ್ದು ಈ ಪ್ರಕರಣಗಳನ್ನು ಸಹಜ ಸಾವು ಎಂದು ದಾಖಲಿಸಿ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು  ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದ್ದಾರೆ.

ಕಳೆದ ನವಂಬರ್ 22 ರಂದು ನನ್ನ ಹುಟ್ಟು ಹಬ್ಬದ ಪ್ರಯುಕ್ತ ಬ್ಯಾನರ್ ಕಟ್ಟುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಎಸಗಿರುವ ಘಟನೆ ಸಂಭವಿಸಿ ೧ ತಿಂಗಳಾದರೂ ಆರೋಪಿಗಳನ್ನು ಬಂಧಿಸುವಲ್ಲಿ ಸ್ಥಳೀಯ ಪೋಲಿಸರು ವಿಫಲರಾಗಿದ್ದು ಸದರಿ ಘಟನೆಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೆ ಪ್ರಯೋಜನೆವಾಗಿರುವುದಿಲ್ಲ.

Contact Your\'s Advertisement; 9902492681

ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಹಾಗೂ ಕೋಡೇಕಲ್ ಪಿ.ಎಸ್.ಐ ಅವರನ್ನು ಅಮಾನತ್ತುಗೊಳಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಲು 24 ರಂದು ಬೆಳ್ಳಿಗ್ಗೆ 11 ಗಂಟೆಗೆ ಹುಣಸಗಿ ಪಟ್ಟಣದ ಮಹಾಂತ ಸ್ವಾಮಿ ವೃತ್ತದಿಂದ ಸಾವಿರಾರೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು, ನೊಂದ ಕುಟುಂಬದವರೊಂದಿಗೆ ಪಾದಯಾತ್ರೆ ಮುಖಾಂತರ ಮುಖ್ಯ ರಸ್ತೆ ಇಂದ ಬಸವೇಶ್ವರ ವೃತ್ತ ಮುಖಾಂತರ ತಹಶಿಲ್ದಾರ ಕಛೇರಿಗೆ ತೆರಳಿ ತಹಶಿಲ್ದಾರ ಕಾರ್ಯಾಲಯದ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಸಾರ್ವಜನಿಕರು ಮತ್ತು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಬೇಕೆಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here