ಗರುಡಾದ್ರಿಯಲ್ಲಿ ಸಾಹಿತ್ಯ ಲೋಕದ ತ್ರಿಮೂರ್ತಿಗಳಿಗೆ ನುಡಿ ನಮನ

0
75
ಸುರಪುರದ ಗರುಡಾದ್ರಿ ಕಲಾ ಮಂದಿರದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತ್ಯ ಲೋಕದ ಚೆನ್ನಣ್ಣ ವಾಲಿಕಾರ,ಚಂದ್ರಕಾಂತ ಕರದಳ್ಳಿ ಹಾಗು ಎಲ್.ಎಸ್.ಶೇಷಗಿರಿರಾವ್ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಸಲಾಯಿತು.

ಸುರಪುರ: ಇಂದು ಕನ್ನಡ ಸಾಹಿತ್ಯಕ್ಕೆ ದುಡಿದ ಮೂವರು ಮಹನಿಯರುಗಳನ್ನು ಕಳೆದುಕೊಂಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಮಾಜಿ ಸಚಿವರು ಹಾಗು ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ರಾಜಾಅ ಮದನಗೋಪಾಲ ನಾಯಕ ಮಾತನಾಡಿದರು.

ಇತ್ತೀಚೆಗೆ ನಿಧನರಾಗಿರುವ ಬಂಡಾಯ ಸಾಹಿತಿ ಚೆನ್ನಣ್ಣ ವಾಲಿಕಾರ,ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಹಾಗು ವಿಮರ್ಶಕ ಎಲ್.ಎಸ್.ಶೇಷಗಿರಿರಾವ್ ಅವರಿಗೆ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಚೆನ್ನಣ್ಣ ವಾಲಿಕಾರರು ಬಂಡಾಯ ಸಾಹಿತಿಗಳಾಗಿ ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದವರು. ಅದರಂತೆ ಚಂದ್ರಕಾಂತ ಕರದಳ್ಳಿಯವರು ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರು ಮಾಡಿದವರು.ಅವರು ಮಕ್ಕಳ ಸಾಹಿತ್ಯದಲ್ಲಿ ಸುಮಾರು ಇಪ್ಪತ್ತೈದಕ್ಕು ಹೆಚ್ಚು ಕೃತಿಗಳನ್ನು ರಚಿಸಿದವರು.ಇತ್ತೀಚೆಗೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದರಿಂದ ಕಳೆದ ತಿಂಗಳು ಅವರಿಗೆ ಇದೇ ಗರುಡಾದ್ರಿ ಕಲಾ ಮಂದಿರದಲ್ಲಿ ಸನ್ಮಾನವನ್ನುಕೂಡ ಮಾಡಲಾಗಿತ್ತು.ಅಂದು ನಮ್ಮೊಂದಿಗೆ ಭಾಗವಹಿಸಿ ಲವಲವಿಕೆಯಿಂದ ಮಾತನಾಡಿದ್ದರು.

Contact Your\'s Advertisement; 9902492681

ಅಂತವರು ಇಂದು ನಮ್ಮೊಂದಿಗಿಲ್ಲ ಎನ್ನುವುದೆ ನೋವಿನ ಸಂಗತಿಯಾಗಿದೆ.ಇನ್ನು ಎಲ್.ಎಸ್.ಶೇಷಗಿರಿರಾವ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶಕರಾಗಿ,ಇಂಗ್ಲೀಷ ಮತ್ತು ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿ ನಾಡಿಗೆ ಚಿರಪರಿಚಿತರಾಗಿದ್ದವರು.ಇಂತಹ ಮಹನಿಯರುಗಳು ಇಂದು ನಮ್ಮನ್ನ ಅಗಲಿದ್ದು ದುಖಃದ ಸಂಗತಿ.ಈ ಮೂವರು ಸಾಹಿತ್ಯ ದಿಗ್ಗಜರ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಇವರು ಕುಟುಂಬಗಳಿಗೆ ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಆ ಭಗವಂತ ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮೂವರು ಸಾಹಿತಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.ನಂತರ ಸಾಹಿತಿಗಳಾದ ಕನಕಪ್ಪ ವಾಗಣಗೇರಾ,ಬೀರಣ್ಣ ಆಲ್ದಾಳ,ಡಾ: ಯಲ್ಲಪ್ಪ ನಾಯಕ,ಸಿದ್ದಯ್ಯಸ್ವಾಮಿ ಸ್ಥಾವರಮಠ,ಇಕ್ಬಾಲ್ ರಾಹಿ ತಿಮ್ಮಾಪುರ,ನಬಿಲಾಲ ಮಕಾಂದಾರ,ಕಸಾಪ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ,ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಇತರರು ಮಾತನಾಡಿದರು.ಕಸಾಪ ಗೌರವ ಕಾರ್ಯದರ್ಶಿ ದೇವು ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠೀ ದೇಶಮುಖ,ದೊಡ್ಡಮಲ್ಲಿಕಾರ್ಜುನ ಹುದ್ದಾರ,ಜಯಲಲಿತ ಪಾಟೀಲ,ಸಾಹೇಬರಡ್ಡಿ ಇಟಗಿ,ಶಸರಣಬಸಪ್ಪ ಯಳವಾರ,ಅಯ್ಯನಗೌಡ ಪಾಟೀಲ,ಎಂ.ಡಿ.ಸರ್ವರ್,ಪ್ರಕಾಶ ಅಲಬನೂರ,ಕೆ.ವೀರಪ್ಪ,ಮದ್ದಪ್ಪ ಅಪ್ಪಾಗೋಳ,ರಾಘವೇಂದ್ರ ಭಕ್ರಿ,ಮೋನಯ್ಯ ಗೋನಾಲ,ಯಲ್ಲಪ್ಪ ಹುಲಕಲ್,ರಾಘವೇಂಧ್ರರಾವ್ ಕುಲಕರ್ಣಿ,ಬಿ.ಎಲ್.ಲಕ್ಷ್ಮಣ,ಮಲ್ಲಿಕಾರ್ಜುನ ಜೇಟಗಿಮಠ,ಮೂರ್ತಿ ಬೊಮ್ಮನಹಳ್ಳಿ,ವಿಜಯಕುಮಾರ ಬಣಗಾರ,ಬಸವರಾಜ ಗೋಗಿ,ರಾಜಶೇಖರ ದೇಸಾಯಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here