ಮಕ್ಕಳಲ್ಲಿಯೇ ಮಕ್ಕಳಾಗಿ ಆನಂದಿಸುತ್ತಿರುವುದು ಸಂತಸ: ಸಿಇಓ ಡಾ.ಪಿ.ರಾಜಾ

0
70

ಕಲಬುರಗಿ: ಶಾಲೆಯ ಅಭ್ಯಾಸದ ಜೊತೆಗೆ ಕ್ರೀಡೆಗೂ ಕೂಡ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ ಎಂಬುದಕ್ಕೆ ಶಾಲೆಯಲ್ಲಿ ನಡೆದ ಕ್ರೀಡಾ ದಿನವೇ ಸಾಕ್ಷಿಯಾಗಿದೆ. ಮತ್ತೊಂದು ಮಹತ್ವದ ವಿ?ಯವೇನೆಂದರೆ ಶಾಲಾ ಕ್ರೀಡಾ ದಿನದಂದು ಶಾಲೆಯ ವಿದ್ಯಾರ್ಥಿಗಳ ಪಾಲಕರು ಹಾಗೂ ಶಿಕ್ಷಕರು ಕೂಡ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಮಕ್ಕಳಲ್ಲಿಯೇ ಮಕ್ಕಳಾಗಿ ಆನಂದಿಸುತ್ತಿರುವುದು ಸಂತಸವನ್ನುಂಟು ಮಾಡಿದೆ. ಕ್ರೀಡಾದಿನದ ಕುರಿತು ಅಥಿತಿಗಳು ಶಾಲೆಯ ಶಿಸ್ತಿನ ಕುರಿತು ಮಕ್ಕಳನ್ನು ಹೊಗಳಿದರು. ಮಕ್ಕಳಿಗೆ ಇದು ಸರಿಯಾದ ವಯಸ್ಸು ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಂದು ಜಿಪಂ. ಸಿಇಓ ಡಾ. ಪಿ ರಾಜಾ ಅವರು ಹೇಳಿದರು.

ಶಹಾಬಾದ ರಸ್ತೆಯಲ್ಲಿರುವ ನ್ಯಾ?ನಲ್ ಪಬ್ಲಿಕ್ ಶಾಲೆಯ ಪ್ರಕೃತಿಯ ಸುಂದರ ವಾತಾವರಣದಲ್ಲಿ ವಿಶಾಲವಾದ ಆಟದ ಮೈದಾನದಲ್ಲಿ ಶಾಲೆಯ ಕ್ರೀಡಾ ದಿನವನ್ನು ಪಾರಿವಾಳವನ್ನು ಆಕಾಶದಲ್ಲಿ ಹಾರಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಅವರು, ಜಿಲ್ಲಾಮಟ್ಟ, ರಾಜ್ಯಮಟ್ಟ, ರಾಷ್ಟ್ರೀಯ ಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ಇಂತಹ ಕ್ರೀಡಾದಿನಗಳೇ ಪ್ರೇರಣೆಯನ್ನು ನೀಡುತ್ತವೆ. ಈಗಿನ ಮಕ್ಕಳಲ್ಲಿ ಮೊಬೈಲ್, ಪ್ಲೇ ಸ್ಟೇ?ನ್ ಇನ್ನೂ ಮುಂತಾದ ಎಲೆಕ್ಟ್ರಾನಿಕ ಕ್ರೀಡೆಗಳನ್ನು ಆಡುವುದರಿಂದ ಮಕ್ಕಳು ದೈಹಿಕ ಕ್ರೀಡೆಗಳ ಕಡೆಗೆ ಗಮನ ಕೊಡುತ್ತಿಲ್ಲ ಎಂದು ಡಾ. ಪಿ ರಾಜಾ ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಅದಲ್ಲದೆ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಕೆಲವು ರಿಬ್ಬನ್ ನೃತ್ಯ, ಎರೋಬಿಕ್ಸ್, ಜುಂಬಾ ನೃತ್ಯ ಇನ್ನು ಮುಂತಾದ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಿದ್ದರು. ಇಂತಹ ಕ್ರೀಡೆಗಳನ್ನು ಶಾಲೆಯಲ್ಲಿ ಅಳವಡಿಸುವುದರಿಂದ ಮಕ್ಕಳ ಮಾನಸಿಕ ಬುದ್ದಿಶಕ್ತಿ ಅಲ್ಲದೆ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕ್ರೀಡಾದಿನದಲ್ಲಿ ಆಕ?ಕವಾದದ್ದು ಪ್ರದರ್ಶನ ನಡಿಗೆಯಾಗಿತ್ತು. ಪ್ರದರ್ಶನ ನಡಿಗೆಯು ಎಲ್ಲರ ಗಮನವನ್ನು ಸೆಳೆದಿತ್ತು.ಎ.ಪಿ.ಎಸ್ ಶಾಲೆಯ ಮಕ್ಕಳನ್ನು ವೋಯಜೆರ್ಸ, ಚಾಲೆಂಜರ್ಸ, ಪೈನೀರ್ಸ ಮತ್ತು ಎಕ್ಸಪ್ಲೋರರ್ ಎಂಬ ನಾಲ್ಕು ಗುಂಪುಗಳನ್ನಾಗಿ ಮಾಡಿ ಪ್ರತಿಯೊಂದು ಗುಂಪಿನ ವಿದ್ಯಾರ್ಥಿಗಳು ಆಕ?ಕವಾದ ಪ್ರದರ್ಶನ ನಡಿಗೆಯನ್ನು ಪ್ರದರ್ಶಿಸಿದರು.

ಎನ್ ಪಿ ಎಸ್ ಶಾಲೆಯ ಕ್ರೀಡಾ ನಾಯಕ ಸುಮೀತ್ ನೇತ್ರುತ್ವದಲ್ಲಿ ಸುಂದರವಾದ ಪ್ರದರ್ಶನ ನಡಿಗೆಯನ್ನು ಪ್ರದರ್ಶಿಸಿದರು. ಈ ಕ್ರೀಡಾದಿನದಲ್ಲಿ ಅತ್ಯಂತ ಆರ್ಕ?ಕವಾದದ್ದು ಯೋಗ. ವಿದ್ಯಾರ್ಥಿಗಳು ವಿವಿಧ ಭಂಗಿಯ ಯೋಗದ ಆಸನಗಳನ್ನು ಕೂಡ ಪ್ರದರ್ಶಿಸಿದರು. ಎನ್.ಪಿ.ಎಸ್ ಶಾಲೆಯ ಯುವ ಅಥ್ಲೆಟಿಕ್ ಪಟುಗಳು ವಿವಿಧ ಬಗೆಯ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನೀಯರಿಗಾಗಿ ೧೦೦ ಹಾಗೂ ೨೦೦ ಮೀ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.

ಶಾಟ್ ಪುಟ್, ಡಿಸ್ ಕಸ್ ಥ್ರೋ, ಕೋ ಕೋ, ಕಬಡ್ಡಿ, ಥ್ರೋ ಬಲ್, ವಾಲಿಬಾಲ್, ಟೆನ್ನಿ ಕ್ವಾಟ್ ಇನ್ನೂ ಮುಂತಾದ ಹೊರಾಂಗಣ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೆ ಒಳಾಂಗಣ ಕ್ರೀಡೆಗಳಾದ ಕ್ಯಾರಮ್, ಚೆಸ್,ಟೇಬಲ್ ಟೆನ್ನಿಸ್ ಇನ್ನೂ ಮುಂತಾದ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನ್ಯಾ?ನಲ್ ಪಬ್ಲಿಕ್ ಶಾಲೆಯ ಚೇರ್ ಮನ್ ರಾದ ಶಶೀಲ್ ಜಿ. ನಮೋಶಿ, ನ್ಯಾ?ನಲ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಸುರೇಶ ಡಿ. ಬುಲ್ ಬುಲೆ, ಚಂದ್ರಶೇಖರ್ ರೆಡ್ಡಿ, ಗಣೇಶ ತಪಾಡಿಯ, ಮೊಹಮ್ಮದ್ ಮೊಹಿನುದ್ದಿನ್, ಡಾ. ನಳಿನಿ, ವಿಶ್ವನಾಥ ಖೂಬ, ಡಾ, ಸಂಪತ ಡಿ ಲೋಯ, ವೀರಶೆಟ್ಟಿ ಖೇಣಿ, ಸುನೀಲ ಪಾಟೀಲ್ ಸರಡಗಿ, ಇ?ಲಿಂಗಪ್ಪ ಎಸ್. ಮಹಾಗಾಂವಕರ್, ವಿ? ದಾಸ ತಪಾಡಿಯ, ಕೇಶವರಾವ ಜಿ ನಿತ್ತೂರಕರ್, ಲಕ್ಷ್ಮಣ್ ಎಸ್ ಪತಂಗೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here