ಆಳಂದ: ಧಾರ್ಮಿಕ ತಾರತಮ್ಯದಿಂದಾಗಿ ದೇಶದಲ್ಲಿ ಕದನಕ್ಕೆ ಕಾರಣವಾಗುತ್ತಿದೆ. ಎಲ್ಲ ಧಾರ್ಮಿಕ ಮಾರ್ಗದರ್ಶಕರೂ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಸ್ವಾರ್ಥ ರಾಜಕಾರಣಿಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸುವುದು ಇಂದಿನ ಅಗತ್ಯವಾಗಿದೆ ಎಂದು ಸ್ಥಳೀಯ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ, ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದಲ್ಲಿ ಭಾನುವಾರ ಶಾಂತಿವನ ಚರ್ಚ್ ಹಮ್ಮಿಕೊಂಡ ಕ್ರಿಸಮಸ ಸೌಹಾರ್ದ ಕೂಟದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ದೇಶದಲ್ಲಿನ ಸ್ವಾರ್ಥ ರಾಜಕಾರಣಿಗಳಿಂದ ಭಾರತದ ವಿವಿಧತೆಯಲ್ಲಿ ಸಾರಿದ ಏಕತೆಗೆ ಧಕ್ಕೆಯನುಂಟು ಮಾಡುತ್ತಿದ್ದಾರೆ. ಎಲ್ಲ ಧರ್ಮ ಪ್ರವಾದಿಗಳ ಮಾನವ ಜನಾಂಗದ ಸರ್ವೋತೋಮುಖ ಅಭಿವೃದ್ಧಿಗೆ ಬೋಧನೆ ಕೈಗೊಂಡಿದ್ದಾರೆ. ಅವರು ಹಾಕಿಕೊಟ್ಟ ಶಾಂತಿ ಸಮಾನತೆ ಪ್ರೀತಿ ಸೌರ್ಹಾತೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಕ್ರೈಸ್ತ್ ಧರ್ಮಗುರು ಫಾದರ ಸ್ಕ್ಯಾನಿಲೋಗೋ ಅವರು ಮಾತನಾಡಿ, ಏಸುವಿನ ಸಂದೇಶವಾದ ಶಾಂತಿ, ಪ್ರೀತಿ ವಿಶ್ವಾಸ ಸಹಕಾರದಿಂದ ಬಾಳುವುದನ್ನು ನೆನಪಿಸುವುದೇ ಕ್ರಿಸಮಸ್ ಆಚರಣೆ ಉದ್ದೇಶವಾಗಿದೆ ಎಂದರು.
ಸ್ಥಳೀಯ ಮುಸ್ಲಿಂ ಧಾರ್ಮಿಕ ಗುರು ಮುಸ್ತಕ್ ಮೌಲಾನಾ ರಿಜವಿ ಮಾತನಾಡಿ, ಜಗತ್ತು ಮುನ್ನೆಡೆಸಲು ಒಬ್ಬಾತನೇ ಭಗವಂತನಿದ್ದು, ಆತನ ಅಣತಿಯಂತೆ ನಾವೆಯಲ್ಲ ಮತ, ಪಂಥಗಳ ಭೇದಭಾವ ಮಾಡದೆ ಎಂದೆಯಂದಿಗೂ ನಾವೆಯಲ್ಲರೂ ಒಂದಾಗಿ ದೇವರ ಮಕ್ಕಳಾಗಿ ಬಾಳು ಬಾಂಧವ್ಯವನ್ನು ಯಾರಿಂದಲು ಕಸಿಯಲು ಸಾಧ್ಯವಿಲ್ಲ ಎಂದರು. ಬ್ರಹ್ಮಾಕುಮಾರಿ ಈಶ್ವರಿಯ ವಿದ್ಯಾಲಯದ ವೈಷ್ಣವಿ ದೇವಿ, ಉದ್ಯಮಿ ಸಂತೋಷ ಗುತ್ತೇದಾರ, ಚನ್ನಬಸವ ಪಾಟೀಲ, ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ, ನಿವೃತ್ತ ವೈದ್ಯಾಧಿಕಾರಿ ಡಾ. ಎ.ಎಂ. ಬುಜುರ್ಕೆ, ಶರಣ ಭೀಮಾಶಂಕರ ಮಡಿವಾಳ, ಶೇಖಪ್ಪ ಜಮಾದಾರ, ಪ್ರಕಾಶ ಮೂಲಭಾರತಿ, ಅಬ್ದುಲ ಸಲಾಂ ಸಗರಿ, ದಯಾನಂದ ಶೇರಿಕಾರ, ಅಂಬರಾಯ ಚಲಗೇರಾ, ಮೌಲಾ ಮುಲ್ಲಾ, ಬಾಬುರಾವ್ ಅರುಣೋದಯ, ರಮೇಶ ಲೋಹಾರ, ಪಂಡಿತರಾವ್ ಬಳಬಟ್ಟಿ, ಮೌಂಟ್‌ಕಾರ್ಮೆಲ್ ಶಾಲೆಯ ಪ್ರಚಾರ್ಯ ಸಂದೀಪ, ಫಾದರ ವಿಜಯರಾಜ, ಸಿಸ್ಟರ್, ಶುಶಿಲಾ, ಲಲಿತಾ, ಫೆಬಿಯನ್ ಮತ್ತಿತರರು ಪಾಲ್ಗೊಂಡಿದ್ದರು.
ಶಾಂತವನ ಚರ್ಚ ಧರ್ಮಗುರು ಫಾದರ ಅನಿಲ್ ಪ್ರಸಾದ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಫಾದರ ವಿನಸೆಂಟ್ ನಿರೂಪಿಸಿ ವಂದಿಸಿದರು. ಈ ನಡುವೆ ಮಕ್ಕಳಿಂದ ಏಸುವಿನ ಜನನದ ಕುರಿತು ಕಿರುರೂಪಕ ಹಾಗೂ ಏಸುವಿನ ಶಾಂತಿ ಸಂದೇಶ ಸಾರಿದ ಮಕ್ಕಳ ನೃತ್ಯ ಗಮನ ಸೆಳೆಯಿತು. ಪಟ್ಟಣದ ನಾಗರಿಕರು ಶಾಲಾ ಮಕ್ಕಳು ಪಾಲ್ಗೊಂಡಿದ್ದರು.