ನೆರೆಯಿಂದ ಜನ ಸಂಕಷ್ಟದಲ್ಲಿದ್ದಾರೆ ಜನ್ಮದಿನ ಆಚರಿಸಬೇಡಿ :ಶಾಸಕ ರಾಜುಗೌಡ

0
62

ಸುರಪುರ: ನೆರೆ ಪ್ರವಾಹ ದಿಂದ ಜನ ಸಂಕಷ್ಟದಲ್ಲಿದ್ದಾರೆ ಹಾಗೂ ನನ್ನ ತಾಯಿಯ ಆರೋಗ್ಯವು ಸರಿ ಇಲ್ಲ ಹಾಗೂ ನೆರೆಯಿಂದಾದ ಹಾನಿಯು ಜನರನ್ನು ಕಷ್ಟದಲ್ಲಿ ಸಿಲುಕಿಸಿದೆ ಇತಂಹ ಸಮಯದಲ್ಲಿ ನಾವು ಜನರ ಕಷ್ಟದಲ್ಲಿ ಭಾಗಿಯಾಗಬೇಕೆ ಹೊರತು ಸಂಬ್ರಮಾಚರಣೆಯಲ್ಲಿ ತೊಡಗಬಾರದು ಕಾರಣ ನನ್ನ ಜನ್ಮದಿನ ಆಚರಿಸುವುದು ಬೇಡ ಎಂದು ನಿರ್ಧರಿಸಿದ್ದೇನೆ ಎಂದು ಮಾಜಿ ಸಚಿವ, ಬಿಜೆಪಿ ಪಕ್ಷ ಎಸ್.ಟಿ ಮೂರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ನರಸಿಂಹ ನಾಯಕ ರಾಜುಗೌಡ ತಿಳಿಸಿದರು.

ನಗರದ ಅವರ ನಿವಾಸದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೊದಲೆ ನಮ್ಮ ಭಾಗದಲ್ಲಿ ಬರದಿಂದ ತತ್ತರಿಸಿದ ರೈತರಿಗೆ ಈ ಬಾರಿ iಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ ನದಿಗೆ ನೆರೆ ಸಂಭವಿಸಿ ನಮ್ಮ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಯು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ತೀರಾ ಚಿಂತಾಜನಕ ಪರಿಸ್ಥಿಯಲ್ಲಿ ನಮ್ಮ ರೈತರು ಇರುವಾಗ ಹಾಗೂ ನನ್ನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ ಹೀಗಿರುವಾಗ ಆಚರಣೆ ಬೇಡ. ಅಷ್ಟಕ್ಕೂ ಆಚರಿಸುವುದೆ ಆದರೆ ಯಾವುದಾದರು ದೇವಸ್ಥಾನಕ್ಕೆ ತೆರಳಿ ನನ್ನ ತಾಯಿಯ ಅನಾರೋಗ್ಯದಿಂದ ಬೇಗ ಗುಣಮುಖರಾಗಲಿ ಮತ್ತು ನಮ್ಮ ದೇಶದ ಜನರಿಗೆ ಒಳ್ಳೆಯದಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿ ಎಂದು ತಿಳಿಸಿದರು.

Contact Your\'s Advertisement; 9902492681

ನಂತರ ಪೌರತ್ವ ಕಾಯ್ದೆ ಕುರಿತು ಸುದ್ದಿಗರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ನಮ್ಮ ದೇಶದ ಮುಸ್ಲೀಂರಿಗೆ ಕಾಯಿದೆಯಿಂದ ಯಾವುದೆ ರೀತಿಯ ತೊಂದರೆ ಆಗುವುದಿಲ್ಲ ಈ ಕಾಯ್ದೆಯಿಂದ ಮುಸ್ಲೀಂರಿಗೆ ತೊಂದರೆಯಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇದ್ದಾರೆ ಅವರ ಮಾತಿಗೆ ಯಾರು ಕಿವಿಗೊಡಬೇಡಿ ಮೂದಲು ಕಾಯ್ದೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ ಯಾರೋ ವಿರೋಧ ಪಕ್ಷದವರ ಈ ಕಾಯ್ದೆ ಇಂದ ಮುಸ್ಲೀಂರಿಗೆ ತೊಂದರೆ ಯಾಗುತ್ತದೆ ಎಂದು ಹೇಳಿ ತಮ್ಮ ರಾಜಕೀಯ ಬೆಳ ಬೇಯಿಸಿಕೊಳ್ಳುತ್ತಿದ್ದಾರೆ ಇವರ ಮಾತಿಗೆ ತೆಲೆ ಕೆಡಸಿಕೊಳ್ಳಬೇಡಿ ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ರಾಜಾ ಹಣಮಪ್ಪ ನಾಯಕ (ತಾತಾ), ಬಿಜೆಪಿ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಅಮರಣ್ಣ ಹುಡೇದ, ಜಿಪಂ ಮಾಜಿ ಸದಸ್ಯ ಹೆಚ್.ಸಿ.ಪಾಟೀಲ, ನಗರಸಭಾ ಸದಸ್ಯ ವೇಣುಮಾಧವ ನಾಯಕ, ನರಸಿಂಹ ಪಂಚಮಗಿರಿ, ರಂಗನಗೌಡ ದೇವಿಕೇರಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here