ಸುರಪುರ: ಇಂದಿನ ಯುಗದಲ್ಲಿ ಯಾರೊಬ್ಬ ತಂದೆ ತಾಯಿಯು ಸಹ ತಮ್ಮ ಮಕ್ಕಳನ್ನು ರೈತನಾಗಲು ಬಿಡದ ಪರಿಸ್ಥಿತಿ ಇದೆ. ನಮ್ಮ ದೇಶದಲ್ಲಿ ಹಿಂದೆ ಶೆ.೭೫ ಪ್ರತಿಶತ ಕೃಷಿ ಕ್ಷೇತ್ರ ವಿತ್ತು ಈಗ ಅದು ಸುಮಾರು ಮೂರ ರಿಂದ ನಾಲ್ಕು ಪ್ರತಿಶತ ಕಡಿಮೆಯಾಗಿದೆ ಹೀಗೆ ಆದರೆ ಮುಂದೂಂದು ದಿನ ಅಹಾರಭದ್ರತೆಗೆ ಪೆಟ್ಟು ಬೀಳುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಸಕ ನರಸಿಂಹ ನಾಯಕ ( ರಾಜುಗೌಡ) ಮಾತನಾಡಿದರು.
ನಗರದ ವಾಲ್ಮೀಕಿ ಭವನದಲ್ಲಿ ಸೋಮವಾರ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಂತ್ರಾಜ್ಞ ಯುಗದಲ್ಲಿ ರೈತರು ಸಾವಯವ ಕೃಷಿಯೊಂದಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ವಾದ ಬೆಳೆಯನ್ನು ತೆಗೆಯುವ ನಿಟ್ಟಿನಲ್ಲಿ ಯೋಚಿಸಬೇಕು ಹಾಗೂ ದಯವಿಟ್ಟು ತಾವು ಬೆಳೆಯುವ ಬೆಳೆಗೆ ಎಷ್ಟುಬೇಕೊ ಅಷ್ಟು ರಸಗೊಬ್ಬರ ಕ್ರೀಮಿನಾಷಕಗಳನ್ನು ಉಪಯೋಸಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದರಿಂದ ಅದು ಮನುಷ್ಯನ ಆರೋಗ್ಯಕ್ಕೆ ಹಾನಿಕರವಾಗಲಿದೆ.ಆದ್ದರಿಂದ ಸಾಧ್ಯವಾದಷ್ಟು ರೈತರು ಸಾವಯವ ಕೃಷಿ ಪದ್ದತಿಯನ್ನು ಹಂತ ಹಂತವಾಗಿ ಅಳವಡಿಸಿಕೊಳ್ಳಿ ಎಂದು ರೈತರಲ್ಲಿ ಮನವಿ ಮಾಡಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಹದೇವಮ್ಮ ಬೇವಿನಾಳಮಠ ಮಾತನಾಡಿ, ಇಂದು ರೈತರ ದಿನಾಚರಣೆಯನ್ನು ಕಾಟಾಚಾರಕ್ಕೆ ಆಚರಿಸಿದಂತಿದೆ, ಈ ಕಾರ್ಯಕ್ರಮದಲ್ಲಾದರು ರೈತರ ಕಷ್ಟಗಳನ್ನು ಜನಪ್ರತಿನಿಧಿಗಳು ಆಲಿಸುವರು ಎಂದುಕೊಂಡಿದ್ದೆ ಆದರೆ ಬರೀ ಭಾಷಣದಲ್ಲಿ ಮಾತ್ರ ರೈತರನ್ನು ಶ್ಲಾಘಿಸಿ ಅವರ ಕಷ್ಟಕ್ಕಾಗದ ಜನಪ್ರತಿನಿಧಿಗಳನ್ನು ಕಂಡು ಬೇಸರವಾಗುತ್ತಿದೆ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡದೆ ಹೊದರೆ ಏನು ಕಾರ್ಯಕ್ರಮ ನಡೆಯುತ್ತಿರಲಿಲ್ಲವೆ ಎಂದು ಖಾರವಾಗಿ ಪ್ರಶ್ನಿಸಿ ಈ ರೀತಿ ಮಾಡುವುದರಿಂದ ರೈತರನ್ನು ಅವಮಾನಿಸಿದಂತಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅರ್ಧಕ್ಕೆ ಕಾರ್ಯಕ್ರಮ ದಿಂದ ನಿರ್ಗಮಿಸಿದ ಶಾಸಕ ರಾಜುಗೌಡರ ಮೇಲೆ ಬೇಸರ ವ್ಯಕ್ತಪಡಿಸಿ ಖಾರವಾಗಿ ಮಾತನಾಡಿದರು.
ಪ್ರಾಸ್ತಾವಿಕಾವಾಗಿ ಸಾಹಯಕ ಕೃಷಿ ನಿರ್ದೇಶಕ ದಾನಪ್ಪ ಕ್ಯಾತನಳ್ಳಿ ಮಾತನಾಡಿದರು,ನಂತರ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನಿಸಲಾಯಿತು.ವೇದಿಕೆ ಮೇಲೆ ಜಿಪಂ ಮಾಜಿ ಅಧ್ಯಕ್ಷ ರಾಜಾ ಹಣಮಪ್ಪ ನಾಯಕ (ತಾತ), ಜಿಪಂ ಸದಸ್ಯ ಬಸವರಾಜ ಸ್ಥಾವರಮಠ, ಮರಲಿಂಗಪ್ಪ ಕರ್ನಾಳ, ತಾಪಂ ಅಧ್ಯಕ್ಷೆ ಶಾರದ ಭೀಮಣ್ಣ ಬೇವಿನಾಳ, ಸುರೇಶ ಸಜ್ಜನ, ಹೆಚ್.ಸಿ.ಪಾಟೀಲ, ನಾರಾಯಣ ನಾಯಕ, ಶಿವಲಿಂಗಪ್ಪ ದೊಡ್ಡಮನಿ, ದೊಡ್ಡಕೊತ್ಲಪ್ಪ, ನರಸಿಂಹ ಪಂಚಮಗಿರಿ, ಕೃಷಿವಿಜ್ಞಾನಿ ಡಾ. ಮಲ್ಲಿಕಾರ್ಜೂನ ಕಂಗನಾಳ, ರೈತ ಮುಂಖಡಾರಾದ iಹಾದೇವಮ್ಮ ಬೇವಿನಾಳಮಠ, ಅಯ್ಯಣ್ಣ ಹಾಲಭಾವಿ, ಹಣಮಂತ್ರಾಯ ಮಡಿವಾಳ, ಶಿವಶರಣಪ್ಪ ಸಾಹುಕಾರ, ರುದ್ರಪ್ಪ ಮೇಟಿ ವೇದಿಕೆಲ್ಲಿದ್ದರು.ರೈತರು ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.