ಕ್ರೈಸ್ತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ: ಪಾಪ ಕರ್ಮಗಳ ಮಧ್ಯೆ ಭಯದಲ್ಲಿ ಬದುಕು: ಫಾದರ್

0
133

ವಾಡಿ: ದೇಶದಲ್ಲಿ ಭಯಭೀತಿಯ ವಾತಾವರಣ ನಿರ್ಮಾಣವಾಗಿದೆ. ಕುಟುಂಬದಲ್ಲಿ, ಸಮಾಜದಲ್ಲಿ ಮತ್ತು ವೈಕ್ತಿಕವಾಗಿ ನಾವು ಭಯದೊಡನೆ ಬದುಕು ಸಾಗಿಸುತ್ತಿದ್ದೇವೆ. ರಕ್ಷಿಸುವ ಕರ್ತನಿರುವಾಗ ನಾವು ಕೇವಲ ಪಾಪಗಳಿಗೆ ಮಾತ್ರ ಹೆದರಬೇಕು ಎಂದು ಪಟ್ಟಣದ ಮೆಥೋಡಿಸ್ಟ್ ಚರ್ಚ್ ಫಾದರ್ ರೆವರೆಂಡ್ ಶುಭಾಶಚಂದ್ರ ಹೇಳಿದರು.

ಕ್ರಿಸ್ತ ಜಯಂತಿ ನಿಮಿತ್ತ ಪಟ್ಟಣದ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಸಂಡೆ ಸ್ಕೂಲ್ ಮಕ್ಕಳ ವತಿಯಿಂದ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ದೇವರು ತೆರೆದ ಹೃದಯದವನಾಗಿದ್ದಾನೆ ಎಂದು ಸತ್ಯವೇದದಲ್ಲಿ ಹೇಳಲ್ಪಟ್ಟಿದೆ. ಪರಿಶುದ್ದಾತ್ಮದ ಮರಿಯಳ ಉದರದಲ್ಲಿ ಜನಿಸಿರುವ ಯೇಸು ದೇವರು, ಲೋಕದ ಜನರನ್ನು ಪ್ರೀತಿಸುವವನಾಗಿದ್ದಾನೆ. ಹೀಗಾಗಿ ಕ್ರೈಸ್ತರ ಪಾಲಿಗೆ ಕ್ರಿಸ್ಮಸ್ ಅಸಾಧಾರಣವಾದ ಹಬ್ಬವಾಗಿದೆ ಎಂದು ವಿವರಿಸಿದರು.

Contact Your\'s Advertisement; 9902492681

ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯ ಮುಖ್ಯಶಿಕ್ಷಕಿ ರೆವರೆಂಡ್ ಸಿಸ್ಟರ್ ಸೆಲೀನ್ ಮಾತನಾಡಿ, ದೇವರು ಭೂಲೋಕದಲ್ಲಾಗಲಿ ಅಥವ ಆಕಾಶದಲ್ಲಾಗಲಿ ಇಲ್ಲ. ಆತ ನಮ್ಮಗಳ ಆತ್ಮದಲ್ಲಿದ್ದಾನೆ. ಯೇಸು, ಪರಮಾತ್ಮ, ಅಲ್ಹಾ ಹೀಗೆ ದೇವರಿಗೆ ಹಲವು ಹೆಸರುಗಳಿಂದ ಕರೆಯುತ್ತೇವೆ. ದೇವರು ಮಾತ್ರ ಒಬ್ಬನೇಯಿದ್ದಾನೆ. ಜೀವನದಲ್ಲಿ ಶಾಂತಿ, ಪ್ರೀತಿ, ಕರುಣೆ ಹೊಂದುವುದೇ ನಿಜವಾದ ದೇವರ ಆರಾಧನೆಯಾಗುತ್ತದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಅಬ್ರಾಹ್ಮ ರಾಜಣ್ಣ, ಚರ್ಚ್‌ನ ಸಂಡೆ ಮಕ್ಕಳ ಸ್ಕೂಲ್ ಶಿಕ್ಷಕ ಇಮಾನ್ವೆಲ್, ಮುಖಂಡರಾದ ಸುರೇಶ ಮ್ಯಾಥ್ಯೂ, ಟಿ.ಭಾಸ್ಕರ್, ದತ್ತು ಜಾನೆ, ರಿಚ್ಚರ್ಡ್ ಮರೆಡ್ಡಿ, ರವಿಕುಮಾರ, ವಿಲಿಯಂ ಪ್ರಕಾಶ, ಮಿಸ್ ಮಾರ್ತಾ, ಜಯಶೀಲಾ ಭಾಸ್ಕರ್, ಪ್ರೇಮಾ ಸೇರಿದಂತೆ ಕ್ರೈಸ್ತ ಸಮಾಜದ ನೂರಾರು ಜನರು ಪಾಲ್ಗೊಂಡಿದ್ದರು. ಸಂಡೇ ಸ್ಕೂಲ್ ಮಕ್ಕಳಿಂದ ನೃತ್ಯ, ಹಾಡು, ದೇವರ ವಾಕ್ಯ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here