ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವುದು ಅಗತ್ಯ : ಸೋಮರೆಡ್ಡಿ ಮಂಗಿಹಾಳ

0
71

ಸುರಪುರ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಚಿಂತನೆ ಅರಿವು ಮೂಡಿಸುವುದು ಶಾಲಾ ಹಂತದಲ್ಲಿ ತುಂಬಾ ಪ್ರಮುಖವಾಗಿದೆ. ವಿಜ್ಞಾನವನ್ನು ಪ್ರಾಥಮಿಕ ಹಂತದಲ್ಲೆ ಕಲಿಯುವುದರಿಂದ ಮುಂದಿನ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ತಾಲೂಕು ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ ಅಭಿಪ್ರಾಯಪಟ್ಟರು.

ನಗರದ ಕನ್ಯಾ ಮಾದರಿ ಪ್ರಾಥಮಿಕ ಶಾಲೆ ದರ್ಬಾರ್‌ನಲ್ಲಿ ಅಗಸ್ತ್ಯಾ ಅಂತರಾಷ್ಟ್ರೀಯ ಪ್ರತಿಷ್ಠಾನ ಯಾದಗಿರ ವತಿಯಿಂದ ರಾಷ್ಟ್ರೀಯ ಗಣಿತ ದಿನಾಚರಣೆ ಪ್ರಯುಕ್ತ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ನಂತರ ವಿಜ್ಞಾನ ಶಿಕ್ಷಕರಾದ ಅನಂತಮೂರ್ತಿ ಡಬೀರ್ ಅವರು ಮಾತನಾಡಿ ವಿಜ್ಞಾನ ಹೆಚ್ಚಾಗಿ ವಾಸ್ತವತೆ ಕಾರ್ಯಕಾರಣ ಸಂಬಂಧಗಳನ್ನು ವಿಶ್ಲೇಷಿಸುತ್ತದೆ ಶಾಲಾ ಹಂತದಲ್ಲಿ ವಿಜ್ಞಾನ ಬೋಧನೆಯನ್ನು ಹೆಚ್ಚಾಗಿ ಪ್ರಾಯೋಗಿಕವಾಗಿ ಮಾಡುವುದರಿಂದ ಮಕ್ಕಳ ಅರ್ಥೈಸಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಜೀಮ್ ಪ್ರೇಮ್ಜಿ ಫೌಂಡೇಷನ್ನ ಸಂಪನ್ಮೂಲ ವ್ಯಕ್ತಿಯಾದ ಅನ್ವರ ಜಮಾದಾರ್ ಮಾತನಾಡುತ್ತಾ ಮಕ್ಕಳು ಪ್ರಾಥಮಿಕ ಹಂತದಿಂದಲೇ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಯುತವಾಗಿ ಕಲಿತುಕೊಂಡರೆ ಅವರ ಮುಂದಿನ ಭವಿಷ್ಯ ಉಜ್ವಲವಾಗುವುದು ಎಂದು ಅಭಿಪ್ರಾಯಪಟ್ಟರು, ಮಕ್ಕಳು ವಿಜ್ಞಾನ ಮತ್ತು ಗಣಿತ ವಿಷಯಗಳಾದ ಸೂರ್ಯಗ್ರಹಣ ಚಂದ್ರಗ್ರಹಣ ವಾಸ್ತು ಉರಿಯಲು ಆಮ್ಲಜನಕದ ಅವಶ್ಯಕತೆ ಅಸ್ತಿಪಂಜರ ಮಾನವನ ದೇಹದ ಭಾಗಗಳು ಕಣ್ಣು ಕಿವಿ ಮೂಗು ಭಿನ್ನರಾಶಿಗಳು ಆಕೃತಿಗಳು ಹೀಗೆ ಅನೇಕ ವಿಷಯಗಳ ಕುರಿತು ಮಕ್ಕಳು ಪ್ರಾಯೋಗಿಕವಾಗಿ ವಿವರಿಸಿದರು
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಸುಭಾಶ ಕೊಂಡಗುಳಿ ಅಗಸ್ತ್ಯ ಪ್ರತಿಷ್ಠಾನದ ಸಂಯೋಜಕರಾದ ಮಲ್ಲಿಕಾರ್ಜುನ್, ರಮೇಶ್ ಶಿಕ್ಷಕರಾದ ಜೋಗಪ್ಪ ಮಹಬೂಬ್ ಸುಬಾನಿ ವಿಜಯಲಕ್ಷ್ಮಿ, ಪರ್ವಿನ್ ಬೇಗಂ, ಮಹಾಲಕ್ಷಿ, ಶರಣಯ್ಯ ಸ್ಥಾವರಮಠ, ಅನಿತಾ, ಭಾಗ್ಯ, ಪರಮಣ್ಣ ತೆಳಗೇರಿ ವಿವಿಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here