ಹಂಪಿ, ವಿದ್ಯಾರಣ್ಯ : ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಿಂದ ಆಯೋಜಿಸಿದ ರೇಖಾಚಿತ್ರ ಮತ್ತು ವರ್ಣಚಿತ್ರ ಕಲೆಯ ಸೃಜನಾತ್ಮಕ ಸಂಯೋಜನೆ ಕಾರ್ಯಗಾರ ಹಾಗೂ ವಿಶೇಷ ಉಪಪನ್ಯಾಸ ದೃಶ್ಯಕಲಾ ವಿಭಾಗದ ಕಲಾ ಗ್ಯಾಲರಿಯಲ್ಲಿ ನಡೆಯಿತು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ನಾಡು ನುಡಿಯ ಕೊಡುಗೆಗಳನ್ನು ರೇಖಾಚಿತ್ರ ಮೂಲಕ ವರ್ಣರಂಜಿತವಾಗಿ ಕಲಾವಿದ ಮನಮುಟ್ಟುವ ಹಾಗೇ ಚಿತ್ರಸುವನು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಚಂಸ್ರಹಾಸ ವಾಯ್ ಜಾಲಿಹಾಳ ಅವರು ಮಾತಾನಾಡಿ ಕಲೆಯ ನೆಲೆಗಟ್ಟಿನಲ್ಲಿ ಪರಿಪೂರ್ಣ ಅರ್ಥ ನೀಡುವ ಕಲೆಯನ್ನು ಕಲಾವಿದ ನಿಭಾಯಿಸಬಲ್ಲ ಎಂದರು.
ಇನ್ನು ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ.ಮೋಹನರಾವ್ ಬಿ ಪಾಂಚಾಳ್ ಮತ್ತು ಕುಲಸಚಿವರಾದ ಡಾ.ಸುಬ್ಬಣ್ಣ ರೈ , ಕೃಷ್ಣಗೌಡ ಅವರು ಇದ್ದರು.