ಡಿ. 28 ರಂದು ಡಾ. ಕಾಶೀನಾಥ ಅಂಬಲಗೆ ಅವರ 44 ಕೃತಿಗಳ ಬಿಡುಗಡೆ ಸಮಾರಂಭ

0
85

ಕಲಬುರಗಿ: ಇಲ್ಲಿನ ಪ್ರಗತಿ ಪ್ರಕಾಶನದ ವತಿಯಿಂದ ಪ್ರೊ. ಕಾಶೀನಾಥ ಅಂಬಲಗೆಯವರ ಏಳು ದಶಕಗಳ ಮೇಲೆರಡು ವರ್ಷ ಪಯಣದ ನಿಮಿತ್ತ ನಲವತ್ನಾಲ್ಕು (೪೪) ಪುಸ್ತಕಗಳ ಲೋಕಾರ್ಪಣೆ ಮಹಾಸಂಭ್ರಮ ಕಾರ್ಯಕ್ರಮವನ್ನು ಡಿ. 28ರಂದು ಬೆಳಗ್ಗೆ 10.30ಕ್ಕೆ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜರುಗಲಿದೆ ಎಂದು ಪ್ರಕಾಶಕಿ ಲೀಲಾ ಕಾಶೀನಾಥ ಅಂಬಲಗಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1986ರಿಂದ ಗ್ರಂಥ ಪ್ರಕಾಶನ ಕಾಯಕ ಕೈಗೊಂಡು ಬರುತ್ತಿದ್ದು, ಮೊದಲಿಗೆ ಆರು ಗ್ರಂಥಗಳು, ನಂತರ ಡಜನ್ ಗ್ರಂಥಗಳು, ಮತ್ತೊಮ್ಮೆ ಡಜನ್ ಮೇಲೊಂದು ಗ್ರಂಥಗಳು, ಸದ್ಯ 44 ಗ್ರಂಥಗಳು ಲೋಕಾರ್ಪಣೆ ಯಾಗುತ್ತಿವೆ. ಈ 44 ಗ್ರಂಥಗಳಲ್ಲಿ ಮಾಸ್ಟರ್ ಅದಿತ್ ಬಿರಾದಾರ (ಐದನೆ ತರಗತಿ) ಅವರ ‘ರೇಖೆಗಳು ಬಣ್ಣಗಳು’ ಕೃತಿ ಬಿಡುಗಡೆಯಾಗುತ್ತಿರುವುದು ಅಪರೂಪದ ಸಂಗತಿ ಎಂದರು.

Contact Your\'s Advertisement; 9902492681

ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಗ್ರಂಥಗಳ ಕುರಿತು ಡಾ. ಬಸವರಾಜ ಡೋಣೂರ, ಡಾ. ಅಪ್ಪಗೆರೆ ಸೋಮಶೇಖರ, ಡಾ. ವಿಕ್ರಮ ವಿಸಾಜಿ, ಅಲ್ಲಮಪ್ರಭು ಬೆಟ್ಟದೂರು, ಬಿ.ಆರ್. ಶಿಂದೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಶರಣಬಸವ ವಿವಿ ಕುಲಪತಿ ಡಾ. ನಿರಂಜನ ನಿಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಿಯುಕೆ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಉದ್ಘಾಟಿಸುವರು. ಅಮರಕಂಟಕ ಇಂದಿರಾ ಗಾಂಧಿ ರಾಷ್ಟ್ರೀಯ ವಿವಿ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ, ಪ್ರೊ. ಜನಾರ್ದನ ವಾಘಮಾರೆ, ಪ್ರೊ. ಲಕ್ಷ್ಮಣ ರಾಜನಾಳಕರ, ವಿ.ಜಿ. ಅಂದಾನಿ ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದಾರೆ ಎಂದು ವಿವರಿಸಿದರು.

ಭಾಲ್ಕಿಯ ಡಾ. ಬಸವಲಿಂಗಪಟ್ಟದ್ದೇವರು, ಹಾರಕೂಡ ಚನ್ನವೀರ ಶಿವಾಚಾರ್ಯರು, ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯ ನಿರ್ದೇಶಕ ಸತೀಶಕುಮಾರ ಹೊಸಮನಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು,
ಜಿಲ್ಲಾ ಕಸಾಪ ಅದ್ಯಕ್ಷ ವೀರಭದ್ರ ಸಿಂಪಿ, ಪ್ರಕಾಶಕಿ ಲೀಲಾ ಅಂಬಲಗೆ ಉಪಸ್ಥಿತರಿರಲಿದ್ದಾರೆ ಎಂದರು.

ಹೆತ್ತವರ ಹೆಸರಿಮ ಸಾಹಿತ್ಯ ಪುರಸ್ಕಾರ ೨೦೧೭-೧೮ರ ರಾಜ್ಯ ಮಟ್ಟದ ಶ್ರೇಷ್ಠ ಕೃತಿಗೆ ರೂ. ಹತ್ತು ಸಾವಿರ ನಗದು ಪುರಸ್ಕಾರ ಹಾಗೂ ಸ್ಮರಣಿಕೆಯನ್ನು ಸಾವಿರ ಕಣ್ಣಿನ ನವಿಲು ಕೃತಿಯ ಲೇಖಕ ಗಿರೀಶ ಜಕಾಪುರೆ ಅವರಿಗೆ ನೀಡಲಾಗುವುದು ಎಂದರು.

ಗ್ರಂಥಗಳಿಗೆ ಅಲಂಕಾರಗೊಳಿಸಿದ ಚಿತ್ರಕಲಾವಿದರಾದ ಡಾ. ವಿಜಯ ಹಾಗರಗುಂಡಗಿ, ಡಾ.‌ಅಶೋಕ ಶೆಟಕಾರ, ಡಾ. ಪರುಶುರಾಮ, ಡಾ. ಬಾವರಾಜ ಕಲೆಗಾರ, ಬಾಬುರಾವ, ನಯನಾ ಬಾಬುರಾವ, ಸೃಜನ್ ಹಾಗೂ ಧರ್ಮವೀರ ಸೊಪ್ಪಣ್ಣ, ಪ್ರೊ.‌ಜಿ.‌ಶಂಬಣ್ಣನವರ, ಪ್ರೊ. ಬಾಲಚಂದ್ರ ಜಯಶೆಟ್ಟಿ, ಡಾ. ವಿಜಯಕುಮಾರ ದೇವಪದಪ, ಪ್ರೊ. ಶೋಭಾ ಜಿಗಳೂರ, ಗುರುನಾಥ ಗಡ್ಡೆ ಅವರಿಗೆ ಗೌರವ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಮಾರುತಿ ಗೋಖಲೆ, ದತ್ತಾತ್ರೇಯ ಇಕ್ಕಳಕಿ, ಲೇಖಕ ಡಾ. ಕಾಶೀನಾಥ ಅಂಬಲಗೆ, ವಿ.ಜಿ.‌ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here