ಸುರಪುರ: ಯತಿಶ್ರೇಷ್ಠರಲ್ಲಿ ಒಬ್ಬರಾದ ಶ್ರೀ ಪೇಜಾವರ ಮಠದ ವಿಶ್ವೇಶತೀರ್ಥ ಶೀಪಾದವರು ಇಂದು ನಮ್ಮನ್ನು ಅಗಲಿರುವುದು ಸಮಾಜಕ್ಕೆ ಹಾಗು ಸನಾತನ ಧರ್ಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಪ್ರ ಸಮಾಜದ ಹಿರಿಯರಾದ ನಾರಾಯಣ ಆಚಾರ್ಯರು ಮಾತನಾಡಿದರು.
ಶ್ರೀ ಮಾದ್ವ ಪರಿಷತ್ ಹಾಗು ವಿಪ್ರ ಸಮಾಜದಿಂದ ನಗರದ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪೇಜಾವರ ಶ್ರೀಗಳಿಗೆ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ವಿಶ್ವಮಾನವ ಎನಿಸಿಕೊಂಡು ಅಖಂಡ ೮೨ ವರ್ಷದವರೆಗೆ ಸನ್ಯಾಸ ನಿಯಮ ಪಾಲಿಸಿಕೊಂಡು ಅಯೋಧ್ಯೆಯ ರಾಮ ಮಂದಿರದ ವಿಷಯದಲ್ಲಿ ಈ ಇಳಿ ವಯಸ್ಸಿನಲ್ಲೂ ಸಕ್ರೀಯರಾಗಿ ಭಾಗವಹಿಸಿ ಯಾವ ಜಾತಿ ಭೇದ ಭಾವ ಇಟ್ಟುಕೊಳ್ಳದೆ ಬರಗಾಲದಲ್ಲಾಗಲಿ, ಪ್ರಬಾಹ ಸಂದರ್ಭದಲ್ಲಾಗಲಿ ಸಂತ್ರಸ್ತರ ಪಾಲಿಗೆ ದೇವರಂತೆ ಇದ್ದು ಸಹಾಯ ಹಸ್ತ ಚಾಚಿದ್ದ ದೇಹದಿಮದ ನಮ್ಮನ್ನಗಲಿದರು ಪ್ರತಿಯೊಬ್ಬರ ಹೃದಯದಲ್ಲಿ ಸ್ಥಾನ ಪಡೆದಿರುವ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾಗಿದ್ದರು ಎಂದರು.
ಸಭೆಯಲ್ಲಿ ರಾಮಾಚಾರ ಪಾಲ್ಮೂರ್,ನ್ಯಾಯವಾದಿ ವಿ.ಎಸ್.ಜೋಷಿ,ಸೀತಾರಾಮಚಾರ ಐ.ಜಿ,ನಾಗರಾಜ ಪಾಲ್ಮೂರ್,ಬಿ.ಆರ್.ಜಹಾಗೀರದಾರ,ವೆಂಕಟೇಶ ಭಕ್ರಿ,ನರಸಿಂಹ ಬಮಡಿ,ನರಸಿಂಹ ಬಡಸೇಶಿ, ಶ್ರೀರಾಮಾಚಾರಿ ಪಾಲ್ಮೂರ,ಧೀರೇಂಧ್ರ ಕುಲಕರ್ಣಿ, ರಾಮಾಚಾರಿ ಜೋಷಿ ಜಾಅಲಿಬೆಂಚಿ, ನರಸಿಂಹ ಬಾಡಿಯಾಳ ರಾಘವೇಂದ್ರ ಭಕ್ರಿ,ಪ್ರಮೋದ ಜಹಾಗೀರದಾರ ಸೇರಿದಂತೆ ಅನೇಕರಿದ್ದರು.