ಸುರಪುರ: ಹಿಂದಿನಿಂದಲೂ ಕನ್ನಡದ ಗಡಿ ವಿಷಯದಲ್ಲಿ ಕ್ಯಾತೆ ತೆಗೆಯುವ ಮರಾಠಿಗರೆ ಕನ್ನಡಕ್ಕೆ ಅಪಮಾನಿಸುವುದನ್ನು ಮುಂದುವರೆಸಿದರೆ ಕನ್ನಡಿಗರು ನಿಮಗೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ದೊಡ್ಮನಿ ಮಹಾರಾಷ್ಟ್ರ ಸರಕಾರದ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಶಿವಸೇನೆ ವಿರುಧ್ಧ ಘೋಷಣೆಗಳನ್ನು ಕೂಡಿ ಮಾತನಾಡಿ,ನೀವು ಶಿವಸೇನೆ ಹೆಸರಲ್ಲಿ ಸಂಘಟನೆ ಕಟ್ಟಿಕೊಂಡು ಗೂಂಡಾಗಿರಿ ನಡೆಸಿತ್ತೀರಿ.ಆದರೆ ನಿಮ್ಮ ಶಿವಾಜಿಯು ನಮ್ಮ ಕನ್ನಡ ನೆಲದಲ್ಲಿ ಜನಸಿದಾತ.ಅಂತವರ ಹೆಸರಲ್ಲಿ ನೀವು ಪುಂಡಾಟ ನಡೆಸಿದರೆ ನಿಮ್ಮ ರಾಜ್ಯದ ವಾಹನಗಳು ಮತ್ತು ಜನರು ಇಲ್ಲಿ ತೊಂದರೆ ಅನುಭವಿಬೇಕಾಗುತ್ತದೆ. ಈಗಾಗಲೆ ಬೆಳಗಾವಿ ಕನ್ನಡದ ಅವಿಭಾಜ್ಯ ಅಂಗವೆಂದು ಮಹಾಜನ್ ವರದಿ ಅಂದೆ ಹೇಳಿದೆ.ಅದನ್ನು ಒಪ್ಪಿಕೊಳ್ಳದೆ ಪದೆ ಪದೆ ಕ್ಯಾತೆ ತೆಗದರೆ ನಾವೂ ಕವಿರಾಜಮಾರ್ಗ ಹೇಳುವಂತೆ ಕಾವೇರಿಯಿಂದ ಗೋದಾವರಿಗಿದ್ದ ನಮ್ಮ ಕರ್ನಾಟಕ ಎಂದು ನಿಮ್ಮ ಮಹಾರಷ್ಟ್ರವೇ ನಮ್ಮದೆನ್ನಬೇಕಾಗಲಿದೆ ಎಚ್ಚರವಿರಲಿ ಎಂದರು.
ಬೆಳಗಾವಿ ಒಂದಿಡಿ ಮಣ್ಣು ನಿಮಗೆ ಸಿಗುವುದಿಲ್ಲ ಇದು ನಿಮಗೆ ಎಚ್ಚರಿಕೆಯಾಗಿದೆ.ನಮ್ಮ ರಾಜ್ಯಾಧ್ಯಕ್ಷರಾದ ಭೀಮಾಶಂರ ಪಾಟೀಲರು ಮತ್ತು ಕನ್ನಡ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ.ಕರ್ನಾಟಕ ಗಡಿಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವ ನೀವು ಗೂಂಡಾಗಳಾಗಿದ್ದೀರಿ ಎಂದು ಶಿವಸೇನೆ ಮತ್ತು ಎಂ.ಇ.ಎಸ್ ಮೇಲೆ ಕಿಡಿ ಕಾರಿದರು ಹಾಗು ರಾಜ್ಯ ಸರಕಾರ ಕನ್ನಡ ಧ್ವಜಕ್ಕೆ ಅಪಮಾನಿಸಿದ ಗೂಂಡಾಗಳ ಮೇಲೆ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ತಾಲೂಕು ಅಧ್ಯಕ್ಷ ಬಸವರಡ್ಡಿಗೌಡ ಯಾಳಗಿ,ಸುನೀಲ್ ಬಹಾದ್ದೂರ್,ಚಾಂದ್ಪಾಶ ಮುಲ್ಲಾ,ಶಿವು ಸಾಸನೂರ್,ವಿಜಯ ನಾಯಕ,ತಿಪ್ಪನಗೌಡ,ಪ್ರಕಾಶರೆಡ್ಡಿ ಮುದನೂರ ಸೇರಿದಂತೆ ಅನೇಕರಿದ್ದರು.