ತಗ್ಗುದಿನ್ನೆಗಳಿಂದ ಹದಗೆಟ್ಟಿರುವ ಕುಂಬಾರಪೇಟೆ ಹೆಗ್ಗಣದೊಡ್ಡಿ ರಸ್ತೆ: ಯಾವಾಗಿದರ ದುರಸ್ಥೆ

0
100
  • ರಾಜು ಕುಂಬಾರ

ಸುರಪುರ: ತಾಲೂಕಿನಲ್ಲಿಯ ಬಹುತೇಕ ರಸ್ತೆಗಳು ದುರಸ್ತಿ ಕಾಣದೆ ಹಲವಾರು ವರ್ಷಗಳು ಕಳೆದಿವೆ.ಗ್ರಾಮೀಣ ಭಾಗದ ರಸ್ತೆಗಳ ಕತೆ ದೇವರಿಗೆ ಪ್ರೀತಿ ಎನ್ನುವಂತಾಗಿದೆ.ಅದರಲ್ಲಿ ಕುಂಬಾರಪೇಟೆಯಿಂದ ತಳವಾರಗೇರಾ ವಾಗಣಗೇರಾ ಅಮ್ಮಾಪುರ ಜಾಲಿಬೆಂಚಿ ಹಾಗು ಚಿಗರಿಹಾಳ ಮಾರ್ಗವಾಗಿ ಹೆಗ್ಗಣದೊಡ್ಡಿ ಮೂಲಕ ಕೂಡಲಗಿ ಕೆಂಭಾವಿ ತಲಪುವ ರಸ್ತೆಯನ್ನು ನೊಡಿದರೆ ಎಂತವರು ತಾಲೂಕಿನ ರಸ್ತೆಗಳ ಹಣೆಬರಹ ಗೊತ್ತಾಗಲಿದೆ.

ಕುಂಬಾರಪೇಟೆಯಿಂದ ಹೆಗ್ಗಣದೊಡ್ಡಿಗೆ ೨೫ ಕಿಲೋ ಮೀಟರ್ ದೂರವಿದೆ.ಇಲ್ಲಿಗೆ ತಲುಪಲು ಬಸ್ಸುಗಳು ಕನಿಷ್ಟ ಎರಡು ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದೆ ಎಂದರೆ ನಂಬಲೆಬೇಕಿದೆ.ಅಲ್ಲದೆ ಈ ರಸ್ತೆಯು ಜಾಲಿಬೆಂಚಿಯಿಂದ ಹೆಗ್ಗಣದೊಡ್ಡಿವರೆಗೆ ಜಾಲಿಕಂಟಿಗಳು ರಸ್ತೆಯ ಎರಡೂ ಬದಿಗಳಲ್ಲಿ ಆವರಿಸಿರುವುದರಿಂದ ಸಾರಿಗೆ ಬಸ್ಸುಗಳು ಈಗ ಸುಮಾರು ಎರಡು ತಿಂಗಳುಗಳಿಂದ ಓಡಾಟವನ್ನೆ ನಿಲ್ಲಿಸಿವೆ.

Contact Your\'s Advertisement; 9902492681

ಇದರಿಂದ ಈ ಭಾಗದ ಜಾಲಿಬೆಂಚಿ ಚಿಗರಿಹಾಳ ಮತ್ತು ಹೆಗ್ಗಣದೊಡ್ಡಿಯಿಂದ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಓದಿನ ಮೇಲು ಈ ಹದಗೆಟ್ಟ ರಸ್ತೆ ಪರಿಣಾಮ ಬೀರಿದೆ. ಅಲ್ಲದೆ ಈ ಗ್ರಾಮಗಳಿಂದ ಸುರಪುರ ನಗರಕ್ಕೆ ಬರುವ ಸಾರ್ವಜನಿಕರು ಹಾಗು ಸಣ್ಣ ಪುಟ್ಟ ವ್ಯಾಪಾರಸ್ತರಿಗು ಇದು ಪರಿಣಾಮ ಬೀರಿದೆ.ರಸ್ತೆ ದುರಸ್ತಿಯ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅನೇಕಬಾರಿ ತಾಲೂಕು ಆಡಳಿತಕ್ಕೆ ಮೌಖಿಕವಾಗಿ ಮನವಿ ಮಾಡಿದರು ಪ್ರಯೋಜನೆಯಾಗುತ್ತಿಲ್ಲ ಎನ್ನುತ್ತಾರೆ ಈ ಭಾಗದ ಜನರು ಹಾಗು ವಿದ್ಯಾರ್ಥಿಗಳು.

ಹೆಗ್ಗಣದೊಡ್ಡಿ ರಸ್ತೆ ಮುಳ್ಳು ಕಂಟಿ ಮತ್ತು ತೆಗ್ಗುಗಳಿಂದಾಗಿ ಬಸ್ಸುಗಳು ಬರುತ್ತಿಲ್ಲ ಇದರಿಂದ ಜನರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ.ಶೀಘ್ರವೆ ರಸ್ತೆ ದುರಸ್ತಿ ಮಾಡದಿದ್ದಲ್ಲಿ ಜನರಿಂದ ಭೀಕ್ಷೆ ಬೇಡಿ ರಸ್ತೆ ದುರಸ್ತಿಗೆ ಮುಂದಾಗಿ ಆಡಳಿತದ ಮಾನ ಹರಾಜು ಹಾಕಲಾಗುವುದು                                  – ಮಾಸುಮಸಾಬ ತಿಂಥಣಿ ಗ್ರಾಮ ಪಂಚಾಯತಿ ಸದಸ್ಯರು ಜಾಲಿಬೆಂಚಿ.

ಕುಂಬಾರಪೇಟೆಯಿಂದ ಹೆಗ್ಗಣದೊಡ್ಡಿ ವರೆಗೆ ರಸ್ತೆ ದುರಸ್ತಿಗೊಳಿಸಲಾಗದೆ ತಾಲೂಕು ಆಡಳಿತ ಜನರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ.ಇದೇ ರೀತಿ ನಿರ್ಲಕ್ಷ್ಯ ಮುಂದುವರೆಸಿದರೆ ಈ ಭಾಗದ ಎಲ್ಲಾ ಗ್ರಾಮದ ಜನರು ಕುಂಬಾರಪೇಟೆ ವೃತ್ತದಲ್ಲಿ ರಸ್ತಾರೋಖಾ ನಡೆಸುವ ಜೊತೆಗೆ ಲೋಕೊಪಯೋಗಿ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘಟನೆಯ ಹೋರಾಟಗಾರ ವೀರಭದ್ರಪ್ಪ ತಳವಾರಗೇರಾ ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here