ಸಮಾಜ ಸೇವಾ ಮನೋಭಾವನೆಯಿಂದ ಜೀವನದ ಸಾರ್ಥಕತೆ: ಪ್ರೊ.ಶರಣು ಬಿ.ಪೂಜಾರಿ

0
85

ಕಲಬುರಗಿ: ದೇಶ ನಮಗೇನು ಮಾಡಿದೆಯೆಂಬುದಕ್ಕಿಂತ, ದೇಶಕ್ಕಾಗಿ ನಾವೇನೂ ನೀಡಿದ್ದೇವೆಂದು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಸಲುವಾಗಿಯೇ ಸ್ವಾರ್ಥ ಜೀವನ ನಡೆಸಿದರೆ ಉಪಯೋಗವಿಲ್ಲ.ಬದಲಿಗೆ ಸಮಾಜದಲ್ಲಿರುವ ಅನಾಥರು, ಬಡವರು, ಸಮಾಜದ ಒಳಿತಿಗೆ ಕೈಲಾದ ಸೇವೆಯನ್ನು ಮಾಡುವ ಗುಣ ಬೆಳೆಸಿಕೊಂಡರೆ ಸಾರ್ಥಕ ಜೀವನ ನಮ್ಮದಾಗಲು ಸಾಧ್ಯವಿದೆಯೆಂದು ಸಮಾಜ ಸೇವಕ, ಚಿಂತಕ ಪ್ರೊ.ಶರಣು ಬಿ.ಪೂಜಾರಿ ಅಭಿಪ್ರಾಯಪಟ್ಟರು.

ಅವರು ನಗರದ ಹೊರವಲಯದ ’ಮಹಾದೇವಿ ತಾಯಿ ವೃದ್ಧಾಶ್ರಮ’ದಲ್ಲಿ, ಸಮಾಜ ಸೇವಕ ಪ್ರೊ.ಸಂತೋಷ ಬಿ.ಪೂಜಾರಿ ಅವರ ಜನ್ಮ ದಿನಾಚರಣೆ, ಹೊಸ ವರ್ಷಾಚರಣೆ ಪ್ರಯುಕ್ತ, ’ಬಸವೇಶ್ವರ ಸಮಾಜ ಸೇವಾ ಬಳಗ’, ’ಅನನ್ಯ ಪದವಿ ಹಾಗೂ ಸ್ನಾತಕೋತ್ತರ ಕಾಲೇಜು’ ಮತ್ತು ’ಶುಭೋದಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಮಾಜ ಸೇವಾ ಸಂಸ್ಥೆ’ ಇವುಗಳ ಸಹಯೋಗದೊಂದಿಗೆ ಮಂಗಳವಾರ ವಯೋ ವೃದ್ಧರಿಗೆ ಬಟ್ಟೆ, ಹಣ್ಣುಗಳನ್ನು ವಿತರಿಸಿ ಅರ್ಥಪೂರ್ಣ ಹೊಸವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಮಾತನಾಡಿ, ಹೊಸ ವರ್ಷಾಚರಣೆ ನೆಪದಲ್ಲಿ ಪ್ರತಿವರ್ಷ ಸಾಕಷ್ಟು ದುಂದು ವೆಚ್ಚವನ್ನು ಮಾಡಲಾಗುತ್ತದೆ. ಮೋಜು-ಮಸ್ತಿಗಾಗಿ ವೆಚ್ಚ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವ ಜೊತೆಗೆ, ಜೀವತೆರುವ ಘಟನೆ ಜರುಗುತ್ತಿರುವುದು ವಿಷಾದನೀಯವಾಗಿದೆ. ಸಾಮಾಜಿಕ ಸ್ವಾಸ್ಥ ಕೆಡೆಸುವಂತಹ ಆಚರಣೆ ಮಾಡುವುದು ಸಮಂಜಸವಲ್ಲ. ನಾವೂ ಮಾಡುವ ಪ್ರತಿಯೊಂದು ಆಚರಣೆಗೂ ತನ್ನದೇಯಾದ ಮೌಲ್ಯ, ವೈಚಾರಿಕತೆ ಇದ್ದರೆ, ಅದಕ್ಕೆ ಹೆಚ್ಚಿನ ಬೆಲೆ ಬರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸಮಾಜಕ್ಕೆ ಮಾದರಿಯ ಸಂದೇಶವನ್ನು ನೀಡುತ್ತದೆಯೆಂದು ಹೇಳಿದರು.

ಬಳಗದ ಕಾರ್ಯದರ್ಶಿ ಹಾಗೂ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಬಿ.ಮರಡಿ ಮಾತನಾಡಿ, ಇಲ್ಲಿನ ಮಕ್ಕಳಿಗಾಗಿ ನಮ್ಮ ಶಾಲೆಯಲ್ಲಿ ಡೊನೇಷನ ರಹಿತವಾಗಿ ಮತ್ತು ಅತ್ಯಂತ ಕಡಿಮೆ ಶುಲ್ಕದಲ್ಲಿ ಪ್ರವೇಶಾತಿಯನ್ನು ನೀಡಲಾಗುತ್ತದೆ. ಇದರ ಸದುಪಯೋಗವನ್ನು ಪಡೆದು ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂತೋಷ ಬಿ.ಪೂಜಾರಿ,ಜಲಜಾಕ್ಷಿ ಕೋರೆ, ರಾಜೇಂದ್ರ ರಾಜವಾಳ್, ಪ್ರೊ.ಸಂದೀಪ ಸಲಗರ, ಪ್ರೊ.ದೇವಿಂದ್ರಪ್ಪ ವಿಶ್ವಕರ್ಮ, ಪ್ರದೀಪಕುಮಾರ ಕಳ್ಳಿಮನಿ,ಅಮರ ಬಂಗರಗಿ, ಉದಯ, ಅಭಿಲಾಷ, ರಾಮು ಸಿ.ಆರ್, ನೀಲಾಂಬಿಕಾ ಸುಗೂರ, ಶಶಿಕಲಾ ಪಾಟೀಲ, ಮಂಜುಳಾ ಪಾಟೀಲ, ಪುಷ್ಪಾ ಪಾಟೀಲ, ಜ್ಯೋತಿ ಟಿಸಕೆ, ಯಲ್ಲಾಲಿಂಗ ವಗ್ಗರೆ ಸೇರಿದಂತೆ ವೃದ್ಧಾಶ್ರಮದ ನಿವಾಸಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here