ಢಾಂಬಿಕ ಜೀವನಶೈಲಿಯಿಂದ ಮಾನಸಿಕ ಅಸ್ವಸ್ತತೆ ಹೆಚ್ಚಳ: ಡಾ. ಅರುಂಧತಿ ಪಾಟೀಲ

0
127

ಕಲಬುರಗಿ: ಢಾಂಬಿಕ ಜೀವನಶೈಲಿಯಿಂದಾಗಿ ಮಾನಸಿಕ ಅಸ್ವಸ್ತತೆ ಹೆಚ್ಚಾಗಿ ಕಂಡು ಬರುತ್ತಿದ್ದು, ಇವುಗಳಿಗೆ ವಚನ ಸಹಿತ್ಯದ ನಡೆ-ನುಡಿಗಳೇ ಮದ್ದು ಎಂದು ಸಂಗಮೇಶ್ವರ ಆಸ್ಪತ್ರೆ ಅಧೀಕ್ಷಕಿ ಡಾ. ಅರುಂಧತಿ ಪಾಟೀಲ ಅಭಿಪ್ರಾಯಪಟ್ಟರು.

ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಸರ್ಕಾರಿ ಶಿಕ್ಷಕಿಯರ ತರಬೇತಿ (ಎಸ್.ಟಿ.ಬಿ.ಟಿ) ಸಂಸ್ಥೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ “ಅನುದಿನ ಹರ್ಷ ವಚನ ವರ್ಷ” ಕಾರ್ಯಕ್ರಮದಲ್ಲಿ ವಿಶೇಷ ಅನುಭಾವ ನೀಡಿದ ಅವರು, ಸಾಧ್ಯವಿಲ್ಲದ್ದರ ಬಗ್ಗೆ ಆಸೆ, ಅತಿಯಾಸೆ ಹೊಂದುವುದು, ತಕ್ಷಣಕ್ಕೆ ಫಲಿತಾಂಶ ದೊರೆಯಬೇಕು ಎಂಬ ಹಪಾಹಪಿಯಿಂದಾಗಿ ಇಂದಿನ ಯುವಕರು ತಮ್ಮ ಬದುಕನ್ನು ಮೂರಾ ಬಟ್ಟೆ ಮಾಡಿಕೊಂಡು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬದುಕಿನ ಬಂಧುರತೆಗೆ ವಚನಕಾರರ ಜೀವನ ಶೈಲಿ ಹಾಗೂ ಅವರ ಅನುಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಕಮಲಾಪುರ ತಹಸೀಲ್ದಾರರಾದ ಅಂಜುಮ್ ತಬಸ್ಸುಮ್ ವಚನ ನಿತ್ಯ ನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಪ್ರಾಚಾರ್ಯೆ ಬಸಂತಬಾಯಿ ಅಧ್ಯಕ್ಷತೆ ವಹಿಸಿದ್ದರು. ಶರಣ ಚಿಂತಕರಾದ ಸಂಗೀತಾ ಉಳ್ಳಾಗಡ್ಡಿ, ರಂಜಿತಾ ಶಿವು ದೊಡ್ಡಮನಿ, ಗುಲ್ಬರ್ಗ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಸತೀಶ ಅಳ್ಳೋಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ೧೨ನೇ ಶತಮಾನದ ವಚನಕಾರರ ಯುಗ ಅದು ಬೆಳಕಿನ ಸಂಪುಟವಿದ್ದಂತೆ, ಅಂತಹ ಒಳ್ಳೆಯ ಬದಲಾವಣೆಯ ಬೆಳಕು ನಮ್ಮ ಬದುಕಿನಲ್ಲೂ ಬರಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.

ನಂತರ ನಡೆದ ಹೊಸ ಬೆಳಗಿನ ಪರಿ ಕಾರ್ಯಕ್ರಮದಲ್ಲಿ ಶರಣ ಸಾಹಿತಿ ಶಿವರಂಜನ್ ಸತ್ಯಂಪೇಟೆ ಅವರು “ವಚನ ಸತ್ಯ ದರ್ಶನ” ವಿಷಯ ಕುರಿತು ಮಾತನಾಡಿ, ಬದುಕಿಗೆ ಬೆಲೆ ಕೊಟ್ಟ ಶರಣರು, ಬದುಕನ್ನು ಸ್ವೀಕರಿಸುವ ಕ್ರಮ ಆಧುನಿಕ ತಾಂತ್ರಿಕ ಉತ್ಕರ್ಷದಲ್ಲಿರುವ ಈ ಹೊತ್ತಿಗೂ ವಚನ ಪ್ರಜ್ಞೆಯಾಗಿ ಮಹತ್ವ ಪಡೆದುಕೊಂಡಿದೆ. ವಾಸ್ತವ ಬದುಕಿಗೆ ಬೆಲೆ ಕೊಟ್ಟವರು ವಚನಕಾರರ ನಡೆ-ನುಡಿ ಸಿದ್ಧಾಂತದಿಂದ ಪಾಕಗೊಂಡಿದ್ದರಿಂದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.

“ವಚನ ವೈಚಾರಿಕ ದರ್ಶನ” ವಿಷಯ ಕುರಿತು ಗುಲ್ಬರ್ಗ ವಿವಿ ಮಾಜಿ ಕುಲಪತಿ ಪ್ರೊ. ಎಸ್.ಪಿ. ಮೇಲ್ಕೇರಿ ಮಾತನಾಡಿ, ದೇವರು ಧರ್ಮದ ಹೆಸರಿನ ಮೇಲೆ ಭ್ರಷ್ಟಾಚಾರ, ಅನ್ಯಾಯ, ಅತ್ಯಾಚಾರ, ಶೋಷಣೆ ಮುಂತಾದ ಸಾಮಾಜಿಕ ಪಿಡುಗುಗಳು ಹೆಚ್ಚಾಗುತ್ತಿವೆ. ಶರಣರು ಅರಿವು, ಜ್ಞಾನದಂತಹ ವೈಚಾರಿಕ ನಿಲುವುಗಳನ್ನು ಬೆಳೆಸಿದರು ಎಂದು ಹೇಳಿದರು.

ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಬಿ. ರಾಂಪುರೆ ಅಧ್ಯಕ್ಷತೆ ವಹಿಸಿದ್ದರು. ಶಕುಂತಲಾ ಪಾಟೀಲ ಜಾವಳಿ, ಬಸವರಾಜ ಸಾಲಿ, ಶಿವಶರಣಪ್ಪ ಕೋಳಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಮೇಶ್ವರ ಶೆಟಕಾರ, ಪ್ರಸನ್ನ ವಾಂಜರಖೇಡ, ಸತೀಶ ಸಜ್ಜನ್, ಸಂಗಣ್ಣ ಗುಳಗಿ, ಹಣಮಂತರಾಯ ಅಟ್ಟೂರ, ಶಿವಶರಣ ಕುಸನೂರ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here