ಕಲಬುರಗಿ: ಪೌರತ್ವ ಕಾಯ್ದೆ ವಿರೋಧಿ ದೇಶವ್ಯಾಪಿ ಡಿ. ೧೯ ರಂದು ನಡೆದ ಮುಷ್ಕರ ಬೆಂಬಲಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಹಾಗೂ ರಾಜ್ಯ ಕಾನೂನು ತಮ್ಮ ವಿವೇಚನೆಯಂತೆ ಬಳಸಿಕೊಂಡು ಅಮಾಯಕ ಕಾರ್ಮಿಕರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಯಿತು. ಮೃತ ಕುಟುಂಬಕ್ಕೆ ಪರಿಹಾರ ಧನ ಹಿಂದಕ್ಕೆ ಪಡೆದ ರಾಜ್ಯ ಸರ್ಕಾರ ಮಾನವೀಯತೆಯನ್ನೆ ಮರೆತಿದೆ ಎಂದು ಪೀಪಲ್ಸ್ ಫೋರಂ ಕಲಬುರಗಿಯ ಮುಖಂಡ ಮಾರುತ್ತಿ ಮಾನ್ಪಡೆ ಆರೋಪಿಸಿದರು.
ಅವರು ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪೊಲೀಸರು ಉದ್ದೇಶಪೂರಕವಾಗಿ ಶಾಂತಿಯುತ ಪ್ರತಿಭಟನೆ ನಡೆಯುವ ಜನರ ಮೇಲೆ ಮೊದಲು ಲಾಠಿ ಬಲ ಪ್ರಯೋಗ ಮಾಡಿದರು. ನಂತರ ಅಮಾಯಕರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಗೋಲಿಯನ್ನು ಹಾರಿಸಿದ ಪೊಲೀಸ್ ಅಧಿಕಾರಿಯು ಇನ್ನೂ ಸತ್ತಿಲ್ಲವೇ ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿಗೆ ಕೇಳುವ ವಿಡಿಯೋ ವೈರಲ್ ಆಗಿದೆ. ಅದನ್ನು ಮುಚ್ಚಿ ಹಾಕಲು ವಿಡಿಯೋ ಎಡಿಟ್ ಮಾಡಿದ ಇತರೆ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಬಿಟ್ಟು ತೆಪೆ ಹಚ್ಚು ಕೆಲಸ ಮಂಗಳೂರು ಪೊಲೀಸರು ಮಾಡಿದ್ದಾರೆ ಎಂದು ಕೀಡಿಕಾರಿದರು.
ಘಟನೆಯಲ್ಲಿ ಮೃತ ಪಟ್ಟ ಇಬ್ಬರು ಯುವಕರು ಕೂಲಿ ಕಾರ್ಮಿಕರಾಗಿದ್ದಾರೆ. ಅವರುದುಡಿದ ತಂದ ಹಣದಲ್ಲಿ ಮನೆಯವರ ಜೀವನ ಸಾಗಿಸುತ್ತಿದ್ದರು. ಮನೆಗೆ ಆಧಾರ ಸ್ತಂಭವಾಗಿದ್ದವರೇ ಮೃತ ಪಟ್ಟಮೇಲೆ ಆ ಮನೆಗಳಿಗೆ ಆಸರೆ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ತನಿಖೆ ನಡೆಸಲು ಆದೇಶಿಸಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಥಳಿಯ ಬಿಜೆಪಿ ನಾಯಕರ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಅವರು ನ್ಯಾಯಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಎನ್‌ಆರ್‌ಸಿಯನ್ನು ನಡೆಸುವದಿಲ್ಲ ಎಂದು ಒಂದು ಕಡೆ ಹೇಳಲಾಗುತ್ತಿದೆ. ಇನ್ನೊಂದು ಅದನ್ನು ಜಾರಿಗೆ ಮಾಡಲು ಚಿಂತನೆ ನಡೆದಿದೆ ಎಂದು ಇನ್ನೊಬ್ಬ ನಾಯಕ ಹೇಳುತ್ತಾನೆ. ಇಲ್ಲಿ ತಮ್ಮ ಹಿರಿಯ ವಯಸ್ಸು ಮತ್ತು ಅವರ ಈ ದೇಶದ ನಾಗರಿಕರು ಎಂದು ಹೇಳುವದಕ್ಕೆ ಪ್ರಮಾಣ ಪತ್ರ ತಂದು ಕೊಡಬೇಕು ಅದನ್ನು ಎಲ್ಲಿಂದ ತರಬೇಕು ಎನ್ನುದೇ ಒಂದು ಗೊಂದಲವಾಗಿದೆ ಎಂದು ಮುಖಂಡರಾದ ನಾಸೀರ ಹುಸೇನ್ ಉಸ್ತಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಶ್ನಿಸಿದ ಅವರು ತಕ್ಷಣ ಎನ್‌ಆರ್‌ಸಿ ತಡೆಯಬೇಕು ಎಂದು ಒತ್ತಾಯಿಸಿದರು.
ಪೌರತ್ವ ಕಾಯ್ದೆಯು ಕೇವಲ ಮುಸ್ಲಿಂರಿಗೆ ಏಕೆ? ನೆರೆಯ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ವಲಸಿಗರನ್ನು ತಗೆಯಲು ಪೌರತ್ವ ಕಾಯ್ದೆ ತರಲಾಗಿದೆ. ಆ ದೇಶಗಳಿಂದ ಬರುವ ಹಿಂದು, ಕ್ರಿಶ್ಚಿಯನ್, ಇತರೆ ಧರ್ಮಿಯರು ಬಂದರೆ ಅವರಿಗೆ ಪೌರತ್ವ ನೀಡಲಾಗುತ್ತದೆ. ಕೇವಲ ಮುಸ್ಲಿಂರು ಬಂದರೆ ಅವರಿಗೆ ನೀಡಲು ನಿರಾಕರಣೆ ಮಾಡುತ್ತಿರುವದು ಧರ್ಮವನ್ನು ವಿಭಜಿಸಿ ದೇಶದಲ್ಲಿ ಆಶಾಂತಿ ಮೂಡಿಸುವದು ಕೇಂದ್ರ ಬಿಜೆಪಿ ಸರಕಾರದ ಉದ್ಧೆಶವಾಗಿದೆ ಎಂದು ಇನ್ನೊಬ್ಬ ಮುಖಂಡ ಅಸಗರ್ ಚುಲಬುಲ್ ಅವರು ಬೇಸರ ವ್ಯಕ್ತ ಪಡಿಸಿದರು.