ಕಲಬುರಗಿ: ರಾಜ್ಯ ಕೃಷಿ ಇಲಾಖೆಯಲ್ಲಿ ರೈತ ಅನುವುಗಾರರಾಗಿ(ತಾಂತ್ರಿಕ ಉತ್ತೇಜನಕಾರ) ಸೇವೆ ಸಲ್ಲಿಸುವತ್ತಿರುವ ನೌಕರರ ವೇತನ ಹೆಚ್ಚಳಕ್ಕಾಗಿ ಜ. ೭ ರಿಂದ ಬೆಂಗಳೂರಿನ ಫ್ರೀಡ್ಂ ಪಾರ್ಕ್‌ನಲ್ಲಿ ಅನಿರ್ದಿಷ್ಟಿತ ಧರಣ ಸತ್ಯಗ್ರಹ ನಡೆಸಲಾಗುವದು ಎಂದು ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ತಿಳಿಸಿದರು.
ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ೨೦೦೮-೦೯ರಿಂದ ರೈತರಿಗೆ ತಾಂತ್ರಿಕ ಉತ್ತೇಜಕರಾಗಿ ಕೃಷಿ ಚಟುವಟಿಕೆಯಲ್ಲಿ ರೈತರಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿರುವ ಅನುವುಗಾರರು ಇಂದು ವೇತನ ಸರಿಯಾಗಿ ಸಿಗದೇ ಇರುವ ಕಾರಣ ಅನೇಕ ಸಂಕಷ್ಟದಲ್ಲಿ ಇದ್ದಾರೆ. ರಾಜ್ಯದಲ್ಲಿ ಸುಮಾರು ೬೫೦೦ ಜನ ಕಡಿಮೆ ವೇತನದಲ್ಲಿ ಕೃಷಿಕರೊಂದಿಗೆ ಕೆಲಸ ಮಾಡುವದು ಕಷ್ಟದಾಯಕವಾಗಿದೆ. ಅವರ ಕುಟುಂಬದ ನಿರ್ವಹಣೆ ಮಾಡುಬೇಕಾದರೆ ಕಠಿಣ ಪರಿಸ್ಥಿತಿ ಎದುರಾಗುತ್ತಿದೆ.
ಕೃಷಿ ಇಲಾಖೆಯಲ್ಲಿ ಸಹಾಯಕರ ಹುದ್ದೆ ಇರುವದಿಲ್ಲ ರಾಜ್ಯದಲ್ಲಿ ಸುಮಾರು ೪೦ಲಕ್ಷ ಕೃಷಿಕರು ಇದ್ದಾರೆ ಅವರ ಹೊಲಗಳಿಗೆ ಹೋಗಿ ತಾಂತ್ರಿಕವಾಗಿ ಹೊಸ ಕೃಷಿ ವಿಧಾನಗಳನ್ನು ಅನುಸರಿವು ಕ್ರಮಗಳ ಕುರಿತು ಸರಕಾರದ ಯೋಜನೆಗಳನ್ನು ಅನುಷ್ಠಾನ ಹೇಗೆ ಮಾಡಬೇಕೆಂಬಿತ್ಯಾದಿ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡುತ್ತಾರೆ. ಆದರೆ ಇವರಿಗೆ ಕೃಷಿ ಇಲಾಖೆಯಿಂದ ಯಾವುದೇ ಭತ್ಯೆ ಸೌಲಭ್ಯವಿಲ್ಲ. ಮಣ್ಣು ಪರೀಕ್ಷೆ, ಬೀಜೋಪಚಾರ, ಕೀಟಗಳ ನಿಯಂತ್ರಣ ಸೇರಿದಂತೆ ಸಮಗ್ರ ಮಾಹಿತಿಯನ್ನುರೈತರಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿ ಮಾಹಿತಿ ನೀಡುತ್ತಾರೆ ಹಾಗೂ ಸರಕಾರ ಮತ್ತು ರೈತರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಾರೆ ಎಂದು ವಿವರಿಸಿದರು.
ಈಗಾಗಲೇ ಅನೇಕ ಬಾರಿ ವೇತನ ಹೆಚ್ಚಳಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಸರಕಾರದ ವತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿಂದಿನ ಸರಕಾರ ರಾಜ್ಯದಲ್ಲಿ ಇರುವ ರೈತ ಅನುವುಗಾರರ ಸಮಗ್ರ ಮಾಹಿತಿಯನ್ನು ತರೆಸಿಕೊಂಡು ಅವರಿಗಾಗಿ ಹೆಚ್ಚುವಾರಿ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಾಸ್ತಾವನೆ ಸಲ್ಲಿಸಿದೆ. ಆದರೆ ಆರ್ಥಿಕ ಇಲಾಖೆಯಿಂದ ಯಾವುದೇ ಮಾಹಿತಿ ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿ ಈ ಕುರಿತಿ ಕೃಷಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಯವರಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಲ್ಲವಾದರಿಂದ ಅನಿವಾರ್ಯವಾಗಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ.
ಜ. ೭ ರಂದು ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರು ರೈಲು ನಿಲ್ದಾಣದಿಂದ ಪ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ಮೂಲಕ ತೆರಳಿ ರಾಜ್ಯದ ಎಲ್ಲಾ ಎಲ್ಲಾ ರೈತ ಅನುವುಗಾರರೊಂದಿಗೆ ಅನಿರ್ಧಿಷ್ಠಾವದಿ ಧರಣಿ ನಡೆಸಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಅನುವುಗಾರರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಗದೀಶ ಜಿಡಗಾ, ರಾಜಶೇಖರ ಚಿಂಚೋಳಿ, ಸಿದ್ರಾಮ ಫಿರೋಜ್ ಪಟೇಲ, ಮಹಾಂತಪ್ಪ ಬಸಯ್ಯ ಸ್ವಾಮಿ ಹಾಗೂ ಇತರರು ಇದ್ದರು.