ದೋರನಹಳ್ಳಿಯಲ್ಲಿ 11 ನೇ ಶತಮಾನದ ಶಾಸನ ಪತ್ತೆ

0
61
  • ವರದಿಗಾರ ಬಸವರಾಜ ಸಿನ್ನೂರ.

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ೧೧ನೇ ಶತಮಾನದ ಶಾಸನವೊಂದು ಇತ್ತೀಚೆಗೆ  ಸಂಶೋಧಕರಾದ ಡಾ. ಎಂ.ಎಸ್. ಶಿರವಾಳರವರು ಪತ್ತೆ ಮಾಡಿದ್ದಾರೆ.

ದೋರನಹಳ್ಳಿಯ ಮಲ್ಲಿಕಾರ್ಜುನ ಗುಡಿಯ ಅಂಗಳದಲ್ಲಿ ಮಣ್ಣಿನೊಳಗೆ ಹೂತು ಹೋಗಿದ್ದ ಕೆಂಪು ಬಣ್ಣದ ಗ್ರಾನೈಟ್ ದಂತೆ ಕಾಣಿಸುತ್ತಿರುವ ೪ ಅಡಿ ಉದ್ದ ೩ ಅಡಿ ಅಗಲವಿರುವ ಹಾಗೂ ಕನ್ನಡ ಭಾಷಾ ಲಿಪಿಯಲ್ಲಿರುವ ಇದು ೧೧ ನೇ ಶತಮಾನದ ಶಾಸನ ಆಗಿದೆ ಎಂದು ಶಾಸನಗಳ ಸಂಶೋಧಕರಾದ ಡಾ:ಎಂ.ಎಸ್. ಶಿರವಾಳ ಅವರು ಹೇಳಿದ್ದಾರೆ.

Contact Your\'s Advertisement; 9902492681

ದೋರನಹಳ್ಳಿಯ ರಾಮೇಶ್ವರ ದೇವರಿಗೆ ಚಿತ್ರಭಾನು ಸಂವತ್ಸರದ ವೈಶಾಖ ಬಹುಳ ಅಮಾವಾಸ್ಯೆಯ ಗ್ರಹಣದಂದು ಸಹೋದರರಿಬ್ಬರು ರಾಮೇಶ್ವರ ದೇವಸ್ಥಾನದ ಪಾರುಪತ್ಯಗಾರರಿಗೆ ಕೆಲವೊಂದು ದತ್ತಿ ದಾನಗಳನ್ನು ಶಿವಪೂಜೆ ಹೆಸರಿನಲ್ಲಿ ಕೊಟ್ಟಿರುವುದನ್ನು ಶಾಶ್ವತಗೊಳಿಸಲು ಈ ಶಾಸನದಲ್ಲಿ ಹಳೆಗನ್ನಡ ಲಿಪಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಂಶೋಧಕರಾದ ಡಾ: ಎಂ.ಎಸ್.ಶಿರವಾಳ  ಸಂಶೋಧಿಸಿ ತಿಳಿಸಿದ್ದಾರೆ.

ಇಂಥ ಶಿಲಾಶಾಸನಗಳು ಹೈದರಾಬಾದ್ ಕರ್ನಾಟಕದಲ್ಲಿ ಅದು ಯಾದಗಿರಿ ಜಿಲ್ಲೆಯಲ್ಲಿ ಬಹಳ ಇರುವುದರಿಂದ ಇವುಗಳ ಸಂರಕ್ಷಣೆಗಾಗಿ ಪುರಾತತ್ವ ಇಲಾಖೆ ಮುಂದಾದಾಗ ನಮ್ಮ ದೇಶದ ಸಂಸ್ಕೃತಿ ಇತಿಹಾಸವನ್ನು ಉಳಿಸಿ ಬೆಳೆಸಿದಂತಾಗುತ್ತದೆ ಆದ್ದರಿಂದ ಸರಕಾರ ಇಂಥ ಕೆಲಸಗಳಿಗೆ ಮುಂದಾಗಬೇಕು ಎಂದು ಸಂಶೋಧಕರು ಮನವಿ ಮಾಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here